ಶೇಖ್ ಹಸೀನಾರನ್ನು ಢಾಕಾಗೆ ವಾಪಸ್ ಕಳುಹಿಸಿ; ಭಾರತಕ್ಕೆ ಬಾಂಗ್ಲಾದೇಶ ಸರ್ಕಾರ ಪತ್ರ
- new waves technology
- Dec 23, 2024
- 1 min read
ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ 77 ವರ್ಷದ ಹಸೀನಾ ಅವರು ಆಗಸ್ಟ್ 5 ರಂದು ದೇಶವನ್ನು ಭಾರತಕ್ಕೆ ಪಲಾಯನ ಮಾಡಿದ್ದರು.

ಢಾಕಾ: ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್ ಕಳುಹಿಸುವಂತೆ ಕೋರಿ ಭಾರತಕ್ಕೆ ರಾಜತಾಂತ್ರಿಕ ಪತ್ರವನ್ನು ಕಳುಹಿಸಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ತಿಳಿಸಿದೆ.
ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ 77 ವರ್ಷದ ಹಸೀನಾ ಅವರು ಆಗಸ್ಟ್ 5 ರಂದು ದೇಶವನ್ನು ಭಾರತಕ್ಕೆ ಪಲಾಯನ ಮಾಡಿದ್ದರು. ಪ್ರತಿಭಟನೆ ಉಂಟಾದ ಹಿಂಸಾಚಾರಾಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ICT) ಹಸೀನಾ ಸೇರಿದಂತೆ ಹಲವಾರು ಮಾಜಿ ಸಚಿವರು, ಸಲಹೆಗಾರರು ಮತ್ತು ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಿದ್ದು, ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.
'ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಶೇಖ್ ಹಸೀನಾ ಅವರು ಢಾಕಾಗೆ ಮರಳಬೇಕು ಎಂದು ಬಾಂಗ್ಲಾದೇಶವು ಬಯಸುತ್ತದೆ. ಹೀಗಾಗಿ, ನಾವು ಭಾರತ ಸರ್ಕಾರಕ್ಕೆ ಮೌಖಿಕ (ರಾಜತಾಂತ್ರಿಕ ಸಂದೇಶ) ಕಳುಹಿಸಿದ್ದೇವೆ' ಎಂದು ವಿದೇಶಾಂಗ ಸಚಿವ ತೌಹಿದ್ ಹುಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗೃಹ ಸಚಿವ ಜಹಾಂಗೀರ್ ಆಲಂ ತಾವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕ್ರಿಯೆಗಳು ಪ್ರಗತಿಯಲ್ಲಿರುವುದಾಗಿ ತಿಳಿಸಿದ್ದಾರೆ.
ಢಾಕಾ ಮತ್ತು ನವದೆಹಲಿ ನಡುವೆ ಹಸ್ತಾಂತರ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿದೆ. ಈ ಒಪ್ಪಂದದ ಅಡಿಯಲ್ಲಿ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆತರಬಹುದು ಎಂದು ಆಲಂ ಹೇಳಿದ್ದಾರೆ.
Comments