top of page

ಶ'ಪನಾಮ ಕಾಲುವೆ ಬಿಟ್ಟುಕೊಟ್ಟಿದ್ದು ದೊಡ್ಡ ಮೂರ್ಖತನದ ನಿರ್ಧಾರ': ಚೀನಾ ಕಬಳಿಸಲು ಯತ್ನಿಸುತ್ತಿದೆ; ಟ್ರಂಪ್

  • Writer: new waves technology
    new waves technology
  • Jul 2
  • 2 min read
ಅಮೆರಿಕವು ಪನಾಮ ಕಾಲುವೆಯ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟ ತಕ್ಷಣವೇ, ಪನಾಮ ಸರ್ಕಾರವು ಹಡಗುಗಳ ಸಂಚಾರ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿತು. ಇದರಿಂದಾಗಿ ಯಾವುದೇ ಟ್ರಾಫಿಕ್ ಕಳೆದುಕೊಳ್ಳದೆ ಪನಾಮಾ ದೇಶವು ಭಾರೀ ಪ್ರಮಾಣದ ಹಣವನ್ನು ಗಳಿಸಿತು. ಅಮೆರಿಕ ದೊಡ್ಡ ಆದಾಯವನ್ನು ಕಳೆದುಕೊಂಡಿತು.
ಅಮೆರಿಕವು ಪನಾಮ ಕಾಲುವೆಯ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟ ತಕ್ಷಣವೇ, ಪನಾಮ ಸರ್ಕಾರವು ಹಡಗುಗಳ ಸಂಚಾರ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿತು. ಇದರಿಂದಾಗಿ ಯಾವುದೇ ಟ್ರಾಫಿಕ್ ಕಳೆದುಕೊಳ್ಳದೆ ಪನಾಮಾ ದೇಶವು ಭಾರೀ ಪ್ರಮಾಣದ ಹಣವನ್ನು ಗಳಿಸಿತು. ಅಮೆರಿಕ ದೊಡ್ಡ ಆದಾಯವನ್ನು ಕಳೆದುಕೊಂಡಿತು.

ಪನಾಮ ಕಾಲುವೆಯ (Panama Canal) ಮೇಲಿನ ನಿಯಂತ್ರಣವನ್ನು ಪನಾಮಗೆ ಹಸ್ತಾಂತರಿಸಿದ ಅಮೆರಿಕದ ಹಿಂದಿನ ನಿರ್ಧಾರವನ್ನು "ದೊಡ್ಡ ಮೂರ್ಖತನ" ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೀಕಿಸಿದ್ದಾರೆ. ಅಲ್ಲದೆ, ಈ ಮಹತ್ವದ ಜಲಮಾರ್ಗದ ಮೇಲೆ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಟ್ರಂಪ್, "ಪನಾಮಾ ಕಾಲುವೆಯನ್ನು ಚೀನಾ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ.

ಉತ್ತರ ಡಕೋಟಾದ ಮೆಡೋರಾದಲ್ಲಿರುವ ಥಿಯೋಡೋರ್ ರೂಸ್‌ವೆಲ್ಟ್ ಅಧ್ಯಕ್ಷೀಯ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, 1977ರ ಟೊರ್ರಿಜೋಸ್–ಕಾರ್ಟರ್ ಒಪ್ಪಂದ (Torrijos-Carter Treaties) ಮೂಲಕ ಪನಾಮ ಕಾಲುವೆಯ ನಿಯಂತ್ರಣವನ್ನು ಪನಾಮಗೆ ಹಸ್ತಾಂತರಿಸಿದ್ದನ್ನು ಟೀಕಿಸಿದ್ದಾರೆ.

ಅಮೆರಿಕವು ಪನಾಮ ಕಾಲುವೆಯ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟ ತಕ್ಷಣವೇ, ಪನಾಮ ಸರ್ಕಾರವು ಹಡಗುಗಳ ಸಂಚಾರ ಶುಲ್ಕವನ್ನು (Transit Fees) ನಾಲ್ಕು ಪಟ್ಟು ಹೆಚ್ಚಿಸಿತು. ಇದರಿಂದಾಗಿ ಯಾವುದೇ ಟ್ರಾಫಿಕ್ ಕಳೆದುಕೊಳ್ಳದೆ ಪನಾಮಾ ದೇಶವು ಭಾರೀ ಪ್ರಮಾಣದ ಹಣವನ್ನು ಗಳಿಸಿತು. ಅಮೆರಿಕ ದೊಡ್ಡ ಆದಾಯವನ್ನು ಕಳೆದುಕೊಂಡಿತು. ಅಮೆರಿಕಾ ಕೈಗೊಂಡ ನಿರ್ಧಾರ ಎಷ್ಟು ದೊಡ್ಡ ಮೂರ್ಖತನವಾಗಿತ್ತು?" ಎಂದು ಪ್ರಶ್ನಿಸಿದರು.

ಅಲ್ಲದೆ, "ಈಗ ಚೀನಾ ಪನಾಮಾ ಕಾಲುವೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಅದು ನಡೆಯಲು ನಾವು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಚೀನಾಗೆ ಈ ಜಲಮಾರ್ಗದ ಮೇಲೆ ಹಿಡಿತ ಸಾಧಿಸಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಟ್ರಂಪ್ ಅಮೆರಿಕದ ಜನ್ಮಸಿದ್ಧ ಪೌರತ್ವ (Birthright Citizenship) ಕುರಿತಂತೆಯೂ ಸುಪ್ರೀಂ ಕೋರ್ಟ್‌ನ ನಿಲುವನ್ನು ಟೀಕಿಸಿದರು.

ಈ ನೀತಿ ಮೂಲತಃ ಶ್ರೀಮಂತ ವಿದೇಶಿಗರ ಮಕ್ಕಳಿಗಾಗಿ ಅಲ್ಲ, ಗುಲಾಮಗಿರಿಯ ಕಾಲದ ಬಳಿಕ ಜನಿಸಿದ ಗುಲಾಮರ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪಿಸಲಾಗಿತ್ತು ಎಂದು ಅವರು ವಾದಿಸಿದರು.

"ಜನ್ಮಸಿದ್ಧ ಪೌರತ್ವ ಎಂಬುದು ಶ್ರೀಮಂತ ವಿದೇಶಿಗರ ಮಕ್ಕಳಿಗಾಗಿ ಉದ್ದೇಶಿತವಾಗಿರಲಿಲ್ಲ. ಅದು ಅಂತರ್ಯುದ್ಧದ ನಂತರ ಗುಲಾಮರ ಮಕ್ಕಳಿಗೆ ಪೌರತ್ವದ ಹಕ್ಕು ನೀಡಲು ರೂಪುಗೊಂಡಿತ್ತು. ಆದರೆ, ಇಂದು ಶ್ರೀಮಂತರು ಖಾಸಗಿ ವಿಮಾನಗಳಲ್ಲಿ ಬಂದು ತಮ್ಮ ಮಕ್ಕಳಿಗೆ ಪೌರತ್ವ ಪಡೆಯುತ್ತಿದ್ದಾರೆ. ಇದು ಆ ಕಾನೂನಿನ ಉದ್ದೇಶವೇ ಅಲ್ಲ" ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತಪ್ಪು ತೀರ್ಪು ನೀಡಿದೆ ಎಂಬುದು ತಮ್ಮ ನಂಬಿಕೆ ಎಂದು ಹೇಳಿದ ಅವರು, "ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದರ ಜೊತೆಗೆ, ಇತ್ತೀಚೆಗೆ ಅಮೆರಿಕದ ಸುಪ್ರೀಂ ಕೋರ್ಟ್ ಅಧ್ಯಕ್ಷರ ಅಧಿಕಾರವನ್ನು ವಿಸ್ತರಿಸುವಂತೆ ನೀಡಿದ ತೀರ್ಪನ್ನು ಟ್ರಂಪ್ ಸ್ವಾಗತಿಸಿದರು.

ಕಾರ್ಯಾಂಗದ ವಿವಿಧ ಏಜೆನ್ಸಿಗಳ ಮುಖ್ಯಸ್ಥರನ್ನು ವಜಾಗೊಳಿಸುವ ಅಧ್ಯಕ್ಷರ ಅಧಿಕಾರವನ್ನು ಬಲಪಡಿಸಿದ ಸುಪ್ರೀಂ ಕೋರ್ಟ್ ತೀರ್ಪು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

"ಸುಪ್ರೀಂ ಕೋರ್ಟ್ ಎರಡು ದಿನಗಳ ಹಿಂದೆ ಅಧ್ಯಕ್ಷರ ಅಧಿಕಾರವನ್ನು ಮರಳಿ ನೀಡುವ ಐತಿಹಾಸಿಕ ತೀರ್ಪು ನೀಡಿದೆ. ಸುಮಾರು 100 ವರ್ಷಗಳಿಂದ ವಿವಾದದಲ್ಲಿದ್ದ ವಿಷಯದಲ್ಲಿ ನಮಗೆ ಜಯ ಸಿಕ್ಕಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಅಗತ್ಯವಾಗಿರುವ ಈ ಸಂದರ್ಭದಲ್ಲಿ ಇದು ಅತ್ಯಂತ ಪ್ರಮುಖ ತೀರ್ಪು" ಎಂದು ತಿಳಿಸಿದ್ದಾರೆ.

ಪನಾಮಾ ಕಾಲುವೆಯನ್ನು 1977ರ ಟೊರ್ರಿಜೋಸ್–ಕಾರ್ಟರ್ ಒಪ್ಪಂದದ ಅನ್ವಯ ಪನಾಮಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದ್ದು, 1999ರಲ್ಲಿ ಪನಾಮಾ ದೇಶವು ಕಾಲುವೆಯ ಸಂಪೂರ್ಣ ನಿಯಂತ್ರಣವನ್ನು ಅಧಿಕೃತವಾಗಿ ವಹಿಸಿಕೊಂಡಿತ್ತು.

Comments


bottom of page