top of page

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕೊನೆಯ ದಿನ ಕ್ಷಮೆಯಾಚಿಸಿದ ಡಿವೈ ಚಂದ್ರಚೂಡ್!

  • Writer: new waves technology
    new waves technology
  • Nov 8, 2024
  • 1 min read

ಕರ್ತವ್ಯ ನಿರ್ವಹಣೆ ವೇಳೆ ನನ್ನಿಂದ ಯಾರ ಮನಸ್ಸಿಗೆ ನೋವುಂಟು ಮಾಡಿದ್ದರೆ ಕ್ಷಮಿಸಿ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕೊನೆಯ ದಿನ ವಿಚಾರಣೆ ನಡೆಸಿದ ಡಿವೈ ಚಂದ್ರಚೂಡ್ ಹೇಳಿದ್ದಾರೆ.












ನವೆಂಬರ್ 8 ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ಅವರಿಗೆ ಕೊನೆಯ ದಿನವಾಗಿತ್ತು.

ಕರ್ತವ್ಯ ನಿರ್ವಹಣೆಯ ಕೊನೆಯ ದಿನವಾದ ಶುಕ್ರವಾರ ಸಹದ್ಯೋಗಿಗಳು ಹಾಗೂ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುವವರ ಜೊತೆ ಬೆರೆತರು.

ನಿನ್ನೆ ಸಂಜೆ ಸಹದ್ಯೋಗಿಯೊಬ್ಬರು ನಾಳೆ ಯಾವಾಗ ಕರ್ತವ್ಯಕ್ಕೆ ವಿದಾಯ ಹೇಳುತ್ತೀರಿ ಎಂದು ಕೇಳಿದರು. ನಾನು ಮಧ್ಯಾಹ್ನ 2 ಗಂಟೆಗೆ ಎಂದು ಹೇಳಿದೆ. ಏಕೆಂದರೆ ನಂತರ ತುಂಬಾ ಕೆಲಸಗಳು ಬಾಕಿ ಇವೆ. ಅದ್ಭುತವಾದ ನ್ಯಾಯಮೂರ್ತಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

ನಾವು ಇಲ್ಲಿ ಕೆಲಸ ಮಾಡಲು ಯಾತ್ರಿಗಳ ರೀತಿ ಬಂದು ಹೋಗುತ್ತೇವೆ. ಸಿಕ್ಕ ಅವಕಾಶದಲ್ಲಿ ಹಲವು ಪ್ರಕರಣಗಳನ್ನು ಬಗೆಹರಿಸುವ ಒತ್ತಡ ನಮ್ಮ ಮೇಲೆ ಇರುತ್ತದೆ. ಈ ಸಂದರ್ಭದಲ್ಲಿ ಯಾರ ಮನಸ್ಸಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಿ ಎಂದು ಚಂದ್ರಚೂಡ್ ಹೇಳಿದರು.


Comments


bottom of page