top of page

ಹಿರಿಯ ನಾಗರಿಕರೇ ಎಚ್ಚರ; ವಂಚನೆಗೆ ಬಲಿಯಾಗದಿರಿ, ಹಣ-ಆಸ್ತಿ ಕಳೆದುಕೊಳ್ಳದಿರಿ..

  • Writer: new waves technology
    new waves technology
  • Jun 30
  • 2 min read

ಹಿರಿಯ ನಾಗರಿಕರ ವಿರುದ್ಧದ ಆರ್ಥಿಕ ವಂಚನೆಗಳು ವಿಶ್ವಾದ್ಯಂತ ಹೆಚ್ಚುತ್ತಿದ್ದು, ಭಾರಿ ನಷ್ಟವನ್ನುಂಟುಮಾಡುತ್ತಿವೆ. ಶೇ 90 ಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಕೇರ್ ಟೇಕರ್ಸ್ ಮತ್ತು ಅವರ ಸ್ವಂತ ಕುಟುಂಬದಿಂದಲೇ ವಂಚನೆಯಾಗುತ್ತದೆ.

ಹಿರಿಯ ನಾಗರಿಕರು ಬೇಗ ನಂಬುವುದು, ಹೆಚ್ಚಿನ ಉಳಿತಾಯ ಹೊಂದಿರುವುದು ಮತ್ತು ಸೀಮಿತ ತಂತ್ರಜ್ಞಾನ ಜ್ಞಾನದ ಕಾರಣದಿಂದಾಗಿ ಹಣಕಾಸಿನ ವಂಚನೆಗಳಿಗೆ ಪ್ರಮುಖ ಗುರಿಯಾಗುತ್ತಾರೆ. ವಂಚಕರು ವಿವಿಧ ರೀತಿಯಲ್ಲಿ ವಂಚನೆಯಲ್ಲಿ ತೊಡಗುತ್ತಾರೆ. ಇದು ಆರ್ಥಿಕ ಮತ್ತು ಭಾವನಾತ್ಮಕ ಹಾನಿಯನ್ನುಂಟುಮಾಡುತ್ತದೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುವ ಸಾಮಾನ್ಯ ವಂಚನೆಗಳ ಕುರಿತು ತಿಳಿಯೋಣ...

ಅಧಿಕಾರಿಗಳ ಸೋಗಿನಲ್ಲಿ ವಂಚನೆ: ವಂಚಕರು ಅಧಿಕಾರದಲ್ಲಿರುವ ವ್ಯಕ್ತಿಗಳಂತೆ (ಉದಾಹರಣೆಗೆ, ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಪ್ರತಿನಿಧಿಗಳು ಅಥವಾ ಪೊಲೀಸರು) ಅಥವಾ ಪ್ರೀತಿಪಾತ್ರರಂತೆ (ಉದಾಹರಣೆಗೆ, ಸಂಕಷ್ಟದಲ್ಲಿರುವ ಮೊಮ್ಮಕ್ಕಳು) ನಟಿಸುತ್ತಾರೆ. ಜಾಮೀನು ಅಥವಾ ವೈದ್ಯಕೀಯ ಬಿಲ್‌ಗಳಂತಹ ತುರ್ತು ಪರಿಸ್ಥಿತಿಗಳಿಗೆ ಹಣದ ಅಗತ್ಯವಿರುವ ಸಂಬಂಧಿಕರಂತೆ ನಟಿಸುತ್ತಾರೆ. ಪರಿಶೀಲನೆಯನ್ನು ತಪ್ಪಿಸಲು ಗೌಪ್ಯತೆ ಕಾಪಾಡುವಂತೆ ಮನವಿ ಮಾಡುತ್ತಾರೆ. ವಂಚಕರು ಆದಾಯ ತೆರಿಗೆ ಅಥವಾ ಟೆಲಿಕಾಂನಂತಹ ಇಲಾಖೆಗಳ ಅಧಿಕಾರಿಗಳಂತೆ, ದಂಡ ಪಾವತಿಸುವಂತೆ ಕೇಳುತ್ತಾರೆ.

ಟೆಕ್ ಸಪೋರ್ಟ್ ವಂಚನೆಗಳು: ವಂಚಕರು ಟೆಕ್ ಕಂಪನಿಯ ಪ್ರತಿನಿಧಿಗಳಂತೆ ನಟಿಸಿ, ಹಿರಿಯ ನಾಗರಿಕರ ಸಾಧನಕ್ಕೆ ವೈರಸ್ ದಾಳಿಯಾಗಿದೆ ಅಥವಾ ದುರಸ್ತಿ ಅಗತ್ಯವಿದೆ ಎಂದು ಹೇಳಿಕೊಳ್ಳುತ್ತಾರೆ. ಅವರು ರಿಮೋಟ್ ಮೂಲಕ ಕಂಟ್ರೋಲ್ ಮಾಡಲು ಮುಂದಾಗುತ್ತಾರೆ, ಮಾಲ್‌ವೇರ್ ಅನ್ನು ಸ್ಥಾಪಿಸುತ್ತಾರೆ ಅಥವಾ ನಕಲಿ ಸೇವೆಗಳಿಗೆ ಶುಲ್ಕ ವಿಧಿಸುತ್ತಾರೆ. ತಂತ್ರಜ್ಞಾನದ ಪರಿಚಯವಿಲ್ಲದಿರುವಿಕೆಯಿಂದ ಹಿರಿಯ ನಾಗರಿಕರನ್ನು ನಕಲಿ ಟೆಕ್ ಸಪೋರ್ಟ್ ಕರೆಗಳು ಅಥವಾ ಫಿಶಿಂಗ್ ಇಮೇಲ್‌ಗಳ ಮೂಲಕ ಗುರಿಯಾಗಿಸಿಕೊಳ್ಳಲಾಗುತ್ತದೆ.

ಪ್ರಣಯ ವಂಚನೆಗಳು: ವಂಚಕರು ಆನ್‌ಲೈನ್ ಸಂಬಂಧಗಳ ಮೂಲಕ ಮೊದಲಿಗೆ ನಂಬಿಕೆ ಗಳಿಸುತ್ತಾರೆ. ನಂತರ ತುರ್ತು ಪರಿಸ್ಥಿತಿಗಳಿಗೆ ಅಥವಾ ಪ್ರಯಾಣಕ್ಕಾಗಿ ಹಣ ನೀಡುವಂತೆ ವಿನಂತಿಸುತ್ತಾರೆ. ಈ ವಂಚನೆಗಳು ಹಿರಿಯರ ಭಾವನಾತ್ಮಕ ದುರ್ಬಲತೆಗಳನ್ನು ಬಳಸಿಕೊಳ್ಳುತ್ತವೆ.

ಹೂಡಿಕೆ ವಂಚನೆಗಳು: ವಂಚಕರು ಹಿರಿಯ ನಾಗರಿಕರ ನಿವೃತ್ತಿಯಿಂದ ಬಂದ ಉಳಿತಾಯವನ್ನು ಗುರಿಯಾಗಿಸಿಕೊಂಡು ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಆದಾಯದ ಭರವಸೆ ನೀಡುತ್ತಾರೆ. ಪೋನ್ಜಿ ಯೋಜನೆಗಳು ಅಥವಾ ನಕಲಿ ಹೂಡಿಕೆ ಅವಕಾಶಗಳ ಬಗ್ಗೆ ಹೇಳುತ್ತಾರೆ. ಕರೆಗಳು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಹಿರಿಯ ನಾಗರಿಕರನ್ನು ಆಕರ್ಷಿಸಲಾಗುತ್ತದೆ. ಧಾರ್ಮಿಕ ಗುಂಪುಗಳಂತಹ ವಿಶ್ವಾಸಾರ್ಹ ಸಮುದಾಯಗಳ ಭಾಗವೆಂದು ನಟಿಸುವ ಮೂಲಕ ಅಥವಾ ಟೈಮ್‌ಶೇರ್‌ಗಳಂತಹ ಪ್ರಲೋಭನಗೊಳಿಸುವ ಡೀಲ್‌ಗಳನ್ನು ನೀಡುವ ಮೂಲಕ ಹಿರಿಯರನ್ನು ಗುರಿಯಾಗಿಸಿಕೊಳ್ಳುತ್ತಾರೆ.

ಮೆಡಿಕೇರ್/ಆರೋಗ್ಯ ಹಗರಣಗಳು: ಆರೋಗ್ಯ ಹಗರಣಗಳು ನಕಲಿ ಚಿಕಿತ್ಸೆಗಳು ಅಥವಾ ಉತ್ಪನ್ನಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಹಿರಿಯರ ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟು ವಂಚನೆ ಮಾಡಲಾಗುತ್ತದೆ.

ಲಾಟರಿ/ಸ್ವೀಪ್‌ಸ್ಟೇಕ್ಸ್ ಹಗರಣಗಳು: ಇಂತಹ ವಂಚನೆಗಳು ಫೋನ್ ಕರೆಗಳು ಅಥವಾ ನಕಲಿ ಲಾಟರಿ ಇಮೇಲ್‌ಗಳ ಮೂಲಕ ನಡೆಯುತ್ತವೆ.

ಆಸ್ತಿ ಸಂಬಂಧಿತ ವಂಚನೆಗಳು: ವಂಚಕರು ನಕಲಿ ದಾಖಲೆ ಸೃಷ್ಟಿಸುತ್ತಾರೆ ಅಥವಾ ಹಿರಿಯ ನಾಗರಿಕರನ್ನು ಆಸ್ತಿ ಹಕ್ಕುಗಳಿಗೆ ಸಹಿ ಮಾಡುವಂತೆ ಒತ್ತಾಯಿಸುತ್ತಾರೆ. ಈ ವಂಚನೆಗಳು ಹಿರಿಯ ನಾಗರಿಕರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತವೆ. ಇತ್ತೀಚೆಗಷ್ಟೇ ಹಿರಿಯ ನಾಗರಿಕರೊಬ್ಬರು 3 ಆಸ್ತಿಗಳನ್ನು ಕಳೆದುಕೊಂಡಿದ್ದಾರೆ.

ದತ್ತಿ ಹಗರಣಗಳು: ವಂಚಕರು ಹಿರಿಯ ನಾಗರಿಕರ ಔದಾರ್ಯವನ್ನು ದುರುಪಯೋಗಪಡಿಸಿಕೊಂಡು ನಕಲಿ ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡುವಂತೆ ಕೇಳುತ್ತಾರೆ. ಈ ಮೂಲಕ ಹಿರಿಯ ನಾಗರಿಕರಿಂದ ದೇಣಿಗೆ ಹೆಸರಲ್ಲಿ ಹಣ ಪಡೆದು ಮೋಸ ಮಾಡುತ್ತಾರೆ.

ರೋಬೋ-ಕರೆಗಳು ಮತ್ತು ಫಿಶಿಂಗ್: ಸ್ವಯಂಚಾಲಿತ ಕರೆಗಳು ಅಥವಾ ಇಮೇಲ್‌ಗಳು ಹಿರಿಯ ನಾಗರಿಕರನ್ನು ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಅಥವಾ ಪಾವತಿಸುವಂತೆ ಕೇಳುತ್ತವೆ. ನಕಲಿ ಸಂಸ್ಥೆಗಳಿಂದ ಬರುವ ರೋಬೋ-ಕರೆಗಳು ಹಿರಿಯ ನಾಗರಿಕರ ಮೇಲೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರುತ್ತವೆ.

ಶೇ 90 ಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರ ವಂಚನೆಗಳು ಕೇರ್ ಟೇಕರ್ಸ್ ಮತ್ತು ಅವರ ಸ್ವಂತ ಕುಟುಂಬದಿಂದ ಮಾಡಲ್ಪಡುತ್ತವೆ!

ಹಿರಿಯ ನಾಗರಿಕರೇ ಏಕೆ ಸುಲಭ ಟಾರ್ಗೆಟ್

ನಂಬಿಕೆ ಮತ್ತು ಸಭ್ಯತೆ: ಹಿರಿಯ ನಾಗರಿಕರು ಸಾಮಾನ್ಯವಾಗಿ ಅಧಿಕಾರದಲ್ಲಿರುವ ವ್ಯಕ್ತಿಗಳನ್ನು ಅಥವಾ ಪರಿಚಯಸ್ಥರನ್ನು ನಂಬುತ್ತಾರೆ. ಇದರಿಂದಾಗಿ ಅವರು ವಂಚನೆಗಳನ್ನು ಪ್ರಶ್ನಿಸುವ ಸಾಧ್ಯತೆ ಕಡಿಮೆಯಿರುತ್ತದೆ.

ಹಣಕಾಸು ಉಳಿತಾಯ: ಹಲವರಿಗೆ ಹೆಚ್ಚಿನ ಉಳಿತಾಯ, ಸ್ವಂತ ಮನೆ ಅಥವಾ ಉತ್ತಮ ಆದಾಯವಿರುತ್ತದೆ. ಹೀಗಾಗಿ, ವಂಚಕರು ಅವರನ್ನು ಸುಲಭವಾಗಿ ಟಾರ್ಗೆಟ್ ಮಾಡುತ್ತಾರೆ.

ತಾಂತ್ರಿಕ ಅನನುಭವ: ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೊಂದಿಗಿನ ಸೀಮಿತ ಪರಿಚಯದಿಂದಾಗಿ ಆನ್‌ಲೈನ್ ಮತ್ತು ಫೋನ್ ವಂಚನೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಮಾಜಿಕ ಪ್ರತ್ಯೇಕತೆ: ಒಂಟಿಯಾಗಿರುವ ಹಿರಿಯ ನಾಗರಿಕರು ರೊಮ್ಯಾನ್ಸ್ ಅಥವಾ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಡುವ ವಂಚನೆಗಳಿಗೆ ಹೆಚ್ಚು ಗುರಿಯಾಗುತ್ತಾರೆ.

ಅರಿವಿನ ಕ್ಷೀಣತೆ: ವಯಸ್ಸಿಗೆ ಸಂಬಂಧಿಸಿದ ಮಾನಸಿಕ ಕುಸಿತವು ಕೆಲವು ಹಿರಿಯ ನಾಗರಿಕರ ಸ್ಪಷ್ಟವಾಗಿ ಯೋಚಿಸುವ ಅಥವಾ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರು ವಂಚನೆಗೆ ಹೆಚ್ಚು ಗುರಿಯಾಗುತ್ತಾರೆ.

ಹೇಳಿಕೊಳ್ಳಲು ಹಿಂಜರಿಕೆ: ನಾಚಿಕೆ, ಸ್ವಾತಂತ್ರ್ಯ ಕಳೆದುಕೊಳ್ಳುವ ಭಯ ಅಥವಾ ವರದಿ ಮಾಡುವ ಚಾನೆಲ್‌ಗಳ ಬಗ್ಗೆ ಜ್ಞಾನ ಇಲ್ಲದಿರುವುದು ಮುಖ್ಯ ಕಾರಣವಾಗುತ್ತದೆ. ಜಾಗತಿಕವಾಗಿ, ಅನೇಕ ಹಗರಣಗಳು ವರದಿಯಾಗದೇ ಉಳಿಯುತ್ತವೆ.

ಹಿರಿಯ ನಾಗರಿಕರ ವಿರುದ್ಧದ ಆರ್ಥಿಕ ವಂಚನೆಗಳು ವಿಶ್ವಾದ್ಯಂತ ಹೆಚ್ಚುತ್ತಿದ್ದು, ಭಾರಿ ನಷ್ಟವನ್ನುಂಟುಮಾಡುತ್ತಿವೆ. ಭಾರತದಲ್ಲಿ, ಡಿಜಿಟಲ್ ವೇದಿಕೆಗಳ ಬೆಳವಣಿಗೆ ಮತ್ತು ಅಧಿಕಾರದ ಬಗ್ಗೆ ಸಾಂಸ್ಕೃತಿಕ ಗೌರವದಂತಹ ಅಂಶಗಳು ಹಿರಿಯ ನಾಗರಿಕರನ್ನು ಹೆಚ್ಚು ದುರ್ಬಲರನ್ನಾಗಿ ಮಾಡುತ್ತವೆ. ಅವರನ್ನು ರಕ್ಷಿಸಲು, ಕುಟುಂಬಗಳು ಹಿರಿಯ ನಾಗರಿಕರಿಗೆ ಶಿಕ್ಷಣ ನೀಡಬೇಕು, ಎಚ್ಚರಿಕೆಯಿಂದಿರಬೇಕು, ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಬೇಕು ಮತ್ತು ಬಲವಾದ ಬೆಂಬಲ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಯಾವುದೇ ಶಂಕಿತ ಹಗರಣವನ್ನು ತಕ್ಷಣವೇ ವರದಿ ಮಾಡಬೇಕು.

Comments


bottom of page