15 ಮಿಲಿಯನ್ subscribers; YouTube Channel ತೆರೆದ ಕೆಲವೇ ಗಂಟೆಗಳಲ್ಲಿ ದಾಖಲೆಗಳ ಧೂಳಿಪಟ ಮಾಡಿದ Cristiano Ronaldo
- new waves technology
- Oct 24, 2024
- 1 min read
ಪೋರ್ಚುಗಲ್ ಫುಟ್ಬಾಲ್ ತಂಡದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ 'UR Cristiano' ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

ನವದೆಹಲಿ: ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಯೂಟ್ಯೂಬ್ ಗೆ ಕಾಲಿಟ್ಟಿದ್ದು ಚಾನೆಲ್ ತೆರೆದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 15 ಮಿಲಿಯನ್ ಗೂ ಅಧಿಕ subscribersಗಳನ್ನು ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಹೌದು.. ಸುಮಾರು ಎರಡು ದಶಕಗಳ ಕಾಲ ಫುಟ್ಬಾಲ್ನಲ್ಲಿ ಮಿಂಚಿದ ರೊನಾಲ್ಡೋ ಈಗ ಮೈದಾನದ ಹೊರಗೂ ನೂತನ ದಾಖಲೆ ಬರೆದಿದ್ದಾರೆ. ಪೋರ್ಚುಗಲ್ ಫುಟ್ಬಾಲ್ ತಂಡದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ 'UR Cristiano' ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.
X ಸೈಟ್‌ನಲ್ಲಿ ರೊನಾಲ್ಡೊ ಇದನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ, 15 ಮಿಲಿಯನ್ ಅಭಿಮಾನಿಗಳು ಯೂಟ್ಯೂಬ್ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿದ್ದಾರೆ. ರೊನಾಲ್ಡೊ ಕಿರು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದು, ಗೆಳತಿ ಮತ್ತು ಮಕ್ಕಳೊಂದಿಗೆ ವಿಡಿಯೋ ಮಾಡಿ ರೊನಾಲ್ಡೋ ಪೋಸ್ಟ್ ಮಾಡಿದ್ದಾರೆ.
ಅತೀ ಹೆಚ್ಚು ಗೋಲು: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೋ
ಯೂಟ್ಯೂಬ್ ಚಾನೆಲ್ ಆರಂಭಿಸಿದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮೊದಲ ಎರಡು ಗಂಟೆಗಳಲ್ಲೇ ರೊನಾಲ್ಡೊ ವಿಶ್ವ ದಾಖಲೆ ಬರೆದಿದ್ದು, ಯೂಟ್ಯೂಬ್ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ್ದು ಮಾತ್ರವಲ್ಲ, 24 ಗಂಟೆಗಳಲ್ಲಿ ರೊನಾಲ್ಡೊ ಅವರ ಯೂಟ್ಯೂಬ್ ಖಾತೆಯ ಚಂದಾದಾರರ ಸಂಖ್ಯೆ 10 ಮಿಲಿಯನ್‌ಗೆ ತಲುಪಿದೆ, ಇದು ಮತ್ತೊಂದು ವಿಶ್ವ ದಾಖಲೆಯಾಗಿದೆ.
ಯೂಟ್ಯೂಬ್‌ನಲ್ಲಿ ವೇಗವಾಗಿ 10 ಮಿಲಿಯನ್ ಚಂದಾದಾರರನ್ನು ಪಡೆದ ದಾಖಲೆಯನ್ನು ಈ ಹಿಂದೆ ಹ್ಯಾಮ್ಸ್ಟರ್ ಕಾಂಬ್ಯಾಟ್ ಹೊಂದಿತ್ತು. ಈ ಮೈಲಿಗಲ್ಲನ್ನು ತಲುಪಲು ಚಾನಲ್ 7 ದಿನಗಳನ್ನು ತೆಗೆದುಕೊಂಡಿತು. ಆದರೆ ರೊನಾಲ್ಡೊ ಅವರ ಚಾನಲ್ ಈಗಾಗಲೇ 13 ಮಿಲಿಯನ್ಗೂ ಹೆಚ್ಚು ಚಂದಾದಾರರನ್ನು ಪಡೆದಿದ್ದು, ಹಿಂದೆಂದೂ ಕಂಡಿರದ ವೇಗದಲ್ಲಿ subscribers ಗಳನ್ನು ಪಡೆಯುತ್ತಿದೆ.
ರೊನಾಲ್ಡೊ ಈಗಾಗಲೇ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಅವರು ಎಕ್ಸ್ (ಟ್ವಿಟರ್)ನಲ್ಲಿ 112.5 ಮಿಲಿಯನ್, ಫೇಸ್ಬುಕ್ನಲ್ಲಿ 170 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಗೆಳತಿ, ಮಕ್ಕಳೊಂದಿಗಿನ ವಿಡಿಯೋ ಹಂಚಿಕೊಂಡ ರೊನಾಲ್ಡೋ
ರೊನಾಲ್ಡೊ ಚಾನೆಲ್ ಆರಂಭಿಸಿದ ದಿನವೇ ಅವರ ಪಾರ್ಟ್ನರ್ ಜಾರ್ಜಿನಾ ರೊಡ್ರಿಗಸ್ ಅವರೊಂದಿಗಿನ ರಸಪ್ರಶ್ನೆ ಗೇಮ್ ಸೇರಿಂತೆ ಹಲವು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋಗಳು ಕೂಡ ಮಿಲಿಯನ್ಸ್ಗಟ್ಟಲೆ ವೀಕ್ಷಣೆ ಕಾಣುತ್ತಿವೆ.
ಈ ಯೂಟ್ಯೂಬ್ ಚಾನೆಲ್‌ನಲ್ಲಿ ರೊನಾಲ್ಡೊ ತನ್ನ ನೆಚ್ಚಿನ ಫುಟ್‌ಬಾಲ್ ಬಗ್ಗೆ ನಿರಂತರವಾಗಿ ಚರ್ಚಿಸುತ್ತಾರೆ ಎಂದು ಹೇಳಲಾಗುತ್ತಿದೆ. ರೊನಾಲ್ಡೊ ಅವರ ನೆಚ್ಚಿನ ವಿಷಯಗಳು, ಕುಟುಂಬ, ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆಯೂ ಮಾತನಾಡುತ್ತಾರೆ. ರೊನಾಲ್ಡೊ ವಿಶೇಷ ಅತಿಥಿಗಳನ್ನು ತಮ್ಮ ಚಾನೆಲ್‌ಗೆ ಆಹ್ವಾನಿಸುವ ನಿರೀಕ್ಷೆಯಿದೆ.
Comments