17 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ನೀಡಿ ಲೈಂಗಿಕ ಕಿರುಕುಳ
- new waves technology
- Oct 25, 2024
- 1 min read
ಪ್ರ್ಯಾಕ್ಟಿಕಲ್ ತರಗತಿ ಇದೆಯೆಂದು ಹೇಳಿ ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆಸಿಕೊಳ್ಳಲಾಗಿತ್ತು. ತಡರಾತ್ರಿಯವರೆಗೂ ಅವರನ್ನು ಶಾಲೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು.

ಲಖನೌ: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎರಡು ಶಾಲೆಗಳ 17 ಮಂದಿ ವಿದ್ಯಾರ್ಥಿನಿಯರಿಗೆ ಡ್ರಗ್ ನೀಡಿ ಲೈಂಗಿಕ ಕಿರುಕುಳ ನೀಡಿರುವ ಆತಂಕಕಾರಿ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಪ್ರ್ಯಾಕ್ಟಿಕಲ್ ತರಗತಿ ಇದೆಯೆಂದು ಹೇಳಿ ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆಸಿಕೊಳ್ಳಲಾಗಿತ್ತು. ತಡರಾತ್ರಿಯವರೆಗೂ ಅವರನ್ನು ಶಾಲೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ರಾತ್ರಿ ಊಟ ನೀಡುವ ನೆಪದಲ್ಲಿ ಆಹಾರದಲ್ಲಿ ಮತ್ತು ಬರುವ ಔಷಧವನ್ನು ದುಷ್ಕರ್ಮಿಗಳು ಹಾಕಿದ್ದರು.
ಆಘಾತಕಾರಿ ಸಂಗತಿ ಎಂದರೆ ಈ ಘಟನೆ ನಡೆದಿದ್ದು ನವೆಂಬರ್ 18ರಂದು. ಆದರೆ ಸ್ಥಳೀಯ ಪೊಲೀಸರು ಶಾಲೆಯವರ ರಕ್ಷಣೆಗೆ ನಿಂತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ನಂತರ ಈ ವಿಷಯ ಶಾಸಕರಿಗೆ ತಿಳಿದು ತನಿಖೆ ಕೈಗೊಳ್ಳುವಂತೆ ಪೊಲಿಸರಿಗೆ ಆದೇಶಿಸಿದರು ಎನ್ನಲಾಗಿದೆ.
ಶಾಲಾ ಮಂಡಳಿಯ ಸದಸ್ಯರೇ ಈ ಕೃತ್ಯ ಎಸಗಿದ್ದಾರೆ ಎಂದು ಮಕ್ಕಳ ಪಾಲಕರು ಆರೋಪಿದ್ದಾರೆ. ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Comments