2020ರ ದೆಹಲಿ ಗಲಭೆ: ಸಚಿವ ಕಪಿಲ್ ಮಿಶ್ರಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ
- new waves technology
- Apr 1
- 1 min read
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಕಪಿಲ್ ಮಿಶ್ರಾ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

ನವದೆಹಲಿ: 2020 ರ ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಸಚಿವ ಕಪಿಲ್ ಮಿಶ್ರಾ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಈ ಪ್ರಕರಣದ ದೂರುದಾರ ಯಮುನಾ ವಿಹಾರ್ ನಿವಾಸಿ, ಮೊಹಮ್ಮದ್ ಇಲ್ಯಾಸ್ ಅವರು, ಆಗಿನ ದಯಾಳ್‌ಪುರದ ಎಸ್‌ಎಚ್‌ಒ ಆಗಿದ್ದ ಕಪಿಲ್ ಮಿಶ್ರಾ ಮತ್ತು ಬಿಜೆಪಿ ಶಾಸಕ ಮೋಹನ್ ಸಿಂಗ್ ಬಿಶ್ತ್, ಮಾಜಿ ಬಿಜೆಪಿ ಶಾಸಕರಾದ ಜಗದೀಶ್ ಪ್ರಧಾನ್ ಮತ್ತು ಸತ್ಪಾಲ್ ಸಂಸದ್ ಸೇರಿದಂತೆ ಇತರ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಕಪಿಲ್ ಮಿಶ್ರಾ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಫೆಬ್ರವರಿಯ ಆರಂಭದಲ್ಲಿ, ದೆಹಲಿ ಪೊಲೀಸರು ದೂರುದಾರ ಮನವಿಯನ್ನು ತಿರಸ್ಕರಿಸಿದ್ದರು ಮತ್ತು ಮಿಶ್ರಾ ಅವರನ್ನು ಈ ವಿಷಯದಲ್ಲಿ 'ಸಿಲುಕಿಸಲಾಗುತ್ತಿದೆ' ಮತ್ತು 2020 ರ ಈಶಾನ್ಯ ದೆಹಲಿ ಗಲಭೆಯಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಿದ್ದರು.
Comentarios