2nd Test: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಭೋಜನ ವಿರಾಮದ ವೇಳೆ 92/2
- new waves technology
- Oct 24, 2024
- 1 min read
ಮೊದಲ ಟೆಸ್ಟ್ ಗೆದ್ದು 2ನೇ ಟೆಸ್ಟ್ ಅನ್ನು ವಿಶ್ವಾಸದಿಂದ ಆರಂಭಿಸಿದ್ದ ನ್ಯೂಜಿಲೆಂಡ್ ದಾಂಡಿಗರಿಗೆ ಭಾರತದ ರವಿಚಂದ್ರನ್ ಅಶ್ವಿನ್ ಡಬಲ್ ಆಘಾತ ನೀಡಿದ್ದು, ಕಿವೀಸ್ ಪಡೆಯ 2 ಪ್ರಮುಖ ವಿಕೆಟ್ ಕಬಳಿಸಿದ್ದಾರೆ.

ಪುಣೆ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದಾರೆ.
ಮೊದಲ ಟೆಸ್ಟ್ ಗೆದ್ದು 2ನೇ ಟೆಸ್ಟ್ ಅನ್ನು ವಿಶ್ವಾಸದಿಂದ ಆರಂಭಿಸಿದ್ದ ನ್ಯೂಜಿಲೆಂಡ್ ದಾಂಡಿಗರಿಗೆ ಭಾರತದ ರವಿಚಂದ್ರನ್ ಅಶ್ವಿನ್ ಡಬಲ್ ಆಘಾತ ನೀಡಿದ್ದು, ಕಿವೀಸ್ ಪಡೆಯ 2 ಪ್ರಮುಖ ವಿಕೆಟ್ ಕಬಳಿಸಿದ್ದಾರೆ.
ಆರಂಭಿಕ ಆಟಗಾರ ಹಾಗೂ ನಾಯಕ ಟಾಮ್ ಲಾಥಮ್ (15 ರನ್) ಎಲ್ ಬಿ ಬಲೆಗೆ ಕೆಡವಿದ ಅಶ್ವಿನ್ ಬಳಿಕ ವಿಲ್ ಯಂಗ್ (18 ರನ್) ರ ವಿಕೆಟ್ ಪಡೆಯುವಲ್ಲೂ ಯಶಸ್ವಿಯಾದರು.
ಪ್ರಸ್ತುತ ನ್ಯೂಜಿಲೆಂಡ್ ಭೋಜನ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 92ರನ್ ಗಳಿಸಿದ್ದು, 47 ರನ್ ಗಳಿಸಿರುವ ಡಿವಾನ್ ಕಾನ್ವೆ ಮತ್ತು 5 ರನ್ ಗಳಿಸಿರುವ ರಚಿನ್ ರವೀಂದ್ರ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಆರ್ ಅಶ್ವಿನ್ 2 ವಿಕೆಟ್ ಪಡೆದಿದ್ದಾರೆ.
ಭಾರತ ತಂಡದಲ್ಲಿ ಮೂರು ಬದಲಾವಣೆ
ಇಂದಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಮಹಮದ್ ಸಿರಾಜ್, ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ರನ್ನು ತಂಡದಿಂದ ಕೈ ಬಿಡಲಾಗಿದ್ದು, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಮತ್ತು ಶುಭ್ ಮನ್ ಗಿಲ್ ತಂಡ ಸೇರಿಕೊಂಡಿದ್ದಾರೆ.
Comments