72ನೇ ವಸಂತಕ್ಕೆ ಕಾಲಿಟ್ಟ ಸ್ಟಾಲಿನ್; 'ಹಿಂದಿ ಹೇರಿಕೆ'ಗೆ ವಿರೋಧ ನನ್ನ ಹುಟ್ಟುಹಬ್ಬದ ಸಂದೇಶ!
- new waves technology
- Mar 1
- 1 min read
ಸಿಎಂ ಸ್ಟಾಲಿನ್ ಅವರು ಇಂದು ತಮ್ಮ ಕುಟುಂಬ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ 72 ವರ್ಷಗಳನ್ನು ಪೂರೈಸಿದರು ಮತ್ತು ಡಿಎಂಕೆ ಅಧ್ಯಕ್ಷರು ತಮ್ಮ ಹುಟ್ಟುಹಬ್ಬದ ಸಂದೇಶವಾಗಿ ರಾಜ್ಯ ಸ್ವಾಯತ್ತತೆ, ದ್ವಿಭಾಷಾ ನೀತಿ ಮತ್ತು ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಒತ್ತಿ ಹೇಳಿದರು.
ಇಂದು ತಮ್ಮ ಕುಟುಂಬ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಸ್ಟಾಲಿನ್, ಕಾರ್ಯಕರ್ತರಿಗೆ "ಒಂದು ಗುರಿ"ಯ ಪ್ರಮಾಣವಚನ ಬೋಧಿಸಿದರು, ಅದು ತಮಿಳುನಾಡಿನ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಮುಂಬರುವ ಎಲ್ಲಾ ಸಮಯದಲ್ಲೂ ಹಿಂದಿ ಹೇರಿಕೆಯನ್ನು ವಿರೋಧಿಸುವುದು.
"ತಮಿಳುನಾಡು ಪೊರಡಮ್, ತಮಿಳುನಾಡು ವೆಲ್ಲಮ್"(ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ) ಎಂದು ಸ್ಟಾಲಿನ್ ಹೇಳಿದರು. ಇದನ್ನು ಪಕ್ಷದ ಎಲ್ಲಾ ಕಾರ್ಯಕರ್ತರು ಪುನರಾವರ್ತಿಸಿದರು.
ಡಿಎಂಕೆ ಪ್ರಧಾನ ಕಚೇರಿ "ಅಣ್ಣಾ ಅರಿವಲಯಂ"ನಲ್ಲಿ ಇಂದು ಹಬ್ಬದ ವಾತಾವರಣವಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ತಮ್ಮ ಪಕ್ಷದ ಮುಖ್ಯಸ್ಥರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ದ್ರಾವಿಡ ಪಕ್ಷದ ಮುಖ್ಯಸ್ಥರು ತಮ್ಮ ಹುಟ್ಟುಹಬ್ಬದ ಸಂದೇಶವಾಗಿ ರಾಜ್ಯ ಸ್ವಾಯತ್ತತೆಯ ತತ್ವಗಳು, ಹಿಂದಿ ಹೇರಿಕೆಗೆ ವಿರೋಧ ಮತ್ತು ದ್ವಿಭಾಷಾ ನೀತಿಗೆ ಬದ್ಧತೆಯನ್ನು ಒತ್ತಿ ಹೇಳಿದರು. ತಮಿಳನ್ನು ರಕ್ಷಿಸುವುದಾಗಿ ಮತ್ತು ತಮಿಳುನಾಡಿನ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿ ಪುನರುಚ್ಚರಿಸಿದರು.
1971 ರಲ್ಲಿ ಕೇವಲ 18 ವರ್ಷದವನಿದ್ದಾಗ ಪಕ್ಷದ ಸಮ್ಮೇಳನದಲ್ಲಿ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದೆ. ಈಗಲೂ ಅದೇ ಹುರುಪಿನಿಂದ ಹಿಂದಿ ಹೇರಿಕೆಯನ್ನು ವಿರೋಧಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಹೇಳಿದರು.
Commentaires