top of page

Airtel network down: ಏರ್ಟೆಲ್​ ಬ್ರಾಡ್​ಬ್ಯಾಂಡ್​, ಮೊಬೈಲ್ ನೆಟ್​ವರ್ಕ್​​ ಬಗ್ಗೆ ಗ್ರಾಹಕರ ದೂರು!

  • Writer: new waves technology
    new waves technology
  • Dec 26, 2024
  • 1 min read

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಏರ್‌ಟೆಲ್ ಇಂದು ನೆಟವರ್ಕ್​ ಸಮಸ್ಯೆ ಎದುರಿಸಿದ್ದು, ಲಕ್ಷಾಂತರ ಏರ್‌ಟೆಲ್ ಬಳಕೆದಾರರು ಸೇವೆ ವ್ಯತ್ಯಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ.

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆ ಏರ್ಟೆಲ್ ಸೇವೆಗಳಲ್ಲಿ ವ್ಯತ್ಯಯವಾಗಿದ್ದು, ನೆಟ್ವರ್ಕ್ ಸಮಸ್ಯೆಯಿಂದಾಗಿ ಗ್ರಾಹಕರು ಪರದಾಡುವಂತಾಗಿದೆ.

ಹೌದು.. ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಏರ್‌ಟೆಲ್ ಇಂದು ನೆಟವರ್ಕ್​ ಸಮಸ್ಯೆ ಎದುರಿಸಿದ್ದು, ಇದರಿಂದಾಗಿ ಲಕ್ಷಾಂತರ ಏರ್‌ಟೆಲ್ ಬಳಕೆದಾರರು ಸೇವೆ ವ್ಯತ್ಯಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ.

ಗ್ರಾಹಕರು ಸಂಪರ್ಕ ಸಮಸ್ಯೆಗಳ ಬಗ್ಗೆ ತೊಂದರೆ ಅನುಭವಿಸುತ್ತಿದ್ದು, ಸುಮಾರು 3000ಕ್ಕೂ ಅಧಿಕ ಏರ್‌ಟೆಲ್ ಬಳಕೆದಾರರು ಈ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.


ಈ ಪೈಕಿ ಶೇ.40ರಷ್ಟು ಮಂದಿ ಮೊಬೈಲ್ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದರೆ, ಶೇ.30 ರಷ್ಟು ಒಟ್ಟಾರೆ ಏರ್ಟೆಲ್ ಸೇವೆಗಳೇ ಸಿಗುತ್ತಿಲ್ಲ ಎಂದು ದೂರಿದ್ದಾರೆ. ಅಂತೆಯೇ ಶೇ.23 ರಷ್ಟು ಬಳಕೆದಾರರು ಮೊಬೈಲ್ ಸಿಗ್ನಲ್ ಬಗ್ಗೆ ದೂರು ನೀಡಿದ್ದು, ಕಾಲ್ ಕನೆಕ್ಟಿವಿಟಿ ಬಗ್ಗೆ ದೂರುತ್ತಿದ್ದಾರೆ.

ಏರ್ಟೆಲ್ ಸ್ಪಷ್ಟನೆ

ಇನ್ನು ಸೇವೆಗಳಲ್ಲಿ ವ್ಯತ್ಯಯದ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಏರ್ಟೆಲ್, ಅಡಚಣೆಗಾಗಿ ವಿಷಾಧಿಸುತ್ತೇವೆ. ನಮ್ಮ ಸೇವೆಗಳನ್ನು ಸುಧಾರಿಸಲು ನಮ್ಮ ಗ್ರಾಹಕರ ಪ್ರತಿಕ್ರಿಯೆಯನ್ನು ನಾವು ಗೌರವಿಸುತ್ತೇವೆ. ಈ ಘಟನೆ ಪುನರಾವರ್ತನೆಯಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ನಿಮ್ಮ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಿದ್ದು, ಇಂದು ಮಧ್ಯಾಹ್ನ 2:22:06 ರೊಳಗೆ ಅದನ್ನು ಪರಿಹರಿಸಲಾಗುವುದು ಎಂದು ಹೇಳಿದೆ.


ವಿದ್ಯುತ್ ವತ್ಯಯವೇ ಕಾರಣ

ಇನ್ನು ದೇಶದ ಬಹುತೇಕ ಭಾಗಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಿದ್ದು, ಇದೇ ಏರ್ಟೆಲ್ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣ ಎಂದು ಹೇಳಲಾಗಿದೆ. ಏರ್ಟೆಲ್ ಟವರ್ ಗಳಿರುವ ಸ್ಥಳಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ವಿದ್ಯುತ್ ವ್ಯತ್ಯಯವಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆ, 'ಚಿಂತಿಸಬೇಡಿ, ಅದನ್ನು ಸರಿಪಡಿಸಲು ನಾವು ಇಲ್ಲಿದ್ದೇವೆ! ದಯವಿಟ್ಟು ನಿಮ್ಮ ಏರ್‌ಟೆಲ್ ವಿವರಗಳನ್ನು ನಮಗೆ ಡಿಎಂ ಮಾಡಿ, ಇದರಿಂದ ನಾವು ನಿಮಗಾಗಿ ವಿಷಯಗಳನ್ನು ಸುಗಮಗೊಳಿಸಬಹುದು ಎಂದು ಹೇಳಿದೆ.

Comments


bottom of page