BCCI ಸೆಂಟ್ರಲ್ ಕಾಂಟ್ರಾಕ್ಟ್: ಶತಕ ಸಿಡಿಸಿದ್ದ Ishan Kishanಗೆ ಶಾಕ್, Shreyas Ayarಗೆ ಬಂಪರ್ ಸಾಧ್ಯತೆ!
- new waves technology
- Apr 2
- 1 min read
ಬಿಸಿಸಿಐ ಮೂಲಕಗಳ ಪ್ರಕಾರ ಈ ಬಾರಿ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ ನಲ್ಲಿ ಶ್ರೇಯಸ್ ಅಯ್ಯರ್ ಗೆ ಬಂಪರ್ ಸಿಗುವ ಸಾಧ್ಯತೆ ಇದೆ ಎಂದು ಹೇಳಾಗಿದೆ.

ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೆಂಟ್ರಲ್ ಕಾಂಟ್ರಾಕ್ಟ್ ಪರಿಷ್ಕರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಗೆ ಈ ಬಾರಿ ಬಂಪರ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. BCCI ಸೆಂಟ್ರಲ್ ಕಾಂಟ್ರಾಕ್ಟ್ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಬಿಸಿಸಿಐ ಪದಾಧಿಕಾರಿಗಳು ಆಟಗಾರರ ಪರಿಷ್ಕೃತ ಒಪ್ಪಂದಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ.
ಬಿಸಿಸಿಐ ಮೂಲಕಗಳ ಪ್ರಕಾರ ಈ ಬಾರಿ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ ನಲ್ಲಿ ಶ್ರೇಯಸ್ ಅಯ್ಯರ್ ಗೆ ಬಂಪರ್ ಸಿಗುವ ಸಾಧ್ಯತೆ ಇದೆ ಎಂದು ಹೇಳಾಗಿದೆ. ಅಂತೆಯೇ ಐಪಿಎಲ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಆಯ್ಕೆ ಸಮಿತಿಗೆ ಖಡರ್ ಸಂದೇಶ ರವಾನಿಸಿದ್ದ ಇಶಾನ್ ಕಿಶನ್ ಗೆ ಮಾತ್ರ ಶಾಕ್ ಕಾದಿದೆ ಎಂದು ಹೇಳಲಾಗಿದೆ.
ಎ+ ನಲ್ಲಿ ಕೊಹ್ಲಿ, ರೋಹಿತ್
ಇನ್ನು ಭಾರತದ ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಎ+ ದರ್ಜೆಯಲ್ಲಿ ಮುಂದುವರೆದಿದ್ದು, ಇವರು ಬಿಸಿಸಿಐನ ವಾರ್ಷಿಕ ಆಟಗಾರರ ಒಪ್ಪಂದದಲ್ಲಿ ರೂ. 7 ಕೋಟಿ ರೂ ವೇತನ ಪಡೆಯಲಿದ್ದಾರೆ. ಟಿ20 ಸ್ವರೂಪದಿಂದ ನಿವೃತ್ತರಾದ ನಂತರವೂ, ರೋಹಿತ್ ಮತ್ತು ಕೊಹ್ಲಿ ಎ+ ವಿಭಾಗದಲ್ಲಿ ಮುಂದುವರಿಯಲಿದ್ದಾರೆ.
ಅಯ್ಯರ್ ಬಂಪರ್
ಇನ್ನು ಇತ್ತೀಚಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಶ್ರೇಯಸ್ ಅಯ್ಯರ್ ಬಿಸಿಸಿಐ ಸೆಂಟ್ರಲ್ ಒಪ್ಪಂದ ಪಟ್ಟಿಯಲ್ಲಿ ಮತ್ತೆ ಸ್ಥಾನ ಪಡೆಯಲು ಸಜ್ಜಾಗಿದ್ದು, ಅವರಿಗೆ ಎ ಅಥವಾ ಬಿ ದರ್ಜೆಯಲ್ಲಿ ಸೇರಿಸುವ ಅವಕಾಶವಿದೆ ಎಂದು ಹೇಳಲಾಗಿದೆ.
ಇಶಾನ್ ಕಿಶನ್ ಗೆ ಶಾಕ್
ಇನ್ನು ಕಳೆದ ವರ್ಷ ಶ್ರೇಯಸ್ ಅಯ್ಯರ್ ಜೊತೆಯಲ್ಲೇ ಅವರೊಂದಿಗೆ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ ನಿಂದ ಹೊರಗುಳಿದಿದ್ದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಗೆ ಈ ಬಾರಿಯೂ ನಿರಾಶೆ ಎದುರಾಗುವ ಸಾಧ್ಯತೆ ಇದ್ದು, ಕೇಂದ್ರೀಯ ಒಪ್ಪಂದ ಪಡೆಯಲು ಇಶಾನ್ ಕಿಶನ್ ಮತ್ತೊಂದು ವರ್ಷ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.
ಉಳಿದಂತೆ ಟಿ 20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಜೇಯ ರನ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ ರೌಂಡರ್ ಅಕ್ಷರ್ ಪಟೇಲ್ ಕೂಡ ಬಡ್ತಿ ಪಡೆಯಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.
ಅಲ್ಲದೆ ಕಳೆದ 12 ತಿಂಗಳುಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಭಾರತಕ್ಕಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ ಮತ್ತು ಅಭಿಷೇಕ್ ಶರ್ಮಾ ಕೂಡ ತಮ್ಮ ವೃತ್ತಿ ಜೀವನದ ಮೊದಲ ಕೇಂದ್ರ ಒಪ್ಪಂದವನ್ನು ಗಳಿಸಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ. ಕಳೆದ ವಾರ, ಬಿಸಿಸಿಐ 2024-25 ಚಕ್ರಕ್ಕಾಗಿ ಭಾರತ ಹಿರಿಯ ಮಹಿಳಾ ತಂಡಕ್ಕೆ ವಾರ್ಷಿಕ ಉಳಿಸಿಕೊಳ್ಳುವವರನ್ನು ಘೋಷಿಸಿತು.
Kommentare