top of page

BREAKING : ಬೆಂಗಳೂರಲ್ಲಿ 40 ಸಾವಿರ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ!

  • Writer: new waves technology
    new waves technology
  • Nov 5, 2024
  • 1 min read

ಬೆಂಗಳೂರು : 40,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ಅಧಿಕಾರಿ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.












ಹೌದು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯನ್ನು ಸಹಾಯಕ ಡ್ರಗ್ಸ್ ಕಂಟ್ರೋಲರ್ ಅಧಿಕಾರಿ ಅಜಯ್ ಡಿ.ಶಾ ಎಂದು ತಿಳಿದುಬಂದಿದೆ.

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಗಿ ಬಿದ್ದಿದ್ದಾರೆ. ಹೊಲ್ಸೇಲ್ ಮೆಡಿಕಲ್ ಶಾಪ್ ಲೈಸೆನ್ಸ್ ಗೆ ಸುಬ್ರಮಣ್ಯ ಎನ್ನುವವರು ಅರ್ಜಿ ಹಾಕಿದ್ದರು. ಮೆಡಿಕಲ್ ಶಾಪ್ ಗೆ ಲೈಸೆನ್ಸ್ ನೀಡಲು ಲಂಚಕ್ಕೆ ಅಜಯ್ ಡಿಮ್ಯಾಂಡ್ ಮಾಡಿದ್ದರು.

ಸುಬ್ರಮಣ್ಯ ಬಳಿ 40,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಕಾರಿನಲ್ಲಿ ಲಂಚ ಸ್ವೀಕರಿಸುವಾಗ ಅಧಿಕಾರಿ ಅಜಯ್ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಅಧಿಕಾರಿ ಅಜಯ್ ರಾಜ್ ಡಿ.ಶಾನನ್ನು ಇದೀಗ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments


bottom of page