top of page

BSNL 'Reliance Jio ಎಡವಟ್ಟು': ಸರ್ಕಾರಕ್ಕೆ 1,757 ಕೋಟಿ ರೂ ನಷ್ಟ!

  • Writer: new waves technology
    new waves technology
  • Apr 3
  • 1 min read

ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್‌ಎನ್‌ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಮಾಡಿದ ಮಹಾ ಎಡವಟ್ಟಿನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬರೊಬ್ಬರಿ 1,757 ಕೋಟಿ ರೂ.ನಷ್ಟವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿ ಹೇಳಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ BSNL ಸ್ಥಿರ ಮೂಲಸೌಕರ್ಯಗಳ ಹಂಚಿಕೆಗಾಗಿ ತಮ್ಮ ನಡುವಿನ ಒಪ್ಪಂದದ ಪ್ರಕಾರ ಮೇ 2014ರಿಂದ ಹತ್ತು ವರ್ಷಗಳ ಕಾಲ ರಿಲಯನ್ಸ್ ಜಿಯೋ ಸಂಸ್ಥೆಗೆ ಶುಲ್ಕವನ್ನು ವಿಧಿಸುವಲ್ಲಿ ವಿಫಲಗೊಂಡಿದ್ದು, ಇದರಿಂದಾಗಿ ಸರ್ಕಾರವು 1,757.56 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿ ಹೇಳಿದೆ.

ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್‌ಎನ್‌ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿ.(ಆರ್‌ಜೆಐಎಲ್) ಜೊತೆ ಮಾಸ್ಟರ್ ಸರ್ವಿಸ್ ಅಗ್ರಿಮೆಂಟ್(ಎಂಎಸ್‌ಎ)ನ್ನು ಜಾರಿಗೊಳಿಸುವಲ್ಲಿ ಬಿಎಸ್‌ಎನ್‌ಎಲ್ ವಿಫಲಗೊಂಡಿದ್ದು, ಮೇ 2014 ಮತ್ತು ಮೇ 2024ರ ನಡುವೆ ತನ್ನ ಸ್ಥಿರ ಮೂಲಸೌಕರ್ಯದಲ್ಲಿ ಬಳಸಿಕೊಂಡ ಹೆಚ್ಚುವರಿ ತಂತ್ರಜ್ಞಾನಕ್ಕೆ ಶುಲ್ಕವನ್ನು ವಿಧಿಸಿಲ್ಲ. ಇದು ಸರ್ಕಾರದ ಬೊಕ್ಕಸಕ್ಕೆ 1757.56 ಕೋಟಿ ರೂ. ಮತ್ತು ಅದರ ಮೇಲಿನ ದಂಡ ಬಡ್ಡಿಯ ನಷ್ಟಕ್ಕೆ ಕಾರಣವಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಸ್ಥಿರ ಮೂಲಸೌಕರ್ಯ ಹಂಚಿಕೆಯ ಮೇಲೆ ಬಿಎಸ್‌ಎನ್‌ಎಲ್ ಶಾರ್ಟ್ ಬಿಲ್ಲಿಂಗ್ ಮಾಡಿದೆ ಎನ್ನುವುದನ್ನೂ ಗಮನಿಸಿರುವ ಸಿಎಜಿ, 'ರಿಲಯನ್ಸ್ ಜಿಯೊ ಜೊತೆಗಿನ ಒಪ್ಪಂದದಲ್ಲಿ ನಿಗದಿ ಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಬಿಎಸ್‌ಎನ್‌ಎಲ್ ಪಾಲಿಸಿಲ್ಲ ಮತ್ತು ಹೆಚ್ಚಳ ನಿಬಂಧನೆಯನ್ನು ಅನ್ವಯಿಸಿಲ್ಲ,ಹೀಗಾಗಿ ಮೂಲಸೌಕರ್ಯ ಹಂಚಿಕೆ ಶುಲ್ಕಗಳಿಗೆ ಸಂಬಂಧಿಸಿದಂತೆ 29 ಕೋಟಿ ರೂ.(ಜಿಎಸ್‌ಟಿ) ಗಳ ಆದಾಯ ನಷ್ಟವಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

4G ವಿಳಂಬದಿಂದ BSNL ಆದಾಯದ ಮೇಲೆ ಪರಿಣಾಮ

ಇತ್ತ ಟೆಲಿಕಾಂ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರ ಶೇಖರ್ ಇತ್ತೀಚೆಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡುತ್ತಾ, 'BSNL ಒಂದು ಲಕ್ಷ 4G ಸೈಟ್‌ಗಳಿಗೆ ಖರೀದಿ ಆದೇಶಗಳನ್ನು ನೀಡಿದೆ, ಅದರಲ್ಲಿ 83,993 ಸೈಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಮಾರ್ಚ್ 8 ರ ವೇಳೆಗೆ 74,521 ಸೈಟ್‌ಗಳು ಪ್ರಸಾರವಾಗುತ್ತಿವೆ ಎಂದು ಹೇಳಿದರು. ಅಂತೆಯೇ 4G ಸೇವೆಗಳ ಬಿಡುಗಡೆಯಲ್ಲಿ ವಿಳಂಬ ಮತ್ತು ಮೊಬೈಲ್ ವಿಭಾಗದಲ್ಲಿನ ತೀವ್ರ ಸ್ಪರ್ಧೆಯಿಂದಾಗಿ BSNL ಆದಾಯದ ಮೇಲೆ ಪರಿಣಾಮ ಬೀರಿದೆ" ಎಂದು ಸಚಿವರು ಮಾಹಿತಿ ನೀಡಿದರು.

Comentários


bottom of page