Champions Trophy 2025: ಪ್ರಮುಖ ಆಟಗಾರನಿಗೆ ಗಾಯ; ಭಾರತ ವಿರುದ್ಧದ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಹಿನ್ನಡೆ!
- new waves technology
- Mar 7
- 1 min read
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಿಂದ ಒಂದು ವೇಳೆ ಮ್ಯಾಟ್ ಹೆನ್ರಿ ಹೊರಗುಳಿದರೆ, ನ್ಯೂಜಿಲೆಂಡ್ ತಂಡದಲ್ಲಿ ನಾಥನ್ ಸ್ಮಿತ್ ಮತ್ತು ಜಾಕೋಬ್ ಡಫಿ ಬ್ಯಾಕಪ್‌ಗಳಾಗಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದ್ದು, ಮಾರ್ಚ್ 9ರಂದು ಭಾನುವಾರ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಹೈ-ವೋಲ್ಟೇಜ್ ಹಣಾಹಣಿಯಲ್ಲಿ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.
ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಮ್ಯಾಟ್ ಹೆನ್ರಿ ಗಾಯಗೊಂಡಿದ್ದು, ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಬಹುನಿರೀಕ್ಷಿತ ಪಂದ್ಯಕ್ಕೂ ಮುನ್ನ, ನ್ಯೂಜಿಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಫೀಲ್ಡಿಂಗ್ ವೇಳೆ ಹೆನ್ರಿ ಅವರ ಭುಜಕ್ಕೆ ಪೆಟ್ಟಾಗಿತ್ತು. ಅವರಿನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಭಾರತ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದ ಹೆನ್ರಿ, ಟೂರ್ನಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು. ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಹೆನ್ರಿ ಅವರ ಅಲಭ್ಯತೆ ಕುರಿತು ನ್ಯೂಜಿಲೆಂಡ್ ತಂಡಕ್ಕೆ ಚಿಂತೆಯಾಗಿದೆ.
ಹೆನ್ರಿ ಬದಲಿ ಆಟಗಾರ ಯಾರು?
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಿಂದ ಒಂದು ವೇಳೆ ಮ್ಯಾಟ್ ಹೆನ್ರಿ ಹೊರಗುಳಿದರೆ, ನ್ಯೂಜಿಲೆಂಡ್ ತಂಡದಲ್ಲಿ ನಾಥನ್ ಸ್ಮಿತ್ ಮತ್ತು ಜಾಕೋಬ್ ಡಫಿ ಬ್ಯಾಕಪ್‌ಗಳಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಜಾಕೋಬ್ ಡಫಿ ಅವರು ನಾಥನ್ ಸ್ಮಿತ್‌ಗಿಂತ ಉತ್ತಮ ದಾಖಲೆ ಹೊಂದಿದ್ದು, ತಂಡದಲ್ಲಿ ಯಾರಿಗೆ ಅವಕಾಶ ಸಿಗಬಹುದು ಎನ್ನುವ ಕುತೂಹಲವಿದೆ.
ಹೊಸ ಬಾಲ್ ಇದ್ದಾಗ ನಾಥನ್ ಸ್ಮಿತ್ ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲದ ಕಾರಣ ಮ್ಯಾಟ್ ಹೆನ್ರಿ ಫೈನಲ್‌ನಿಂದ ಹೊರಗುಳಿದರೆ ಡಫಿ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಭಾರತ ವಿರುದ್ಧ ನ್ಯೂಜಿಲೆಂಡ್ ಸಂಭಾವ್ಯ ಆಡುವ ಬಳಗ
ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಕೇನ್ ವಿಲಿಯಮ್ಸನ್, ಡೆರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಕೈಲ್ ಜೇಮಿಸನ್, ಜಾಕೋಬ್ ಡಫಿ, ವಿಲಿಯಂ ಒ'ರೂರ್ಕ್
Comments