top of page

Champions Trophy 2025: 'ಮಹಾಭಾರತ' ಹೋಲಿಕೆ; 'ಕೃಷ್ಣ ನಿಮ್ಮ ಪರವಾಗಿದ್ದರೆ...'; ದುಬೈ ಪಿಚ್ 'ಅನುಕೂಲ'; ಗಂಭೀರ್ ವಿರುದ್ಧ ಶಮಿ ಗರಂ!

  • Writer: new waves technology
    new waves technology
  • Mar 6
  • 2 min read

ಭಾರತ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಟೀಮ್ ಇಂಡಿಯಾ ಫೈನಲ್‌ಗೆ ತಲುಪಿದೆ. ಏತನ್ಮಧ್ಯೆ, ದುಬೈನಲ್ಲಿ ಒಂದೇ ಮೈದಾನದಲ್ಲಿ ಆಡುವುದರಿಂದ ಭಾರತಕ್ಕೆ ಸಹಾಯವಾಗುತ್ತಿದೆ ಎಂದು ಅನೇಕ ಅನುಭವಿಗಳು ಹೇಳಿದ್ದಾರೆ.


ದುಬೈ: ಭಾರತ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಟೀಮ್ ಇಂಡಿಯಾ ಫೈನಲ್‌ಗೆ ತಲುಪಿದೆ. ಏತನ್ಮಧ್ಯೆ, ದುಬೈನಲ್ಲಿ ಒಂದೇ ಮೈದಾನದಲ್ಲಿ ಆಡುವುದರಿಂದ ಭಾರತಕ್ಕೆ ಸಹಾಯವಾಗುತ್ತಿದೆ ಎಂದು ಅನೇಕ ಅನುಭವಿಗಳು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ವಿಷಯಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಭಾರತಕ್ಕೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದರು.

ಆದಾಗ್ಯೂ, ಭಾರತದ ವೇಗಿ ಮೊಹಮ್ಮದ್ ಶಮಿ ಸಂಪೂರ್ಣವಾಗಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು ಇದರಿಂದ ಸಹಾಯ ಪಡೆಯುತ್ತಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ಆಟಗಾರರು ದುಬೈನಲ್ಲಿ ಆಡುವುದರಿಂದ ಭಾರತಕ್ಕೆ ಸಹಾಯವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈಗ ಶಮಿ ಈ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ ಮತ್ತು ಟೀಮ್ ಇಂಡಿಯಾ ಇದರಿಂದ ಪ್ರಯೋಜನ ಪಡೆದಿದೆ ಎಂದು ಅವರು ನಂಬುತ್ತಾರೆ.

ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಜಯಗಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದ ಶಮಿ, ದುಬೈನಲ್ಲಿ ಆಡುವುದು ನಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತಿದೆ ಏಕೆಂದರೆ ನಮಗೆ ಪಿಚ್‌ನ ಪರಿಸ್ಥಿತಿಗಳು ಮತ್ತು ನಡವಳಿಕೆ ತಿಳಿದಿದೆ. ನಮಗೆ ಉತ್ತಮವಾದ ವಿಷಯವೆಂದರೆ ನಾವು ಒಂದೇ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದೇವೆ. ಒಂದೇ ಮೈದಾನದಲ್ಲಿ ಆಡುವ ಮೂಲಕ, ನೀವು ಅಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತೀರಿ ಎಂದು ಹೇಳಿದರು.

ದುಬೈ ಕ್ರೀಡಾಂಗಣದಿಂದ ಭಾರತಕ್ಕೆ ಸಹಾಯವಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ದೊಡ್ಡ ಹೇಳಿಕೆ ನೀಡಿದ್ದರು. ಟೀಂ ಇಂಡಿಯಾಕ್ಕೆ ಇದರಿಂದ ಯಾವುದೇ ರೀತಿಯ ಸಹಾಯ ಸಿಗುತ್ತಿಲ್ಲ. ನಾವು ಇಲ್ಲಿಗೆ ಬಂದಾಗಿನಿಂದ, ನಮಗೆ ಒಮ್ಮೆಯೂ ಮೈದಾನದಲ್ಲಿ ಅಭ್ಯಾಸ ಮಾಡಲು ಅವಕಾಶ ಸಿಕ್ಕಿಲ್ಲ. ನಾವು ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತೇವೆ. ನಮ್ಮ ತಂಡಕ್ಕೆ ಮೈದಾನದಲ್ಲಿ ಆಡುವುದರಿಂದ ಯಾವುದೇ ರೀತಿಯ ಸಹಾಯ ಸಿಗುತ್ತಿಲ್ಲ ಎಂದು ಹೇಳಿದರು.

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಕಾಶ್ ಚೋಪ್ರಾ ಈ ವಿವಾದದ ಬಗ್ಗೆ ವಿವರಿಸಿದ್ದಾರೆ. ಎರಡು ಕೋನಗಳಿಂದ ಚರ್ಚೆಯನ್ನು ವಿಂಗಡಿಸಿದರು. ಪಾಕಿಸ್ತಾನ ಮತ್ತು ಯುಎಇ ನಡುವಿನ ನಿರಂತರ ಪ್ರಯಾಣವು ಆಯಾಸವನ್ನು ಹೆಚ್ಚಿಸಬಹುದು. ಆದರೆ ಪಂದ್ಯಗಳನ್ನು ಗೆಲ್ಲುವಲ್ಲಿ ಅಥವಾ ಸೋಲುವಲ್ಲಿ ಅದು ನಿರ್ಣಾಯಕ ಅಂಶವಲ್ಲ ಎಂದು ಗಮನಸೆಳೆದರು. ಇದಕ್ಕೆ ಎರಡು ಅಂಶಗಳಿವೆ. ಒಂದು ಪ್ರಯಾಣದ ಕಾರಣದಿಂದಾಗಿ ಸಮಸ್ಯೆ. ಅದು ಸಮಸ್ಯೆಯೇ? ನೀವು ಹೆಚ್ಚು ಪ್ರಯಾಣಿಸಬೇಕಾಗಿರುವುದರಿಂದ ಮಾತ್ರ ನೀವು ಸೋಲುತ್ತೀರಿ ಎಂದು ನಾನು ಹೇಳುವುದಿಲ್ಲ. ಆಯಾಸವನ್ನು ನಾನು ನಿರಾಕರಿಸುತ್ತಿಲ್ಲ, ಆದರೆ ಅದು ಮೇಕ್ ಅಥವಾ ಬ್ರೇಕ್ ಅಲ್ಲ. ನೀವು ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೀರಿ ಎಂದು ಅವರು ಹೇಳಿದರು.

ಒಂದೇ ಸ್ಥಳದಲ್ಲಿರುವುದು ಹೆಚ್ಚಿನ ಪ್ರಯೋಜನವಲ್ಲ, ಆದರೆ ಪರಿಸ್ಥಿತಿಗಳಿಂದಾಗಿ ಒಂದು ಪ್ರಯೋಜನವಿದೆ. ಈ ಪರಿಸ್ಥಿತಿಗಳು ನಿಮಗೆ ಸಹಾಯ ಮಾಡುತ್ತದೆ. ಅದರ ಪ್ರಕಾರ ನೀವು, ನಿಮ್ಮ 11 ಅಥವಾ 15 ಅನ್ನು ಆಯ್ಕೆ ಮಾಡಬಹುದು. ಮಹಾಭಾರತ ನಮಗೆ ಒಂದು ವಿಷಯವನ್ನು ಕಲಿಸಿದೆ. ಕೃಷ್ಣ ನಿಮ್ಮ ಪರವಾಗಿ ಇದ್ದರೆ, ಅಷ್ಟೇ, ಎಲ್ಲವೂ ಸಾಧ್ಯ... ಆದರೆ ಸರಿಯಾದ ಆಯ್ಕೆ ಅತ್ಯಂತ ಮುಖ್ಯ ಎಂದು ಚೋಪ್ರಾ ಹೇಳಿದರು.

Commentaires


bottom of page