CONGRESS GUARANTEE : ಶಕ್ತಿ ಯೋಜನೆ ಕಳ್ಳಾಟಕ್ಕೆ ಬ್ರೇಕ್ - ಸ್ಮಾರ್ಟ್ ಟಚ್ ನೀಡಲು ಮುಂದಾದ ಸರ್ಕಾರ !
- new waves technology
- Nov 5, 2024
- 1 min read
ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಓಡಾಟ ಕಲ್ಪಿಸಿರುವ ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಮರು ಪರಿಶೀಲನೆ ನಡೆಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಗ್ಯಾರಂಟಿಗಳ ವಿಚಾರ ದೇಶದಾದ್ಯಾಂತ ಭಾರೀ ಚರ್ಚೆಗೆ ಕಾರಣವಾಗಿತ್ತು.ಹೀಗಾಗಿ ತಕ್ಷಣ ಅಲರ್ಟ್ ಆದ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿತ್ತು.

ಸಿಎಂಸಿದ್ದರಾಮಯ್ಯ,ಡಿಸಿಎಂ ಡಿಕೆ ಶಿವಕುಮಾರ್ ಹಾದಿಯಾಗಿ ಕಾಂಗ್ರೆಸ್ ನಾಯಕರು ಈ ಬಗ್ಗೆ ಸಾಲು ಸಾಲು ಸ್ಪಷ್ಟನೆಗಳನ್ನು ನೀಡಿ, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲಿಸುವುದಿಲ್ಲ ಎಂದಿದ್ದರು.
ಆದ್ರೆ ಈಗ ಶಕ್ತಿ ಯೋಜನೆಯ ಬಗ್ಗೆ ಮತ್ತೊಂದು ಚರ್ಚೆ ಶುರುವಾಗಿದ್ದು, ಯೋಜನೆಯ ದುರುಪಯೋಗವಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದಂತೆ. ಹೀಗಾಗಿ ಶಕ್ತಿ ಯೋಜನೆ ಕಳ್ಳಾಟಕ್ಕೆ ಬ್ರೇಕ್ ಹಾಕಲು ಯೋಜನೆಗೆ ಸ್ಮಾರ್ಟ್ ಟಚ್ ನೀಡಲು ಸರ್ಕಾರ ಮುಂದಾಗಿದೆ. ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಯಲ್ಲಿ ಟಿಕೆಟ್ ಕಳ್ಳಾಟ ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ತಂತ್ರಜ್ಞಾನದ ಮೊರೆಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಟಿಕೆಟ್ ಬದಲಿಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತಂದು ಬಸ್ ನಲ್ಲಿ ಉಚಿತ ಸಂಚಾರ ಮಾಡಲು ಅವಕಾಶ ಮಾಡಿಕೊಡಲು ಸರ್ಕಾರ ಪ್ಲಾನ್ ಮಾಡಿದೆ.
ಈ ಮೊದಲಿನಿಂದಲೂ ಮಹಿಳೆಯರ ಫ್ರೀ ಬಸ್ ಟಿಕೆಟ್ ನಲ್ಲಿ ಬಹಳಷ್ಟು ಗೋಲ್ ಮಾಲ್ ನಡೆಯುತ್ತಿದ್ದು, ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದವು. ಕೆಲವೊಮ್ಮೆ ಮಹಿಳಾ ಪ್ರಯಾಣಿಕರು ಇಲ್ಲದಿದ್ದರು ಕೂಡ ಕಂಡಕ್ಟರ್ ಹೆಚ್ಚಿನ ಟಿಕೆಟ್ ಲೆಕ್ಕ ನೀಡ್ತಿದ್ದಾರೆ ಅನ್ನೋ ಆರೋಪವಿದೆ.
Comments