Exit polls: ಪಂಚ ರಾಜ್ಯಗಳ ಚುನಾವಣೆ, ದೀದಿಗೆ ಶಾಕ್: BJP ತೆಕ್ಕೆಗೆ ಬಂಗಾಳ, ಅಸ್ಸಾಂನಲ್ಲೂ ಕಮಲ ಮ್ಯಾಜಿಕ್!

ನವದೆಹಲಿ: ಪಶ್ಚಿಮ ಬಂಗಾಳದಲ್ಲಿನ 2ನೇ ಹಂತದ ಮತದಾನ ಅಂತ್ಯವಾಗುತ್ತಲೇ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಹೊರಬಿದಿದ್ದು, ಪಶ್ಚಿಮ ಬಂಗಾಳದಲ್ಲಿ ಹಾಲಿ ಸಿಎಂ ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆಯಾಗಿದೆ. ಅಂತೆಯೇ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. ಕೇರಳ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯವಾಗಿದ್ದು, ಕೇರಳದಲ್ಲಿ ಎಲ್ ಡಿಎಫ್, ತಮಿಳುನಾಡಿನಲ್ಲಿ ಡಿಎಂಕೆ, ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಂಗಾಳದಲ್ಲಿ ಬಿಜೆಪಿ ಇತಿಹಾಸ
ಇನ್ನು ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ನೆಪದಲ್ಲೇ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಹಾಲಿ ಲಭಿಸಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ 4 ರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಲಾಗಿದೆ.
ಮ್ಯಾಟ್ರಿಜ್, ಪ್ರಜಾ ಸಮೀಕ್ಷೆ, ಸಮೀಕ್ಷೆಯ ದಿನಚರಿ ಮತ್ತು ಚಾಣಕ್ಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಅಧಿಕಾರದ ಗುದ್ದುಗೆ ಏರಲಿದೆ ಎಂದು ಹೇಳಲಾಗಿದೆ. ಮ್ಯಾಟ್ರಿಜ್
ಬಿಜೆಪಿ: 146-161
ಟಿಎಂಸಿ: 125-140
ಇತರರು: 6-10
ಪ್ರಜಾ ಸಮೀಕ್ಷೆ
ಬಿಜೆಪಿ: 178-208
ಟಿಎಂಸಿ: 85-110
ಇತರರು: 0-5
ಸಮೀಕ್ಷೆಯ ದಿನಚರಿ
ಬಿಜೆಪಿ: 142-171
ಟಿಎಂಸಿ: 99-127
ಇತರರು: 5-9
ಚಾಣಕ್ಯ
ಬಿಜೆಪಿ: 150-160
ಟಿಎಂಸಿ: 130-140
ಇತರರು: 6-10





Comments