top of page

Firozabad: ಪುರಾತನ ದೇವಾಲಯಗಳು ಪತ್ತೆ; ಯೋಗಿ ನಾಡಲ್ಲಿ ಮತ್ತೆ ಉತ್ಖನನ, ಬಯಲಾಗುತ್ತಿದೆ ಇತಿಹಾಸ!

  • Writer: new waves technology
    new waves technology
  • Jan 8
  • 1 min read

ಹಿಂದೂ ಬಲಪಂಥೀಯ ಸಂಘಟನೆಗಳ ಮನವಿಯ ಮೇರೆಗೆ ಪೋಲೀಸರ ಮೇಲ್ವಿಚಾರಣೆಯಲ್ಲಿ ಉತ್ಖನನವನ್ನು ಆರಂಭಿಸಲಾಗಿದೆ.

ಲಖನೌ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಧಿಕಾರಿಗಳು ಬುಧವಾರ ಎರಡು ಸ್ಥಳಗಳಲ್ಲಿ 'ಪ್ರಾಚೀನ ದೇವಾಲಯಗಳು' ಪತ್ತೆಯಾದ ನಂತರ ಉತ್ಖನನವನ್ನು ಪ್ರಾರಂಭಿಸಿದ್ದಾರೆ.

ಹಿಂದೂ ಬಲಪಂಥೀಯ ಸಂಘಟನೆಗಳ ಮನವಿಯ ಮೇರೆಗೆ ಪೋಲೀಸರ ಮೇಲ್ವಿಚಾರಣೆಯಲ್ಲಿ ಉತ್ಖನನವನ್ನು ಆರಂಭಿಸಲಾಗಿದೆ.

ರಸೂಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶ್ಮೀರಿ ಗೇಟ್ ಪ್ರದೇಶದ ಮೊಹಮ್ಮದಿ ಮಸೀದಿ ಬಳಿ ಇರುವ ಎರಡು ಸ್ಥಳಗಳಲ್ಲಿ ಎರಡು ದಿನಗಳ ಪುರಾತನ ದೇವಾಲಯಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಸಂಘಟನೆಗಳ ಮನವಿಯ ಮೇರೆಗೆ ಎರಡೂ ಸಮುದಾಯದವರೊಂದಿಗೆ ಸಮಾಲೋಚನೆ ನಡೆಸಿ ಶಾಂತಿಯುತವಾಗಿ ಕೆಲಸ ಆರಂಭಿಸಲಾಗಿದೆ ಎಂದು ರಸೂಲ್‌ಪುರ ಠಾಣಾಧಿಕಾರಿ ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಬಜರಂಗದಳದ ಜಿಲ್ಲಾಧ್ಯಕ್ಷ ಮೋಹನ್ ಬಜರಂಗಿ, ಈ ರಚನೆಯು ಶಿವ ದೇವಾಲಯದಂತೆ ಕಾಣುತ್ತದೆ ಎಂದು ಹೇಳಿದ್ದಾರೆ. ಉತ್ಖನನ ಪೂರ್ಣಗೊಂಡ ನಂತರ ವಿಗ್ರಹಗಳು ಮತ್ತು ಕಲಾಕೃತಿಗಳ ಬಗ್ಗೆ ವಿವರಗಳು ಹೊರಬರುತ್ತವೆ ಎಂದು ಅವರು ಹೇಳಿದರು.

ಈ ಪ್ರದೇಶ ಸುಮಾರು 60 ವರ್ಷಗಳ ಹಿಂದೆ ಹಿಂದೂ ಕುಟುಂಬಗಳ ಒಡೆತನದ ಕೃಷಿಭೂಮಿಯ ಭಾಗವಾಗಿತ್ತು ಎಂದು ಈ ಪ್ರದೇಶದ ಸ್ಥಳೀಯರಾದ ಅಕೀಲ್ ಅಹಮದ್ ಹೇಳಿದರು. ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ ನಂತರ ಹಲವಾರು ಹಿಂದೂ ಕುಟುಂಬಗಳು ಈ ಸ್ಥಳವನ್ನು ತೊರೆದರು ಎಂದು ಹೇಳಲಾಗುತ್ತಿದೆ.


ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಚಿಸ್ತಿನಗರದ 60 ಅಡಿ ರಸ್ತೆ ಪ್ರದೇಶದಲ್ಲಿ ಮತ್ತೊಂದು 'ದೇವಾಲಯ' ಪತ್ತೆಯಾಗಿದೆ. ವಿಶ್ವ ಹಿಂದೂ ಪರಿಷತ್ತಿನ ಫಿರೋಜಾಬಾದ್ ಘಟಕದ ಅಧ್ಯಕ್ಷ ರಾಜೀವ್ ಶರ್ಮಾ ಅವರು ತಮ್ಮ ತಂಡದೊಂದಿಗೆ ಪೊಲೀಸರು ಮತ್ತು ಸ್ಥಳೀಯ ಮುಸ್ಲಿಮರ ಸಮ್ಮುಖದಲ್ಲಿ ಸ್ಥಳವನ್ನು ಸ್ವಚ್ಛಗೊಳಿಸಿದರು.

ರಾಮಗಢ ಎಸ್‌ಎಚ್‌ಒ ಸಂಜೀವ್ ದುಬೆ ಮಾತನಾಡಿ, ಸುಮಾರು 50 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಿಂದೂಗಳ ಪ್ರಾಬಲ್ಯವಿತ್ತು ಮತ್ತು ದೇವಸ್ಥಾನವಿತ್ತು. "ಈಗ ಈ ಪ್ರದೇಶ ಮುಸ್ಲಿಂ ಪ್ರಾಬಲ್ಯ ಹೊಂದಿದೆ. ಉತ್ಖನನ ಕಾರ್ಯ ನಡೆಯುತ್ತಿದೆ ಮತ್ತು ಪ್ರದೇಶದಲ್ಲಿ ಕೋಮು ಸೌಹಾರ್ದತೆ ಇದೆ" ಎಂದು ಹೇಳಿದ್ದಾರೆ.

Comments


bottom of page