top of page

GDP size: ಭಾರತ ಇನ್ನೂ ಜಪಾನ್ ಹಿಂದಿಕ್ಕಿಲ್ಲ; ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿಲ್ಲ!

  • Writer: new waves technology
    new waves technology
  • May 27
  • 1 min read

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMP)ಅಂದಾಜಿನಂತೆ, 2024-25ರ ಆರ್ಥಿಕ ವರ್ಷದ ಕೊನೆಯಲ್ಲಿ ಭಾರತದ ಜಿಡಿಪಿ 3.9 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.

ನವದೆಹಲಿ: ಜಪಾನ್ ದೇಶವನ್ನು ಹಿಂದಿಕ್ಕಿದ ಭಾರತ ಜಗತ್ತಿನ 4ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ನಿನ್ನೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಇದು ಸುಳ್ಳು, ಭಾರತ ಇನ್ನೂ ಜಪಾನ್ ಹಿಂದಿಕ್ಕಿ, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿಲ್ಲ ಹೊರಹೊಮ್ಮಿಲ್ಲ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMP)ಅಂದಾಜಿನಂತೆ, 2024-25ರ ಆರ್ಥಿಕ ವರ್ಷದ ಕೊನೆಯಲ್ಲಿ ಭಾರತದ ಜಿಡಿಪಿ 3.9 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇದೇ ವೇಳೆ ಜಪಾನ್ ಜಿಡಿಪಿ ಪ್ರಮಾಣ 4. 026 ಟ್ರಿಲಿಯನ್ ಡಾಲರ್ ನಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಿದೆ.

ನೀತಿ ಆಯೋಗದ ಸಭೆ ಬಳಿಕ ಮಾತನಾಡಿದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ, ನಾವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿವೆ. ಇದು ನನ್ನ ಡೇಟಾ ಅಲ್ಲ. ಐಎಂಎಫ್ ಡೇಟಾ. ಭಾರತದ ಆರ್ಥಿಕತೆ ಜಪಾನ್ ಗಿಂತ ಹೆಚ್ಚಾಗಿದೆ ಎಂದು ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತಗತಿಯಲ್ಲಿ ಹರಡಿ ವೈರಲ್ ಆದ ಬಳಿಕ ಗೊಂದಲ ಪ್ರಾರಂಭವಾಗಿತ್ತು.

ಆದಾಗ್ಯೂ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಇನ್ನೂ ಜಪಾನ್ ಆರ್ಥಿಕತೆಯನ್ನು ಹಿಂದಿಕ್ಕಿಲ್ಲ ಎಂದೇ ಹೇಳಿದೆ. IMF ಪ್ರಕಾರ, FY26 ರ ಅಂತ್ಯದ ವೇಳೆಗೆ ಭಾರತದ GDP ಗಾತ್ರ ಜಪಾನ್‌ಗಿಂತ ಹಿಂದೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ. ಆ ಸಮಯದಲ್ಲಿ ಭಾರತದ ಜಿಡಿಪಿ $ 4.187 ಟ್ರಿಲಿಯನ್‌ಗೆ ತಲುಪುವ ನಿರೀಕ್ಷೆಯಿದೆ. ಇದು ಜಪಾನ್‌ನ $ 4.186 ಟ್ರಿಲಿಯನ್‌ಗಿಂತ ಸ್ವಲ್ಪ ಮುಂದಿರುತ್ತದೆ.

ತಪ್ಪು ತಿಳುವಳಿಕೆಗೆ ಪ್ರಮುಖ ಕಾರಣ: ಗಮನಾರ್ಹವಾಗಿ IMF ಭಾರತದ ಆರ್ಥಿಕ ವರ್ಷವನ್ನು (ಏಪ್ರಿಲ್-ಮಾರ್ಚ್) ಕ್ಯಾಲೆಂಡರ್ ವರ್ಷವಾಗಿ ಪ್ರಸ್ತುತಪಡಿಸುತ್ತದೆ. ಇದು ತಪ್ಪು ತಿಳುವಳಿಕೆಗೆ ಕಾರಣವಾಗಿದೆ. IMF 2024-25 ಹಣಕಾಸಿನ ವರ್ಷವನ್ನು FY24 ಎಂದು ತೋರಿಸುತ್ತದೆ. ಆದರೆ ಭಾರತದಲ್ಲಿ 2024-25 ಹಣಕಾಸಿನ ವರ್ಷವನ್ನು FY25 ಎಂದು ಹೇಳಲಾಗುತ್ತದೆ.

ಈ ತಪ್ಪಿನ ಕಾರಣದಿಂದ IMFನ 2025 ರ ಅಂದಾಜನ್ನು ತಪ್ಪಾಗಿ ಅರ್ಥೈಸಲು ಕಾರಣವಾಗಿರಬಹುದು. ಈ ಕುರಿತ ಸ್ಪಷ್ಟನೆಗಾಗಿ ನೀತಿ ಆಯೋಗ ಸಂಪರ್ಕಿಸಲು TNIE ಪ್ರಯತ್ನಿಸಿತು. ಆದರೆ ಅವರಿಂದ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ.

ಈ ಮಧ್ಯೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI), ತನ್ನ ಮೊದಲ ಮುಂಗಡ ಅಂದಾಜಿನಲ್ಲಿ, FY25 ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ₹324 ಲಕ್ಷ ಕೋಟಿಗೆ ನಿಗದಿಪಡಿಸಿದೆ. ಪ್ರತಿ ಡಾಲರ್‌ಗೆ ₹84 ರ ಸರಾಸರಿ ವಿನಿಮಯ ದರದಲ್ಲಿ ಭಾರತದ ಜಿಡಿಪಿಯನ್ನು ಸುಮಾರು $3.85 ಟ್ರಿಲಿಯನ್‌ನಲ್ಲಿ ಇರಿಸಿದೆ. ಇದು ಜಪಾನ್‌ಗಿಂತ ಹಿಂದಿದೆ.

MoSPI ಮೇ 30, 2025 ರಂದು ನಾಲ್ಕನೇ ತ್ರೈಮಾಸಿಕದ GDP ಡೇಟಾವನ್ನು ಬಿಡುಗಡೆ ಮಾಡಿದಾಗ ಸ್ಪಷ್ಟವಾದ ಚಿತ್ರಣ ಸಿಗಲಿದೆ.

Comments


bottom of page