Gold Rate: ಕೊನೆಗೂ ಬಂಗಾರದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದರ ಕೂಡ ಭಾರಿ ಕುಸಿತ!
- new waves technology
- Dec 5, 2024
- 1 min read
ನವೆಂಬರ್ ತಿಂಗಳಾಂತ್ಯದಲ್ಲಿ ಏರಿಕೆಯಾಗಿದ್ದ ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಡಿಸೆಂಬರ್ ಮೊದಲ ವಾರದಲ್ಲೇ ಭಾರಿ ಇಳಿಕೆ ಕಂಡಿದೆ.

ನವದೆಹಲಿ: ಗಗನದತ್ತ ಮುಖ ಮಾಡಿದ್ದ ಬಂಗಾರದ ಬೆಲೆ ಕೊನೆಗೂ ಇಳಿಕೆಯಾಗಿದ್ದು, ಬೆಳ್ಳಿ ದರ ಕೂಡ ಭಾರಿ ಕುಸಿತ ಕಂಡಿದೆ.
ಹೌದು.. ನವೆಂಬರ್ ತಿಂಗಳಾಂತ್ಯದಲ್ಲಿ ಏರಿಕೆಯಾಗಿದ್ದ ಮಹಿಳೆಯರ ಅಚ್ಚುಮೆಚ್ಚಿನ ಹಳದಿ ಲೋಹ ಚಿನ್ನ ಡಿಸೆಂಬರ್ ಮೊದಲ ವಾರದಲ್ಲೇ ಭಾರಿ ಇಳಿಕೆ ಕಂಡಿದೆ. ಸೋಮವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 650 ರೂ ಗಳಷ್ಟು ಇಳಿಕೆ ಕಂಡಿದೆ.
ಕಳೆದ ಶುಕ್ರವಾರ ಚಿನಿವಾರ ಪೇಟೆಯಲ್ಲಿ ಬರೊಬ್ಬರಿ 760 ರೂಗಳ ವರೆಗೂ ಏರಿಕೆಯಾಗಿದ್ದ ಚಿನ್ನದ ದರ ಇಂದು 650 ರೂ ಗಳಷ್ಟು ಇಳಿಕೆ ಕಂಡಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ. ಶೇ. 99.9 ರಷ್ಟು ಶುದ್ಧತೆ ಅಂದರೆ 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಪ್ರತೀ ಗ್ರಾಂಗೆ 65 ರೂ ಇಳಿಕೆಯಾಗಿದೆ. ಅಂತೆಯೇ 22 ಕ್ಯಾರೆಟ್ ಚಿನ್ನದ ದರದಲ್ಲಿ 60ರೂ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ 49 ರೂ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ ಇಂತಿದ್ದು, 22 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 600ರೂ ಇಳಿಕೆಯಾಗಿ, 70,900 ರೂಗೆ ಕುಸಿದಿದೆ. ಅಂತೆಯೇ 18 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 490ರೂ ಇಳಿಕೆಯಾಗಿ, 58,010 ರೂ ತಲುಪಿದೆ. ಅಂತೆಯೇ 24 ಕ್ಯಾರೆಟ್ ನ ಚಿನ್ನದ ದರದಲ್ಲಿ 650 ರೂ ಇಳಿಕೆಯಾಗಿ 77,350 ರೂ ತಲುಪಿದೆ. ಶುಕ್ರವಾರ ಈ ದರ 78,000ರೂ ಗಳಷ್ಟಿತ್ತು.
ಬೆಳ್ಳಿ ದರದಲ್ಲೂ ಕುಸಿತ
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 91,000 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 910, ರೂ. 9,100 ಹಾಗೂ ರೂ. 91,000 ಗಳಾಗಿವೆ.
Comments