top of page

ICC Champions Trophy 2025: ಆಫ್ಘಾನಿಸ್ತಾನ ಭರ್ಜರಿ ಪ್ರದರ್ಶನಕ್ಕೆ ಕಂಗೆಟ್ಟ 'ಪ್ರಬಲ ಆಸ್ಟ್ರೇಲಿಯಾ', ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಕಳಪೆ ದಾಖಲೆ!

  • Writer: new waves technology
    new waves technology
  • Feb 28
  • 2 min read

ಆಸ್ಟ್ರೇಲಿಯಾ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ಚಾಂಪಿಯನ್ಸ್ ಟ್ರೋಫಿ ಇತಿಹಾಸ ಕಳದೆ ದಾಖಲೆ ನಿರ್ಮಿಸಿದೆ.

ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ಪೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಬಲ ಆಸ್ಟ್ರೇಲಿಯಾಗೆ ಟಕ್ಕರ್ ನೀಡಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಇಂದು ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ಆಫ್ಘಾನಿಸ್ತಾನ ನಿಗಧಿತ 50 ಓವರ್ ನಲ್ಲಿ 273 ರನ್ ಪೇರಿಸಿ ಆಲೌಟ್ ಆಗಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಆಫ್ಘಾನಿಸ್ತಾನಕ್ಕೆ ಮೊದಲ ಓವರ್ ನಲ್ಲೇ ಆಘಾತ ಎದುರಾಯಿತು.

ತಂಡದ ಆರಂಭಿಕ ಅಟಗಾರ ಗುರ್ಬಾಜ್ ಸ್ಪೆನ್ಸರ್ ಜಾನ್ಸನ್ ಬೌಲಿಂಗ್ ನಲ್ಲಿ ಶೂನ್ಯಕ್ಕೆ ಔಟಾದರು. ಬಳಿಕ ಜೊತೆ ಗೂಡಿದ ಇಬ್ರಾಹಿಂ ಜಡ್ರಾನ್ (22 ರನ್) ಮತ್ತು ಸೆದ್ದಿಕುಲ್ಲಾ ಅಟಲ್ (85 ರನ್) ಅರ್ಧಶತಕದ ಜೊತೆಯಾಟವಾಡಿದರು. ಆದರೆ ಈ ಹಂತದಲ್ಲಿ 22 ರನ್ ಗಳಿಸಿದ್ದ ಇಬ್ರಾಹಿಂ ಜಡ್ರಾನ್ ಆ್ಯಡಂ ಜಂಪಾ ಬೌಲಿಂಗ್ ನಲ್ಲಿ ಔಟಾದರು. ಜಡ್ರಾನ್ ಬೆನ್ನಲ್ಲೇ ರಹ್ಮತ್ (12 ರನ್), ನಾಯಕ ಶಾಹಿದಿ (20 ರನ್) ಬೇಗನೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

ಈ ಹಂತದಲ್ಲಿ ಸೆದ್ದಿಕುಲ್ಲಾ ಅಟಲ್ ರನ್ನು ಜೊತೆ ಗೂಡಿದ ಅಜ್ಮತುಲ್ಲಾ (67 ರನ್) ಆಫ್ಘಾನಿಸ್ತಾನಕ್ಕೆ ಬೆನ್ನೆಲುಬಾಗಿ ನಿಂತರು. ಈ ಜೋಡಿ 68 ರನ್ ಗಳ ಜೊತೆಯಾಟವಾಡಿತು. ಸೆದ್ದಿಕುಲ್ಲಾ 85 ರನ್ ಗಳಿಸಿ ಔಟಾದರೆ, ಅಜ್ಮತುಲ್ಲಾ 67 ರನ್ ಗಳಿಸಿ ಇನ್ನಿಂಗ್ಸ್ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆಫ್ಗಾನಿಸ್ತಾನ ನಿಗಧಿತ 50 ಓವರ್ ನಲ್ಲಿ 273 ರನ್ ಪೇರಿಸಿ ಆಲೌಟ್ ಆಯಿತು.

ಆಸ್ಟ್ರೇಲಿಯಾ ಪರ ಡ್ವಾರ್ ಶೂಯಿಸ್ 3 ವಿಕೆಟ್ ಪಡೆದರೆ, ಸ್ಪೆನ್ಸರ್ ಜಾನ್ಸನ್ ಮತ್ತು ಆ್ಯಡಂ ಜಂಪಾ ತಲಾ 2 ವಿಕೆಟ್ ಪಡೆದರೆ, ನಾಥನ್ ಎಲ್ಲಿಸ್ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.


ಕಂಗೆಟ್ಟ ಪ್ರಬಲ ಆಸ್ಟ್ರೇಲಿಯಾ, ದಾಖಲೆಯ ಎಕ್ಸ್ ಟ್ರಾ ರನ್

ಇನ್ನು ಇದೇ ಪಂದ್ಯದಲ್ಲಿ ಆಸ್ಚ್ರೇಲಿಯಾ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ಚಾಂಪಿಯನ್ಸ್ ಟ್ರೋಫಿ ಇತಿಹಾಸ ಕಳದೆ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಬರೊಬ್ಬರಿ 37 ರನ್ ಎಕ್ಸ್ ಟ್ರಾ ನೀಡಿದ್ದು, ಈ ಪೈಕಿ 17 ವೈಡ್, ಬೈಸ್ 5 ಮತ್ತು ಲೆಗ್ ಬೈಸ್ ರೂಪದಲ್ಲಿ 15ರನ್ ನೀಡಲಾಗಿದೆ.

ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ 3ನೇ ದುಬಾರಿ ಹೆಚ್ಚುವರಿ ರನ್ ನೀಡಿಕೆಯಾಗಿದೆ. ಇದಕ್ಕೂ ಮೊದಲು 2004ರಲ್ಲಿ ಕೀನ್ಯಾ ವಿರುದ್ಧ ಭಾರತ ತಂಡ 42 ರನ್ ಗಳನ್ನು ಹೆಚ್ಚುವರಿಯಾಗಿ ನೀಡಿತ್ತು. ಇದು ಮೊದಲ ಸ್ಥಾನದಲ್ಲಿದ್ದು, 2002ರಲ್ಲಿ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ 38ರನ್ ನೀಡಿತ್ತು. ಇದು 2ನೇ ಸ್ಥಾನದಲ್ಲಿದೆ.

Most extras conceded in a Champions Trophy innings

  • 42 - IND vs KEN, The Rose Bowl, 2004

  • 38 - NED vs SL, Colombo (RPS), 2002

  • 37 - AUS vs AFG, Lahore, 2025

  • 36 - SL vs BAN, Mohali, 2006

  • 36 - AUS vs WI, Johannesburg, 2009

コメント


bottom of page