ICC Womens T20 World Cup: ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್, ದಾಖಲೆ ಬರೆದ Smriti Mandhana
- new waves technology
- Oct 24, 2024
- 2 min read
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಸ್ಮೃತಿ ಮಂದಾನ ಕೇವಲ 38 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 50 ರನ್ ಚಚ್ಚಿದರು. ಇದು ಈ ವರ್ಷದಲ್ಲಿ ಅವರು ದಾಖಲಿಸಿದ 7ನೇ ಟಿ20 ಅರ್ಧಶತಕವಾಗಿದೆ.

ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ಸ್ಮೃತಿ ಮಂದಾನ 2 ದಾಖಲೆಗಳನ್ನು ನಿರ್ಮಿಸಿದ್ದಾರೆ.
ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಸ್ಮೃತಿ ಮಂದಾನ ಕೇವಲ 38 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 50 ರನ್ ಚಚ್ಚಿದರು. ಇದು ಈ ವರ್ಷದಲ್ಲಿ ಅವರು ದಾಖಲಿಸಿದ 7ನೇ ಟಿ20 ಅರ್ಧಶತಕವಾಗಿದೆ.
ICC Womens T20 World Cup 2024: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ದಾಖಲೆಯ ಭರ್ಜರಿ ಜಯ, ಟೂರ್ನಿಯಿಂದ ಶ್ರೀಲಂಕಾ ಔಟ್
ಒಂದೇ ವರ್ಷ ಅತೀ ಹೆಚ್ಚು ಅರ್ಧಶತಕ
ಈ ಅರ್ಧಶತಕದ ಮೂಲಕ ಸ್ಮೃತಿ ಮಂದಾನ ಹಾಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಋತುವಿನಲ್ಲಿ ಅತೀ ಹೆಚ್ಚು ಅರ್ಧಶತಕ ಗಳಿಸಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 2018ರಲ್ಲಿ ನ್ಯೂಜಿಲೆಂಡ್ ನ ಸುಜಿ ಬೇಟ್ಸ್ ಮತ್ತು ಸೋಫಿ ಡಿವೈನ್ ತಲಾ 6 ಅರ್ಧ ಶತಕ ಸಿಡಿಸಿದ್ದರು. ಈ ದಾಖಲೆಯನ್ನು ಇದೀಗ ಸ್ಮೃತಿ ಮಂದಾನ ಹಿಂದಿಕ್ಕಿದ್ದಾರೆ.
Most 50-plus stands in a calendar year in WT20Is (any wicket)
7 - Smriti Mandhana, Shafali Verma (IND-W, 2024)
6 - Suzie Bates, Sophie Devine (NZ-W, 2018)
6 - Alyssa Healy, BL Mooney (AUS-W, 2018)
6 - Tazmin Brits, Laura Wolvaardt (SA-W, 2023)
6 - Kavisha Egodage & Esha Oza (UAE-W, 2023)
ಶಫಾಲಿ ವರ್ಮಾ ಜೊತೆ ಜಂಟಿ ದಾಖಲೆ
ಇನ್ನು ಇಂದಿನ ಪಂದ್ಯದಲ್ಲಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ 98 ರನ್ ಗಳ ಅಮೋಘ ಜೊತೆಯಾಟವಾಡಿತ್ತು. 43 ರನ್ ಗಳಿಸಿ ಶಫಾಲಿ ವರ್ಮಾ ಔಟಾದರೆ, ಮಂದಾನ ಅರ್ಧಶತಕ ಸಿಡಿಸಿ ಔಟಾದರು. ಈ ಮೂಲಕ ಹಾಲಿ ವರ್ಷದ ಟಿ20 ಕ್ರಿಕೆಟ್ ನಲ್ಲಿ ಈ ಜೋಡಿ ತಮ್ಮ ಜೊತೆಯಾಟದ ರನ್ ಗಳಿಕೆಯನ್ನು 825ರನ್ ಗಳಿಕೆ ಏರಿಕೆ ಮಾಡಿಕೊಂಡಿದ್ದು, ಇದು ಮಹಿಳಾ ಟಿ20ಯಲ್ಲಿ ಜೋಡಿಯೊಂದು ಗಳಿಸಿದ ಗರಿಷ್ಠ ಜೊತೆಯಾಟವಾಗಿದೆ. ಇದಕ್ಕೂ ಮೊದಲು 2019ರಲ್ಲಿ ಥಾಯ್ಲೆಂಡ್ ನ ನರುಯೆಮೊಳ್ ಚೈವೈ ಮತ್ತು ನಟ್ಠಕಾನ್ ಚಂತಂ ಜೋಡಿ 723 ರನ್ ಗಳಿಸಿತ್ತು.
Most partnership runs in a calendar year in WT20Is (any wicket)
825 - Smriti Mandhana, Shafali Verma (IND-W, 2024)
723 - Naruemol Chaiwai, Natthakan Chantham (THA-W, 2019)
708 - Tazmin Brits, Laura Wolvaardt (SA-W, 2023)
680 - Suzie Bates, Sophie Devine (NZ-W, 2018)
留言