top of page

India-Pak War: 'ಭಾರತ ದಾಳಿಯಿಂದ ಭಾರಿ ನಷ್ಟ.. ಆರ್ಥಿಕ ಸಹಾಯ ಮಾಡಿ'; 2 ದಿನಕ್ಕೇ ಬೊಕ್ಕಸ ಖಾಲಿ.. ಜಗತ್ತಿನ ಮುಂದೆ ಮತ್ತೆ 'ಕೈ ಚಾಚಿದ' Pakistan, ಜನರ ATM ವಿತ್ ಡ್ರಾಗೂ ಮಿತಿ!

  • Writer: new waves technology
    new waves technology
  • May 9
  • 1 min read

ಪಾಕಿಸ್ತಾನದ ಬೊಕ್ಕಸ ಕೇವಲ ಯುದ್ಧ ಆರಂಭವಾದ 48 ಗಂಟೆಗಳಲ್ಲೇ ಖಾಲಿಯಾಗಿದ್ದು, ಪಾಕಿಸ್ತಾನ ಆರ್ಥಿಕ ನೆರವಿಗಾಗಿ ಮತ್ತೆ ಜಾಗತಿಕ ಸಮುದಾಯದ ಮುಂದೆ ಕೈಚಾಚಿದೆ.

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿದ್ದು, ಯುದ್ಧ ಆರಂಭವಾದ 48 ಗಂಟೆಗಳಲ್ಲೇ ಪಾಕಿಸ್ತಾನ ದಿವಾಳಿಯಾಗಿದೆ.

ಹೌದು.. ಪಹಲ್ಗಾಮ್ ಉಗ್ರ ದಾಳಿ ಮತ್ತು ಇದಕ್ಕೆ ಉತ್ತರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಏರ್ ಸ್ಟ್ರೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಯುದ್ಧ ರೀತಿಯ ವಾತಾವರಣ ರೂಪುಗೊಂಡಿದೆ.

ಬುಧವಾರ ರಾತ್ರಿಯಿಂದ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪಾಕಿಸ್ತಾನದ ಬೊಕ್ಕಸ ಕೇವಲ ಯುದ್ಧ ಆರಂಭವಾದ 48 ಗಂಟೆಗಳಲ್ಲೇ ಖಾಲಿಯಾಗಿದ್ದು, ಪಾಕಿಸ್ತಾನ ಆರ್ಥಿಕ ನೆರವಿಗಾಗಿ ಮತ್ತೆ ಜಾಗತಿಕ ಸಮುದಾಯದ ಮುಂದೆ ಕೈಚಾಚಿದೆ.

ಈ ಬಗ್ಗೆ ಸ್ವತಃ ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದ್ದು, ಟ್ವೀಟ್ ಮೂಲಕ ಆರ್ಥಿಕ ನೆರವು ನೀಡುವಂತೆ ತನ್ನ ಮಿತ್ರ ರಾಷ್ಟ್ರಗಳಿಗೆ ಕೇಳಿಕೊಂಡಿದೆ.

ಭಾರತದ ಆಪರೇಷನ್ ಸಿಂಧೂರ ಮತ್ತು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ಮಾಡುತ್ತಿರುವುದರಿಂದ, ಪಾಕಿಸ್ತಾನ ಸರ್ಕಾರವು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದು, ಈ ಸಂಬಂಧ ಸಾಲಗಳನ್ನು ಒದಗಿಸುವಂತೆ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಪಾಕಿಸ್ತಾನ ಸರ್ಕಾರ ಮನವಿ ಮಾಡಿದೆ. ಷೇರುಗಳು ಕುಸಿಯುತ್ತಿರುವುದರಿಂದ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ಅಂತರರಾಷ್ಟ್ರೀಯ ಪಾಲುದಾರರಿಗೆ ಅದು ಮನವಿ ಮಾಡಿದೆ.

'ಭಾರತದ ಸೇನಾ ದಾಳಿಯಿಂದ ಪಾಕಿಸ್ತಾನಕ್ಕೆ ತೀವ್ರ ನಷ್ಟವಾಗಿದೆ. ಪಾಕಿಸ್ತಾನವು ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಮಾರುಕಟ್ಟೆ ಕುಸಿತದ ಮಧ್ಯೆ, ಸೇನಾ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ನಾವು ಅಂತರರಾಷ್ಟ್ರೀಯ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ನೆರವು ನೀಡುವಂತೆ ಒತ್ತಾಯಿಸುತ್ತೇವೆ' ಎಂದು ಟ್ವೀಟ್ ಮಾಡಿದೆ.

ಪಾಕ್ ಪ್ರಜೆಗಳ ಹಣಕ್ಕೂ ಕುತ್ತು; ATM ವಿತ್ ಡ್ರಾಗೆ ಮಿತಿ

ಇನ್ನು ಅತ್ತ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪಾಕಿಸ್ತಾನ ಆರ್ಥಿಕ ವ್ಯವಹಾರಗಳ ಸಚಿವಾಲಯ ತನ್ನದೇ ಪ್ರಜೆಗಳಿಗೆ ಶಾಕ್ ನೀಡಿದ್ದು, ಆರ್ಥಿಕ ಸಂಕಷ್ಟ ನಿರ್ವಹಣೆಗಾಗಿ ಪಾಕ್ ಪ್ರಜೆಗಳ ಬ್ಯಾಂಕ್ ಎಟಿಎಂ ವಿತ್ ಡ್ರಾಗೆ ಮಿತಿ ಹೇರಿದೆ. ದಿನವೊಂದಕ್ಕೆ ಕೇವಲ 3 ಸಾವಿರ ರೂ ಮಾತ್ರ ವಿತ್ ಡ್ರಾ ಮಾಡಲು ಪಾಕ್ ಪ್ರಜೆಗಳಿಗೆ ಮಿತಿ ಹೇರಿದೆ. ಅಲ್ಲದೆ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವ ವರೆದೂ ಬ್ಯಾಂಕ್ ಗಳಿಂದ ಹಣ ವಿತ್ ಡ್ರಾ ಮಾಡದಂತೆ ಮನವಿ ಮಾಡುತ್ತಿದೆ.

コメント


bottom of page