Indian Stock Market: Sensex, ನಿಫ್ಟಿ ಸೂಚ್ಯಂಕ ಅಲ್ಪ ಏರಿಕೆ, ಬ್ಯಾಂಕಿಂಗ್ ಷೇರು ಮೌಲ್ಯ ಕುಸಿತ
- new waves technology
- Dec 11, 2024
- 1 min read
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.020ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.13ರಷ್ಟು ಏರಿಕೆ ದಾಖಲಿಸಿದೆ.

ಮುಂಬೈ: ಬುಧವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಏರಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಕೆಲವೇ ಅಂಕಗಳ ಏರಿಕೆ ಕಂಡಿದೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.020ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.13ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಕೇವಲ 16.09 ಅಂಕಗಳ ಏರಿಕೆಯೊಂದಿಗೆ 81,526.14 ಅಂಕಗಳಿಗೆ ಏರಿದ್ದರೆ, ನಿಫ್ಟಿ 31.75 ಅಂಕಗಳ ಅಲ್ಪ ಏರಿಕೆಯೊಂದಿಗೆ 24,641.80 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ವಿಭಾಗದ ಷೇರುಗಳ ಮೌಲ್ಯ ಕುಸಿತವಾಗಿದ್ದು, ದಿನದ ವಹಿವಾಟು ಅಂತ್ಯವಾಗ ಕೊನೆಯ ಕ್ಷಣಗಳಲ್ಲಿ ಐಟಿ ವಲಯದ ಷೇರುಗಳ ಖರೀದಿ ಭರಾಟೆಯಿಂದಾಗಿ ಇಂದು ಮಾರುಕಟ್ಟೆ ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟ್ರೆಂಟ್, ಬಜಾಜ್ ಫೈನಾನ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ಶ್ರೀರಾಮ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದ್ದು, JSW ಸ್ಟೀಲ್, ಅದಾನಿ ಪೋರ್ಟ್ಸ್, NTPC, SBI, ಆಕ್ಸಿಸ್ ಬ್ಯಾಂಕ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.
Comments