IPL 2025: ಇತಿಹಾಸ ಬರೆದ Yuzvendra Chahal, ವಿಂಡೀಸ್ ದೈತ್ಯ Sunil Narine ಐಪಿಎಲ್ ದಾಖಲೆ...
- new waves technology
- Apr 16
- 2 min read
ಪಂಜಾಬ್ ಪರ ಸ್ಪಿನ್ನರ್ ಯುಜುವೇಂದ್ರ ಚಹಲ್ ಮಾರಕ ಬೌಲಿಂಗ್ ಮಾಡಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಚಂಡೀಗಢ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಅಬ್ಬರದ ನಡುವೆ ಮೊದಲ ಬಾರಿಗೆ ಬೌಲಿಂಗ್ ವಿಭಾಗದಿಂದ ಅಚ್ಚರಿ ಫಲಿತಾಂಶ ಲಭ್ಯವಾಗಿದ್ದು, ಬೌಲಿಂಗ್ ನಲ್ಲಿಯೇ ಪಂಜಾಬ್ ತಂಡದ ಸ್ಪಿನ್ನರ್ ಯುಜುವೇಂದ್ರ ಚಹಲ್ (Yuzvendra Chahal ) ಇತಿಹಾಸ ಸೃಷ್ಟಿಸಿದ್ದಾರೆ.
ಹೌದು.. ನಿನ್ನೆ ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಕೇವಲ 111 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 15.1 ಓವರ್‌ನಲ್ಲಿ 95 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಕೋಲ್ಕತ್ತಾ ಹೀನಾಯವಾಗಿ ಸೋತಿತು.
ಪಂಜಾಬ್ ಪರ ಚಹಲ್ ಮಾರಕ ಬೌಲಿಂಗ್
ಇನ್ನು ಈ ಪಂದ್ಯದಲ್ಲಿ ಪಂಜಾಬ್ ತಂಡ ಕಳಪೆ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಜಯಿಸಿತು. ಪಂಜಾಬ್ ಪರ ಸ್ಪಿನ್ನರ್ ಯುಜುವೇಂದ್ರ ಚಹಲ್ ಮಾರಕ ಬೌಲಿಂಗ್ ಮಾಡಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ಈ ಪಂದ್ಯದಲ್ಲಿ ಚಹಲ್ 4 ಓವರ್ ಎಸೆದು, 28 ರನ್ ನೀಡಿ 4 ವಿಕೆಟ್ ಪಡೆದರು. ಅವರಿಗೆ ಉತ್ತಮ ಸಾಥ್ ನೀಡಿದ ಮಾರ್ಕೋ ಜಾನ್ಸೆನ್ 3.1 ಓವರ್ ಎಸೆದು 17ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಬರ್ಲೆಟ್, ಅರ್ಶ್ ದೀಪ್ ಸಿಂಗ್, ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.
4 ವಿಕೆಟ್ ಗೊಂಚಲು ಇತಿಹಾಸ ಬರೆದ ಚಹಲ್
ಇನ್ನು ನಿನ್ನೆಯ ಪಂದ್ಯದಲ್ಲಿ ಚಹಲ್ 4 ವಿಕೆಟ್ ಪಡೆದರು. ಇದು ಐಪಿಎಲ್ ಇತಿಹಾಸದಲ್ಲಿ ಅವರ 8ನೇ ಬಾರಿಯ 4 ವಿಕೆಟ್ ಗೊಂಚಲಾಗಿದೆ. ಆ ಮೂಲಕ ಚಹಲ್ ಅತೀ ಹೆಚ್ಚು ಬಾರಿ 4 ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ಸುನಿಲ್ ನರೈನ್ ಮಾಡಿದ್ದರು. ಅವರೂ ಕೂಡ 8 ಬಾರಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಶ್ರೀಲಂಕಾದ ಲಸಿತ್ ಮಾಲಿಂಗ 7 ಬಾರಿ, ಕಗಿಸೋ ರಬಾಡ 6, ಭಾರತದ ಅಮಿತ್ ಮಿಶ್ರಾ 5 ಬಾರಿ ಈ ಸಾಧನೆ ಮಾಡಿದ್ದಾರೆ. ಅಂತೆಯೇ ಇದು ಕೆಕೆಆರ್ ವಿರುದ್ಧ ಚಹಲ್ ರ 3ನೇ 4 ವಿಕೆಟ್ ಗೊಂಚಲಾಗಿದೆ.
Most 4-plus wicket hauls in the IPL
8 - Yuzvendra Chahal
8 - Sunil Narine
7 - Lasith Malinga
6 - Kagiso Rabada
5 - Amit Mishra
This was Chahal’s third 4-plus wicket haul vs KKR, the most by a bowler against an opponent in the IPL.
ಗರಿಷ್ಠ ವಿಕೆಟ್; ಎಲೈಟ್ ಗ್ರೂಪ್ ಸೇರಿದ ಚಹಲ್
ಇನ್ನು ಈ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 4 ವಿಕೆಟ್ ಪಡೆಯುವ ಮೂಲಕ ಚಹಲ್ ಒಂದೇ ತಂಡದ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಚಹಲ್ ಕೆಕೆಆರ್ ಮತ್ತು ಪಂಜಾಬ್ ವಿರುದ್ಧ ತಲಾ 32 ವಿಕೆಟ್ ಪಡೆದಿದ್ದು, ಈ ಪಟ್ಟಿಯಲ್ಲಿ 5ನೇ ಸ್ಥಾನಿಯಾಗಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಸುನಿಲ್ ನರೇನ್ ಅಗ್ರಸ್ಥಾನಿಯಾಗಿದ್ದು ಅವರ ಪಂಜಾಬ್ ಕಿಂಗ್ಸ್ ವಿರುದ್ಧ 36 ವಿಕೆಟ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿರುವ ಉಮೇಶ್ ಯಾದವ್ ಇದೇ ಪಂಜಾಬ್ ವಿರುದ್ಧ 35 ವಿಕೆಟ್ ಪಡೆದಿದ್ದಾರೆ.
Most wickets against a team in the IPL
36 - Sunil Narine vs PBKS
35 - Umesh Yadav vs PBKS
33 - Dwayne Bravo vs MI
33 - Mohit Sharma vs MI
33 - Yuzvendra Chahal vs KKR
32 - Yuzvendra Chahal vs PBKS
32 - Bhuvneshwar Kumar vs KKR ಅರ್ಶ್ ದೀಪ್ ಸಿಂಗ್ ಮೇಡನ್ ದಾಖಲೆ
ಇನ್ನು ಹಾಲಿ ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಮೇಡನ್ ಓವರ್ ಎಸೆದ ದಾಖಲೆಯ ಪಟ್ಟಿಗೆ ಪಂಜಾಬ್ ನ ಅರ್ಶ್ ದೀಪ್ ಸಿಂಗ್ ಸೇರ್ಪಡೆಯಾಗಿದ್ದಾರೆ. ನಿನ್ನೆ ಕೋಲ್ಕಚಾ ವಿರುದ್ಧದ ಪಂದ್ಯದಲ್ಲಿ ಅರ್ಶ್ ದೀಪ್ ಸಿಂಗ್ 15 ಓವರ್ ಎಸೆದಿದ್ದರು. ಆ ಓವರ್ ನಲ್ಲಿ ಅವರು ಒಂದೂ ರನ್ ನೀಡಿದ ಅಂತಿಮ ಎಸೆತದಲ್ಲಿ ವೈಭವ್ ಅರೋರ ವಿಕೆಟ್ ಪಡೆದಿದ್ದರು. ಹಾಲಿ ಐಪಿಎಲ್ ಟೂರ್ನಿಯಲ್ಲಿ ಒಟ್ಟು ಐದು ಮಂದಿ ಬೌಲರ್ ಗಳು ವಿಕೆಟ್ ಮೇಡನ್ ಓವರ್ ಎಸೆದಿದ್ದಾರೆ.
Maidens in IPL 2025
Jofra Archer vs CSK
Vaibhav Arora vs SRH
Mukesh Kumar vs RCB
Moeen Ali vs CSK
Arshdeep Singh vs KKR
*all five included a wicket
Comments