top of page

IPL 2025; ಈ ಎರಡು ತಂಡಗಳಿಗೆ ಇನ್ನೊಂದು ಪಂದ್ಯ ಗೆದ್ದರೂ ಪ್ಲೇಆಫ್ ಸ್ಥಾನ ಫಿಕ್ಸ್!

  • Writer: new waves technology
    new waves technology
  • May 15
  • 2 min read

2025ನೇ ಆವೃತ್ತಿಯಲ್ಲಿ ಟ್ರೋಫಿಯ ಕನಸು ಏಳು ತಂಡಗಳಿಗೆ ಇನ್ನೂ ಜೀವಂತವಾಗಿದೆ. ಇದೀಗ ಪ್ಲೇಆಫ್ ತಲುಪಲು ಯಾವ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ IPL 2025 ಅನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 17ರಿಂದ ಮತ್ತೆ ಐಪಿಎಲ್ ಆರಂಭವಾಗಲಿದ್ದು, ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಈಮಧ್ಯೆ, ತವರಿಗೆ ಮರಳಿರುವ ಕೆಲವು ವಿದೇಶಿ ಆಟಗಾರರ ಅಲಭ್ಯತೆ ಕುರಿತು ಫ್ರಾಂಚೈಸಿಗಳಿಗೆ ಇದೀಗ ತಲೆನೋವು ಶುರುವಾಗಿದೆ.

2025ನೇ ಆವೃತ್ತಿಯಲ್ಲಿ ಟ್ರೋಫಿಯ ಕನಸು ಏಳು ತಂಡಗಳಿಗೆ ಇನ್ನೂ ಜೀವಂತವಾಗಿದೆ. ಇದೀಗ ಪ್ಲೇಆಫ್ ತಲುಪಲು ಯಾವ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ. IPL 2025 ಪ್ಲೇಆಫ್ ತಲುಪಲು 17 ಅಂಕಗಳನ್ನು ಗಳಿಸಬೇಕಿದೆ.

ಗುಜರಾತ್ ಟೈಟಾನ್ಸ್

16 ಅಂಕಗಳು, NRR 0.793

ಉಳಿದ ಪಂದ್ಯಗಳು: ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಿದೆ.

ಇನ್ನೂ ಮೂರು ಪಂದ್ಯಗಳು ಬಾಕಿ ಇರುವಂತೆಯೇ ಗುಜರಾತ್ ಟೈಟಾನ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಗೆಲುವು ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಗುಜರಾತ್ ತಂಡ ಈಗಾಗಲೇ ಡಿಸಿ, ಎಲ್‌ಎಸ್‌ಜಿ ಮತ್ತು ಸಿಎಸ್‌ಕೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

16 ಅಂಕಗಳು, NRR 0.482

ಉಳಿದ ಪಂದ್ಯಗಳು: ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌‌ರೈಸರ್ಸ್ ಹೈದರಾಬಾದ್, ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ಆಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಪ್ಲೇಆಫ್‌ ತಲುಪಲು ಒಂದು ಹೆಜ್ಜೆ ದೂರವಿದೆ. ಆಡಬೇಕಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದರೂ, ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಹೆಚ್ಚಿದೆ.

ಪಂಜಾಬ್ ಕಿಂಗ್ಸ್

15 ಅಂಕಗಳು, NRR 0.376

ಉಳಿದ ಪಂದ್ಯಗಳು: ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಜೊತೆಗೆ ಆಡಬೇಕಿದೆ.

ಪಂಜಾಬ್ ಕಿಂಗ್ಸ್ ತಂಡವು ಭಾರತೀಯ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವ ತಂಡಗಳಲ್ಲಿ ಒಂದಾಗಿದೆ. ತಂಡದ ಮಾರ್ಕೊ ಜಾನ್ಸೆನ್ ಮತ್ತು ಜೋಶ್ ಇಂಗ್ಲಿಸ್ ಇಬ್ಬರೂ WTC ಫೈನಲ್‌ಗೆ ಸಜ್ಜಾಗಿದ್ದಾರೆ. ಆದರೆ, ಇಬ್ಬರೂ ಆ ಆವೃತ್ತಿಯ ಉಳಿದ ಪಂದ್ಯಗಳಿಗೆ ಲಭ್ಯವಿರಬೇಕು. ಪಂಜಾಬ್ ತಂಡವು ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಎರಡು ಪಂದ್ಯಗಲ್ಲಿ ಗೆಲ್ಲಬೇಕಿದ್ದು, ಒಂದು ಪಂದ್ಯ ಗೆದ್ದರೂ ಸಾಕಾಗುವ ಸಾಧ್ಯತೆ ಹೆಚ್ಚಿದೆ. ಪಂಜಾಬ್ ತನ್ನ ಉಳಿದ ಮೂರು ಪಂದ್ಯಗಳನ್ನು ಜೈಪುರದಲ್ಲಿ ಆಡುತ್ತದೆ. ಇದು ಕೂಡ ತಂಡಕ್ಕೆ ಅನುಕೂಲವಾಗಿರುತ್ತದೆ. 11 ವರ್ಷಗಳಲ್ಲಿ ಮೊದಲ ಬಾರಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು RR ವಿರುದ್ಧದ ಪಂದ್ಯವನ್ನು ಗೆಲ್ಲುವುದು ಅತ್ಯಗತ್ಯವಾಗಿದೆ.

ಮುಂಬೈ ಇಂಡಿಯನ್ಸ್

14 ಅಂಕಗಳು, NRR 1.156

ಉಳಿದ ಪಂದ್ಯಗಳು: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಿದೆ.

ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸದ್ಯ ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿರುವ ಅನಿವಾರ್ಯತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೆ. ಒಂದು ವೇಳೆ ಒಂದರಲ್ಲಿ ಸೋಲು ಕಂಡರು ಪ್ಲೇಆಫ್ ಹಾದಿ ಕನಸಾಗಿ ಉಳಿಯುವ ಎಲ್ಲ ಸಾಧ್ಯತೆ ಇದೆ. ಆಗ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಭಿತವಾಗಿರಬೇಕಿರುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್

13 ಅಂಕಗಳು, NRR 0.362

ಉಳಿದ ಪಂದ್ಯಗಳು: ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಿದೆ.

ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಂತರ ಕಳಪೆ ಫಾರ್ಮ್‌ನಿಂದ ಬಳಲುತ್ತಿದೆ. ಪಂಜಾಬ್ ವಿರುದ್ಧ ಪಂದ್ಯ ನಡೆಯುತ್ತಿದ್ದ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇದೀಗ ಐಪಿಎಲ್ ಪುನರಾರಂಭಗೊಂಡಿದ್ದು, ಉತ್ತಮ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿ ಡೆಲ್ಲಿ ಇದೆ. ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿರುವ ಮೂರು ತಂಡಗಳೊಂದಿಗೆ ಆಡಬೇಕಿದ್ದು, ಎರಡು ಗೆಲುವುಗಳು ಅನಿವಾರ್ಯತೆಯಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್

11 ಅಂಕಗಳು, NRR 0.193

ಉಳಿದ ಪಂದ್ಯಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಬೇಕಿದೆ.

ಕೆಕೆಆರ್ ತಂಡವು ಎಲಿಮಿನೇಷನ್‌ನಿಂದ ಒಂದು ಪಂದ್ಯ ಬಾಕಿ ಇದ್ದು, ಇತರ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಎಂಐ ತಂಡವು ತನ್ನ ಎರಡೂ ಪಂದ್ಯಗಳನ್ನು ಸೋಲಬೇಕು, ಡಿಸಿ ತಂಡವು ಎಂಐ ತಂಡವನ್ನು ಸೋಲಿಸಿ ಇನ್ನೆರಡು ಪಂದ್ಯಗಳನ್ನು ಸೋಲಬೇಕು. ಬಳಿಕ ನಿವ್ವಳ ರನ್-ರೇಟ್ ಅವಲಂಬಿಸಿ ಕೆಕೆಆರ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಲಕ್ನೋ ಸೂಪರ್ ಜೈಂಟ್ಸ್

10 ಅಂಕಗಳು, NRR -0.469

ಉಳಿದ ಪಂದ್ಯಗಳು: ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಬೇಕಿದೆ.

ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದರೆ 16 ಅಂಕಗಳನ್ನು ಗಳಿಸುವ ಲಕ್ನೋ ತಂಡವು ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಭಿಸಿದೆ. ಅಂದರೆ MI ಎರಡು ಪಂದ್ಯಗಳಲ್ಲಿ ಮತ್ತು DC ಎರಡು ಪಂದ್ಯಗಳಲ್ಲಿ ಸೋಲು ಕಾಣಬೇಕಿದೆ. ಆಗಲೂ ಉತ್ತಮ ರನ್ ರೇಟ್ ಹೊಂದಿದ್ದರೆ ಮಾತ್ರ ಒಂದು ಅವಕಾಶ ಸಿಗುವ ಸಾಧ್ಯತೆ ಇದೆ.

Comments


bottom of page