top of page

IPL 2026: ಮತ್ತೆ ಮುಗ್ಗರಿಸಿದ MI, 103 ರನ್ ಅಂತರದಲ್ಲಿ CSKಗೆ ಜಯ!

  • Writer: new waves technology
    new waves technology
  • Apr 24
  • 1 min read

ಚೆನ್ನೈ ನೀಡಿದ್ದ 208 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡ 19 ಓವರ್ ನಲ್ಲಿ ಕೇವಲ 104 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ 103 ರನ್ ಗಳ ಹೀನಾಯ ಸೋಲುಕಂಡಿತು.

ಮುಂಬೈ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲು ಕಂಡಿದೆ.

ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ್ದ 208 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡ 19 ಓವರ್ ನಲ್ಲಿ ಕೇವಲ 104 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ 103 ರನ್ ಗಳ ಹೀನಾಯ ಸೋಲುಕಂಡಿತು.

ಮುಂಬೈ ಪರ ಸೂರ್ಯ ಕುಮಾರ್ ಯಾದವ್ 36 ಮತ್ತು ತಿಲಕ್ ವರ್ಮಾ 37 ರನ್ ಗಳಿಸಿದ್ದು ಬಿಟ್ಟರ್ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲೇ ಇಲ್ಲ. ಮೂವರು ಬ್ಯಾಟರ್ ಗಳು (ಮಲೆವಾರ್, ನಮನ್ ಧೀರ್, ರುಥರ್ ಪೋರ್ಡ್) ಶೂನ್ಯ ಸುತ್ತಿದರೆ, ಡಿಕಾಕ್ (7), ಹಾರ್ದಿಕ್ ಪಾಂಡ್ಯಾ 1, ಶಾರ್ದೂಲ್ ಠಾಕೂರ್ 6, ಕ್ರಿಶ್ ಭಗತ್ 7 ಮತ್ತು ಬುಮ್ರಾ 2 ರನ್ ಗಳಿಸಿ ಔಟಾದರು. ಇತ್ತ ಚೆನ್ನೈ ಪರ ಅಕೀಲ್ ಹೊಸೇನ್ 4 ಪಡೆದರೆ, ನೂರ್ ಅಹ್ಮದ್ 2, ಮುಖೇಶ್ ಚೌದರಿ, ಅನ್ಶುಲ್ ಕಂಬೋಜ್, ಓವರ್ಟನ್ ಮತ್ತು ಗುರ್ಜನ್ಪ್ನೀತ್ ಸಿಂಗ್ ತಲಾ 1 ವಿಕೆಟ್ ಪಡೆದರು.

ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಂಜು ಸಾಮ್ಸನ್ ಪಂದ್ಯ ಶ್ರೇಷ್ಛ ಪ್ರಶಸ್ತಿಗೆ ಭಾಜನರಾದರು.

Comments


bottom of page