top of page

Israel vs Iran ceasefire violation: 'What the f***, ಕೂಡಲೇ ಬಾಂಬ್ ಹಾಕೋದನ್ನು ನಿಲ್ಲಿಸಿ': Donald Trump ಎಚ್ಚರಿಕೆ!

  • Writer: new waves technology
    new waves technology
  • Jun 24
  • 1 min read

ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಇರಾನ್ ಅದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಮರು ಯುದ್ಧಕ್ಕೆ ಮುಂದಾಗಿದೆ.

ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ಮಧ್ಯೆ ಕದನ ವಿರಾಮ ಘೋಷಿಸಿದ್ದರೂ ಇಸ್ರೇಲ್ ಮತ್ತು ಇರಾನ್ ದೇಶಗಳು ಪರಸ್ಪಕ ಕದನದಲ್ಲಿ ತೊಡಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಲೇ ಬಾಂಬ್ ಹಾಕುವುದನ್ನು ನಿಲ್ಲಿಸಿ ಎಂದು ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ ಇಂದು ಬೆಳಗ್ಗೆ ಅಮೆರಿಕ ಕದನ ವಿರಾಮ ಘೋಷಣೆ ಮಾಡಿತ್ತು. ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಇರಾನ್ ಅದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ಮರು ಯುದ್ಧಕ್ಕೆ ಮುಂದಾಗಿದೆ. ಟೆಹರಾನ್ ಮೇಲೆ ಹೆಚ್ಚಿನ ತೀವ್ರತೆಯ ಕಾರ್ಯಾಚರಣೆಗಳನ್ನು ನಡೆಸಲು ಸೇನೆಗೆ ಈಗ ಸೂಚನೆ ನೀಡಲಾಗಿದೆ.

ಈ ಮಧ್ಯೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸದಂತೆ ಇಸ್ರೇಲ್‌ಗೆ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದಾರೆ. ನೀವು ಈಗ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದರೆ, ಬಹುದೊಡ್ಡ ಯುದ್ಧ ವಿರಾಮ ಉಲ್ಲಂಘನೆಯಾಗಲಿದೆ. ನಿಮ್ಮ ವಿಮಾನಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಟ್ರಂಪ್ ಸೂಚಿಸಿದ್ದಾರೆ.

ಇಸ್ರೇಲ್‌ಗೆ ತಮ್ಮ ಯುದ್ಧ ವಿಮಾನಗಳನ್ನು ಕೂಡಲೇ ವಾಪಸ್ ಕರೆಸಿಕೊಳ್ಳಿ ಎಂದು ಸೂಚಿಸಿದ್ದು, ಕದನ ವಿರಾಮ ಜಾರಿಯಲ್ಲಿದ್ದರೂ ದಾಳಿಗಳ ಬಗ್ಗೆ ಅವರು ನಿರಾಶೆಯಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಅವರು ಅದನ್ನು ಉಲ್ಲಂಘಿಸಿದರು. ಆದರೆ ಇಸ್ರೇಲ್ ಕೂಡ ಅದನ್ನು ಉಲ್ಲಂಘಿಸಿದೆ. ನಾನು ಇಸ್ರೇಲ್ ಬಗ್ಗೆ ಸಂತೋಷವಾಗಿಲ್ಲ" ಎಂದು ಟ್ರಂಪ್ ಆಕ್ರೋಶ ಭರಿತರಾಗಿ ಹೇಳಿದ್ದಾರೆ.

"ನಮ್ಮಲ್ಲಿ ಎರಡು ದೇಶಗಳು ತುಂಬಾ ಕಠಿಣವಾಗಿ ಹೋರಾಡುತ್ತಿವೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ ಎಂದು ಟ್ರಂಪ್ ಇಸ್ರೇಲ್ ಮತ್ತು ಇರಾನ್ ಬಗ್ಗೆ ಹೇಳಿದರು ಎಂದು ಸಿಎನ್‌ಎನ್ ವರದಿ ಮಾಡಿದೆ.

Comments


bottom of page