Karnataka By Election 2024: ಉಪ ಚುನಾವಣೆ ಜಿದ್ದಾಜಿದ್ದಿ; ಮೂರು ಕ್ಷೇತ್ರ ಗೆಲ್ತೇವೆ ಅಂತಿದ್ದ ಕಾಂಗ್ರೆಸ್ ನಾಯಕರಿಗೆ ಆಂತರಿಕ ಸಮೀಕ್ಷೆಯಲ್ಲಿ ಬಿಗ್ ಶಾಕ್!
- new waves technology
- Nov 9, 2024
- 2 min read

ಬೆಂಗಳೂರು: ಸಂಡೂರು (Sandur By Election) ಮಿನಿ ಸಮರ ರಣಕಣ ರಂಗೇರಿದೆ. ಕಾಂಗ್ರೆಸ್, ಬಿಜೆಪಿ (Congress vs BJP) ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಸಂಡೂರಿನ ಬನ್ನಿಕಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಪರ ಮತಯಾಚನೆ ಮಾಡಿದರು.
ಹಣ ಬಲ, ತೋಳ್‌ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರ್ತಾರೆ. ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಬೇಕು. ನಾನು ಬಳ್ಳಾರಿಗೆ ಬಂದಾಗ ರೆಡ್ಡಿ-ಶ್ರೀರಾಮುಲು (Reddy-Ramulu) ಭಾಷಣ ಮಾಡೋಕೆ ಜಾಗ ಕೊಡದೆ ಅವಮಾನ ಮಾಡಿದ್ದರು. ದೇವಸ್ಥಾನದ ಬಾಗಿಲಲ್ಲಿ (Temple) ಒಬ್ಬನೇ ನಿಂತು ಭಾಷಣ ಮಾಡಿ ಹೋಗಿದ್ದೆ ಎಂದು ಹಳೆಯ ನೆನಪುಗಳ ಮೂಲಕ ಮತಬೇಟೆ ಮಾಡಿದ್ದರು.
ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು ಪರ ಮಾಜಿ ಸಿಎಂ ಬಿಎಸ್‌ವೈ ಪ್ರಚಾರ ನಡೆಸಿದರು. ಕಾಂಗ್ರೆಸ್ ಮುಳುಗುತ್ತಿರೋ ಹಡಗು. ಸಿಎಂ ಸಿದ್ದರಾಮಯ್ಯ ಚೇರ್ ಯಾವಾಗ ಖಾಲಿಯಾಗುತ್ತದೋ ಗೊತ್ತಿಲ್ಲ. ಕಾಂಗ್ರೆಸ್ ಹಣ, ಹೆಂಡ, ಅಧಿಕಾರ, ತೋಳ್ಬಲದಿಂದ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡ್ತಿದೆ. ಬಂಗಾರಿ ಹನುಮಂತುಗೆ ಮತ ನೀಡಿ ಗೆಲ್ಲಿಸಿ ಅಂತ ಬಿಎಸ್‌ವೈ ಪ್ರಚಾರ ಭಾಷಣದಲ್ಲಿ ಹೇಳಿದರು.
ಹಾವೇರಿಯ ಶಿಗ್ಗಾವಿ ಕ್ಷೇತ್ರದ ಬೈ ಎಲೆಕ್ಷನ್ ಕದನವೂ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಶಾಸಕ ಬಸನಗೌಡ ಯತ್ನಾಳ್ ಮತಬೇಟೆ ನಡೆಸಿದರು. ಶಿಗ್ಗಾವಿ ತಾಲೂಕಿನ ತಡಸ, ಹೀರೆಬೆಂಡಿಗೇರಿ, ಶಿಗ್ಗಾವಿ ಪಟ್ಟಣದಲ್ಲಿ ಯತ್ನಾಳ್ ಪ್ರಚಾರ ಮಾಡಿದರು. ಮಾಜಿ ಸಿಎಂ ಬೊಮ್ಮಾಯಿ ಜೊತೆ ಯತ್ನಾಳ್ ಪ್ರಚಾರ ಮಾಡಿದರು. ಅಖಾಡದಲ್ಲಿ ಮಾತಿನ ಮಲ್ಲಯುದ್ಧ ನಡೆಯೋ ಮಧ್ಯೆನೇ ಕಾಂಗ್ರೆಸ್ನ ಆಂತರಿಕ ಸಮೀಕ್ಷೆ ಸರ್ಕಾರದ ನಿದ್ದೆಗೆಡಿಸಿದೆ. ಕಾಂಗ್ರೆಸ್ ಮಾಡಿರೋ 2 ಆಂತರಿಕ ಸಮೀಕ್ಷೆಗಳ ವರದಿಗಳು ನಾಯಕರನ್ನು ಅಲರ್ಟ್ ಮಾಡಿವೆ.
ಚನ್ನಪಟ್ಟಣದಲ್ಲಿ ಸಮೀಕ್ಷೆ!
ಚನ್ನಪಟ್ಟಣದಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಕ್ಷೇತ್ರ ಕೈವಶವಾಗೋ ಅಷ್ಟೇನು ಸುಲಭ ಇಲ್ಲ. ದೇವೇಗೌಡರ ಎಂಟ್ರಿಯಿಂದ ಸ್ವಲ್ಪ ಕಷ್ಟ ಆಗಬಹುದು. ಹೀಗಾಗೇ ಪ್ರಚಾರಕ್ಕೆ ಡಿಕೆ ಬ್ರದರ್ಸ್ ವೇಗ ಕೊಟ್ಟಿದ್ದು ಯೋಗೇಶ್ವರ್ ಈ ಸಲ ಗೆದ್ದೇ ಗೆಲ್ತಾರೆ ಅಂತ ಕಾಂಗ್ರೆಸ್ ಆಂತರಿಕ ಸಮೀಕ್ಷೆ ಹೇಳ್ತಿದೆ.
ಶಿಗ್ಗಾವಿ ಸಮೀಕ್ಷೆ
ಶಿಗ್ಗಾವಿ ಕಾಂಗ್ರೆಸ್ನ ಭಿನ್ನಮತದಿಂದ ಹಿನ್ನಡೆಯಾಗುವ ಸೂಚನೆಗಳು ಸಿಕ್ಕಿವೆ. ಕ್ಷೇತ್ರದಲ್ಲಿ ಜನರನ್ನು ರೀಚ್ ಆಗದ ಪಠಾಣ್ಗೆ ಮತಗಳು ಬರುತ್ತಾವಾ ಎಂಬ ಅನುಮಾನ ಮೂಡಿದೆ. ಬೊಮ್ಮಾಯಿ ಪರ ಮುಸ್ಲಿಮರ ಸಾಫ್ಟ್ ಕಾರ್ನರ್ ಇದ್ದು ಭರತ್ ಮಾಡಿರುವ ಗ್ರೌಂಡ್‌ವರ್ಕ್ ಪ್ಲಸ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಶಿಗ್ಗಾವಿಯಲ್ಲಿ ಪ್ರಚಾರಕ್ಕೆ ವೇಗ ನೀಡಬೇಕಿದೆ ಕಾಂಗ್ರೆಸ್.
ಸಂಡೂರು ಸಮೀಕ್ಷೆ
ಸಂಡೂರಿನಲ್ಲಿ ಈ ತುಕಾರಾಂಗೆ ವಿರೋಧವಿದೆ, ಆದರೆ, ಸಂತೋಷ್ ಲಾಡ್ ಪ್ರಭಾವ ವರ್ಕೌಟ್ ಆಗಲಿದೆ. ಸಿಎಂ, ಡಿಸಿಎಂ ಪ್ರಚಾರ ಪ್ಲಸ್ ಆಗುತ್ತೆ ಅಂತ ವರದಿ ಹೇಳಿದೆ. JDS ಮತಗಳು ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆಗಳಿವೆ. ರೆಡ್ಡಿ-ರಾಮುಲು ಮನಸ್ತಾಪದಿಂದ ಕಾಂಗ್ರೆಸ್‌ಗೆ ಪ್ಲಸ್ ಆಗಲೊದೆ. ಮತದಾರರಿಗೆ ಹತ್ತಿರ ಆಗದ ಬಂಗಾರಿ ಹನುಮಂತ ಸೋಲುತ್ತಾರೆ ಅನ್ನೋದು ಕಾಂಗ್ರೆಸ್ ಸಮೀಕ್ಷೆಯ ಸಾರಾಂಶ.
ಸಮೀಕ್ಷಾ ವರದಿಗಳಿಂದ ಅಲರ್ಟ್ ಆಗಿರೋ ನಾಯಕರು ಕೊನೆ ಘಳಿಗೆಯ ತಮ್ಮದೇ ಸ್ಟ್ರಾಟೆಜಿ ಮಾಡ್ತಿದ್ದಾರೆ. ಮೂರೂ ಕ್ಷೇತ್ರಗಳನ್ನು ಆಯಾ ಪಕ್ಷಗಳೇ ಉಳಿಸಿಕೊಳ್ತಾವಾ? ಯಾರಿಗೆ ಪ್ಲಸ್? ಯಾರಿಗೆ ಮೈನಸ್ ಅನ್ನೋ ಸಸ್ಪೆನ್ಸ್ ಇನ್ನಷ್ಟು ಕೆರಳಿದೆ.
Comments