Koppal: ಗಣಿಕಾರಿಕೆ ವಿರುದ್ಧ 'ಗಣಿಧಣಿ' ಜನಾರ್ಧನ ರೆಡ್ಡಿ ಪ್ರತಿಭಟನೆ!
- new waves technology
- Feb 24
- 2 min read
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿದ್ದರು.

ಕೊಪ್ಪಳ: 'ಗಣಿಧಣಿ' ಎಂದೇ ಖ್ಯಾತಿ ಪಡೆದಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕೊಪ್ಪಳ ಗಣಿಕಾರಿಗೆ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಕೊಪ್ಪಳ ಪಟ್ಟಣದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಜನಾರ್ಧನರೆಡ್ಡಿ ಪ್ರತಿಭಟನೆ ನಡೆಸಿದ್ದು, ಅವರ ಜೊತೆ ಸ್ಥಳೀಯ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, "MSPL- BSPL" ಕಾರ್ಖಾನೆ ವಿಸ್ತರಣೆಯ ವಿರೋಧಿಸಿ ಕೊಪ್ಪಳ ಬಂದ್ ಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಗೆ ಕೊಪ್ಪಳದ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದರು.
ಇದೀಗ ಶಾಸಕ ಗಾಲಿ ಜನಾರ್ಧನ ರೆಡ್ಡಿ ಕೂಡ ಉಕ್ಕು ಕಾರ್ಖಾನೆ ಮತ್ತು ಗಣಿಗಾರಿಕೆ ವಿರೋಧಿಸಿ ಗಾಲಿ ಜನಾರ್ಧನ ರೆಡ್ಡಿ ಪ್ರತಿಭಟನೆ ನಡೆಸಿದ್ದಾರೆ.
ಏನಿದು ಉಕ್ಕು ಕಾರ್ಖಾನೆ ಪ್ರಕರಣ?
ಕೊಪ್ಪಳದ ಕೈಗಾರಿಕಾ ಪ್ರದೇಶ ಹಾಲವರ್ತಿಯಲ್ಲಿ ಬಲ್ದೋಟಾ ಕಂಪನಿಯಿಂದ ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದೆ. ಇದು 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ರಾಜ್ಯದ ಎರಡನೇ ಅತಿ ದೊಡ್ಡ ಸ್ಟೀಲ್ ಕಾರ್ಖಾನೆ. ಜರ್ಮನ್ ತಂತ್ರಜ್ಞಾನವನ್ನು ಬಳಸಿ ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದ್ದು, ಇದು 13 ದಶಲಕ್ಷ ಟನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರ ಈಗಾಗ್ಲೆ ಸಹಿ ಹಾಕಿದ್ದು, ಕಂಪನಿ ಈಗಾಗಲೇ 15,000 ಮಾನವ ಸಂಪನ್ಮೂಲ ಆಯ್ಕೆ ಪ್ರಕ್ರಿಯೆ ನಡೆಸಿದೆ.
ಕೊಪ್ಪಳದ ಕೈಗಾರಿಕಾ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಸ್ಟೀಲ್ ಕಾರ್ಖಾನೆಗಳು ಇವೆ. ಈಗಾಗಲೆೇ ಕಾರ್ಖಾನೆಗಳ ಹೊಗೆಯಿಂದ ಇಲ್ಲಿನ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಕಾರ್ಖಾನೆ ಹೊರಸೂಸುವ ಹೊಗೆ, ಧೂಳಿನಿಂದ ಪರಿಸರ ಕಲುಷಿತ ಆಗಿದೆ. ಗ್ರಾಮದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದೆ. ಈಗಾಗ್ಲೇ ಕಾರ್ಖಾನೆಗಳ ಹೊಗೆಯಿಂದ ಜನರು ನಲುಗಿ ಹೋಗಿದ್ದು, ಈ ಮಧ್ಯೆ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಕಂಪನಿ ಮುಂದಾಗಿದೆ. ಬಲ್ದೋಟಾ ಕಂಪನಿಯ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಜಿಲ್ಲೆಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಕಾರ್ಖಾನೆ ನಿರ್ಮಾಣ ವಿರೋಧಿಸಿ ಇಂದು ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ಗೆ ಗವಿಮಠದ ಶ್ರೀಗವಿಸಿದ್ದೇಶ್ವರ ಶ್ರೀ ಬೆಂಬಲ ವ್ಯಕ್ತಪಡಿಸಿದ್ದು, ವರ್ತಕರು, ಬೀದಿ ಬದಿ ವ್ಯಾಪಾರಸ್ಥರ ಸಾಥ್ ನೀಡಿದ್ದಾರೆ. ಬಸ್ ಡಿಪೋಗೆ ನುಗ್ಗಿ ಪ್ರತಿಭಟನಾಕಾರರ ವಾಗ್ವಾದ ನಡೆಸಿದ್ದು, KSRTC ಬಸ್ ಕಾರ್ಯಾಚರಣೆ ಬಂದ್ ಮಾಡಿಸಿದ್ರು. ತಾಲೂಕು ಕ್ರೀಡಾಂಗಣದಲ್ಲಿ ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ ಬಹಿರಂಗ ಸಭೆ ನಡೆಸಲಾಯಿತು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ಧನ ರೆಡ್ಡಿ
ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿದ್ದರು. ಬಳ್ಳಾರಿಯಲ್ಲಿ ನಡೆದ ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆಯನ್ನು ಬಹಿರಂಗಪಡಿಸಿದ ಕರ್ನಾಟಕ ಲೋಕಾಯುಕ್ತದ ವರದಿಯ ನಂತರ ಅವರನ್ನು 2011 ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿತ್ತು.
Commenti