top of page

MiG-29 Crash: ಆಗ್ರಾದಲ್ಲಿ ಮಿಗ್-29 ಫೈಟರ್ ಜೆಟ್‌ ಪಥನ; ಪೈಲಟ್ ರಕ್ಷಣೆಗೆ ಧಾವಿಸಿದ ಸ್ಥಳೀಯರು, ವಿಡಿಯೋ ವೈರಲ್!

  • Writer: new waves technology
    new waves technology
  • Nov 5, 2024
  • 1 min read

ಉತ್ತರ ಪ್ರದೇಶದ (Uttar Pradesh) ಆಗ್ರಾ (Agra) ಬಳಿ ಭೂಮಿಬೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಮಿಗ್-29 ಫೈಟರ್ ಜೆಟ್‌ನಿಂದ (Fighter Jet) ಸುರಕ್ಷಿತವಾಗಿ ಹೊರಬಂದ ಭಾರತೀಯ ವಾಯುಪಡೆಯ (Indian Air Force) ಪೈಲಟ್‌ಗೆ ಸ್ಥಳೀಯರು ಸಹಾಯ ಮಾಡಲು ಧಾವಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.












ಪಂಜಾಬ್‌ನ ಆದಂಪುರದಿಂದ ಟೇಕ್ ಆಫ್ ಆಗಿದ್ದ ವಿಮಾನವು ಅಭ್ಯಾಸಕ್ಕಾಗಿ ಆಗ್ರಾಕ್ಕೆ ಹೋಗುತ್ತಿತ್ತು, ಈ ವೇಳೆ ತಾಂತ್ರಿಕ ದೋಷದಿಂದ ಎದುರಿಸಿತು. ಪೈಲಟ್​ಗಳು ಜೆಟ್​ನಿಂದ ಹೊರಕ್ಕೆ ಬರುವ ಮೊದಲು, ಫೈಟರ್ ಜೆಟ್ ನೆಲಕ್ಕೆ ಅಪ್ಪಳಿಸಿದರೆ ಯಾವುದೇ ಜೀವ ಅಥವಾ ಆಸ್ತಿ ಪಾಸ್ತಿಗೆ ಹಾನಿ ಆಗದಂತೆ ವಿಮಾನವನ್ನು ಮುಂದಕ್ಕೆ ನಡೆಸಿದ್ದಾರೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.



ವೈರಲ್ ವಿಡಿಯೋದಲ್ಲಿ ಏನಿದೆ?



MiG-29 ಜೆಟ್‌ನಿಂದ ಹೊರಬಂದು ಆಗ್ರಾದ ಮೈದಾನದಲ್ಲಿ ಇಳಿದ ಪೈಲಟ್‌ಗೆ ಸಹಾಯ ಮಾಡಲು ಓಡಿಹೋದ ಸ್ಥಳೀಯರು "ಕಾಪಾಡಿ, ಕಾಪಾಡಿ" ಎಂದು ಕೂಗುತ್ತಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಕಾಣಬಹುದು. ಸ್ಥಳೀಯರಲ್ಲಿ ಒಬ್ಬರು, 'ಯೋಧ ಬದುಕುಳಿದಿದ್ದಾರೆ' ಎಂದು ಹೇಳುವುದನ್ನು ಕೇಳಬಹುದು. ಪೈಲಟ್ ಗಾಯಗೊಂಡಿಲ್ಲ ಎಂದು ತೋರುತ್ತಿದೆ ಮತ್ತು ಸ್ಥಳೀಯರು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ವಿಡಿಯೋ ಹರಿದಾಡುತ್ತಿದೆ.




ಮಿಗ್-29 ಜೆಟ್ ಆಗ್ರಾದಲ್ಲಿ ಪತನಗೊಂಡ ವಿಡಿಯೋಘಟನೆಯ ಮತ್ತೊಂದು ವೀಡಿಯೊ ಜೆಟ್ ನೆಲಕ್ಕೆ ಬೀಳುವ ಮೊದಲು ಆಗಸದಲ್ಲಿ ಪಲ್ಟಿ ಹೊಡೆಯುತ್ತಿರುವುದನ್ನಿ ತೋರಿಸಿದೆ. ಆಗ್ರಾದಲ್ಲಿ ಜನವಸತಿ ಇಲ್ಲದ ಹೊಲಕ್ಕೆ ಅಪ್ಪಳಿಸಿದ ಘಟನೆಯಲ್ಲಿ ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ. 'ಪೈಲಟ್ ಸುರಕ್ಷಿತವಾಗಿ ಹೊರಬರುವ ಮೊದಲು, ನೆಲದ ಮೇಲಿನ ಜೀವ ಅಥವಾ ಆಸ್ತಿಗೆ ಯಾವುದೇ ಹಾನಿಯಾಗದಂತೆ ವಿಮಾನವನ್ನು ನಿರ್ವಹಿಸಿದರು. ಅಪಘಾತದ ಕಾರಣವನ್ನು ಕಂಡುಹಿಡಿಯಲು ಐಎಎಫ್ ತನಿಖೆಗೆ ಆದೇಶಿಸಲಾಗಿದೆ' ಎಂದು ಭಾರತೀಯ ವಾಯುಪಡೆಯು ಎಕ್ಸ್‌ನಲ್ಲಿ ತಿಳಿಸಿದೆ.



ರಾಜಸ್ಥಾನದ ಬಾರ್ಮರ್‌ನಲ್ಲಿ ಮಿಗ್-29 ಪತನಸೆಪ್ಟೆಂಬರ್ 2 ರಂದು ರಾಜಸ್ಥಾನದ ಬಾರ್ಮರ್‌ನಲ್ಲಿ ಇಂತದ್ದೇ ಘಟನೆ ನಡೆದಿತ್ತು. ವರದಿಗಳ ಪ್ರಕಾರ ತಾಂತ್ರಿಕ ಅಡಚಣೆಯನ್ನು ಎದುರಿಸಿದ ನಂತರ ಮಿಗ್ -29 ಫೈಟರ್ ಜೆಟ್ ಪತನಗೊಂಡು ಬೆಂಕಿಗೆ ಆಹುತಿಯಾಗಿತ್ತು. ಬಾರ್ಮರ್ ಸೆಕ್ಟರ್‌ನಲ್ಲಿರುವ ಏರ್‌ಫೋರ್ಸ್ ಬೇಸ್‌ನಿಂದ ತರಬೇತಿ ಕಾರ್ಯಾಚರಣೆಯಲ್ಲಿದ್ದ ಫೈಟರ್ ಜೆಟ್‌ನ ಪೈಲಟ್ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಐಎಎಫ್ ತಿಳಿಸಿದೆ. ಈ ವಿಚಾರದಲ್ಲಿ ಐಎಎಫ್ ವಿಚಾರಣೆಗೆ ಆದೇಶಿಸಿತ್ತು.MiG-29 IAFನ ಪ್ರಧಾನ ಏರ್ ಡಿಫೆನ್ಸ್ ಫೈಟರ್‌ಗಳಲ್ಲಿ ಒಂದಾಗಿದೆ, ಇದನ್ನು 1970 ರ ದಶಕದಲ್ಲಿ ರಷ್ಯಾದಲ್ಲಿ ವಾಯು ಶ್ರೇಷ್ಠತೆಯ ಯುದ್ಧವಿಮಾನವಾಗಿ ಮಿಕೋಯನ್ ಡಿಸೈನ್ ಬ್ಯೂರೋ ಅಭಿವೃದ್ಧಿಪಡಿಸಿತ್ತು.


Comments


bottom of page