Pahalgam terror attack: ಮೃತ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ರೂ, 177 ಮಂದಿ ಕನ್ನಡಿಗರ ರಕ್ಷಣೆ: ಭರತ್ ಭೂಷಣ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
- new waves technology
- Apr 24
- 1 min read
ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಅಮಾಯಕ ಜನರನ್ನು ಹಾಡುಹಗಲೇ ಪತ್ನಿ, ಮಕ್ಕಳ ಎದುರೇ ಉಗ್ರರು ಗುಂಡು ಹಾರಿಸಿ ಸಾಯಿಸಿ ಹೇಯಕೃತ್ಯ ತೋರಿಸಿದ್ದಾರೆ. ಈ ಕೃತ್ಯ ಅತ್ಯಂತ ಖಂಡನೀಯ, ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವುದು ಸರ್ಕಾರದ ಜವಾಬ್ದಾರಿ.

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರ ಮೃತದೇಹವನ್ನು ಇರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭರತ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ್ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಅಮಾಯಕ ಜನರನ್ನು ಹಾಡುಹಗಲೇ ಪತ್ನಿ, ಮಕ್ಕಳ ಎದುರೇ ಉಗ್ರರು ಗುಂಡು ಹಾರಿಸಿ ಸಾಯಿಸಿ ಹೇಯಕೃತ್ಯ ತೋರಿಸಿದ್ದಾರೆ. ಈ ಕೃತ್ಯ ಅತ್ಯಂತ ಖಂಡನೀಯ, ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಇದರಲ್ಲಿ ವಿನಾಯಿತಿ ತೋರಿಸಬಾರದು. ಕೇಂದ್ರ ಸರ್ಕಾರದ ಜೊತೆ ನಾವೆಲ್ಲಾ ಇದ್ದೇವೆ. ಉಗ್ರರನ್ನು ಮಟ್ಟಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಅದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.
ಗುಪ್ತಚರ ಇಲಾಖೆಯ ವೈಫಲ್ಯ
ಕೆಲ ವರ್ಷಗಳ ಹಿಂದೆ ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಉಗ್ರರನ್ನು ಪತ್ತೆಹಚ್ಚಿ ದೇಶದಲ್ಲಿ ಅವರನ್ನು ಸಂಪೂರ್ಣ ನಿರ್ನಾಮ ಮಾಡಬೇಕು. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯ ಕೂಡ ಈ ಘಟನೆಗೆ ಕಾರಣವಾಗಿರಬಹುದು ಎಂದರು.
ಜಮ್ಮು-ಕಾಶ್ಮೀರದಲ್ಲಿರುವ 177 ಮಂದಿ ಕನ್ನಡಿಗರನ್ನು ಕರೆದುಕೊಂಡು ಬರಲು ನಾನು ಸೂಚನೆ ನೀಡಿದ್ದು, ಅವರ ರಕ್ಷಣೆ ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದಾರೆ.
10 ಲಕ್ಷ ರೂ ಪರಿಹಾರ
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡುತ್ತದೆ, ಅವರ ಕುಟುಂಬಸ್ಥರ ಕಷ್ಟಕ್ಕೆ ಸರ್ಕಾರ ನಿಲ್ಲುತ್ತದೆ ಎಂದರು.
ಭರತ್ ಭೂಷಣ್ ನಿವಾಸಕ್ಕೆ ವಿರೋಧ ಪಕ್ಷ ಬಿಜೆಪಿಯ ನಾಯಕರು, ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಭೇಟಿ ನೀಡಿದ್ದಾರೆ.
Comments