top of page

S.SURESH KUMAR : 81 ದಿನಗಳ ನಂತರ ಮನೆಗೆ ಮರಳಿದೆ - ಶಾಸಕ ಸುರೇಶ್ ಕುಮಾರ್ ಭಾವನಾತ್ಮಕ ಪೋಸ್ಟ್ !

  • Writer: new waves technology
    new waves technology
  • Nov 9, 2024
  • 1 min read

ಬೆಂಗಳೂರು : ಸುದೀರ್ಘ ಆರೋಗ್ಯ ಸಮಸ್ಯೆಯಿಂದ ಕಳೆದ 80 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಶಾಸಕ ಸುರೇಶ್ ಕುಮಾರ್, ಸಂಪೂರ್ಣವಾಗಿ ಚೇತರಿಕೆ ಕಂಡು ಇದೀಗ ಮನೆಗೆ ವಾಪಸ್ಸಾಗಿದ್ದಾರೆ.











ಹೀಗಾಗಿ ಇಷ್ಟು ದಿನಗಳ ತಮ್ಮ ಅನುಭವದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಸ್ತಾರವಾದ ಪೋಸ್ಟ್ ಒಂದನ್ನು ಶಾಸಕರು ಹಂಚಿಕೊಂಡಿದ್ದಾರೆ.



ನನ್ನ ಎಲ್ಲಾ ಆತ್ಮೀಯ ಗೆಳೆಯರಿಗೆ ನಿಮ್ಮ ಸುರೇಶ್ ಕುಮಾರ್ ವಂದನೆಗಳು.ನಾನು 81 ದಿನಗಳ ನಂತರ ಮನೆಗೆ ಮರಳಿದ್ದೇನೆ. ನಾನು ಮನೆಗೆ ಬಂದಾಗ ನನ್ನಮ್ಮನ ಮುಖದ ಮೇಲೆ ಉಕ್ಕಿ ಬಂದ ಭಾವನೆ ಕಂಡು ಕಣ್ಣೀರು ಬಂತು. ತುರ್ತು ಪರಿಸ್ಥಿತಿಯಲ್ಲಿ ಕಳೆದ 15 ತಿಂಗಳ ಸೆರೆಮನೆ ವಾಸದ ಅವಧಿ ಬಿಟ್ಟರೆ ಇದೇ ನಾನು ನನ್ನ ಮನೆ ಬಿಟ್ಟು ಇಷ್ಟು ದೀರ್ಘಕಾಲ ಇದ್ದದ್ದು.ನಾನು ಅನುಭವಿಸಿದ ಈ 81 ದಿನಗಳ ಚಿಕನ್ ಗುನ್ಯಾ ಗಂಭೀರ ಸಮಸ್ಯೆ, ನೋವು, ಸಂಕಟ, ಆತಂಕ ಹೇಳಲು ಅಸಾಧ್ಯ.

ವೈದ್ಯರು ನೀಡಿದ ಅತ್ಯುತ್ತಮ ಚಿಕಿತ್ಸೆ, ನನ್ನ ಆರೈಕೆ ಮಾಡಿದ ನನ್ನ ಕುಟುಂಬ, ಯಾವುದೇ ಪರಿಸ್ಥಿತಿಯಲ್ಲಿ ನನ್ನೊಂದಿಗೆ ನಿಂತ ನನ್ನ ಆತ್ಮೀಯ ಬಳಗ, ನನ್ನ ಆರೋಗ್ಯ ಸುಧಾರಣೆಗಾಗಿ ಅಸಂಖ್ಯಾತ ಕಾರ್ಯಕರ್ತರು, ವಿವಿಧ ದೇವಸ್ಥಾನಗಳಲ್ಲಿ ನನ್ನ ಹೆಸರಿನಲ್ಲಿ ಹಿತೈಷಿಗಳು ಪೂಜೆ ಸಲ್ಲಿಸಿದರು.ಇದೆಲ್ಲವೂ ನನಗೆ ಪುನರ್ಜನ್ಮ ನೀಡಿದೆ. ಇದು ನಿಜಕ್ಕೂ ನನಗೆ ಹೊಸ ಜನ್ಮ.ಇನ್ನೂ ಕೆಲವು ದಿನ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕೆಲವೇ ದಿನಗಳಲ್ಲಿ ನನ್ನ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸುತ್ತೇನೆ.ನಾಗರಿಕರನ್ನು ಭೇಟಿ ಮಾಡುವುದು, ಅಧಿಕಾರಿಗಳ ಸಭೆ ನಡೆಸುವುದು, ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವ ಕೆಲಸಕ್ಕೆ ಮುಂದಾಗುತ್ತೇನೆ.ಎಲ್ಲರ ಹಾರೈಕೆ, ಆಶೀರ್ವಾದ, ಸಹಕಾರ ನನಗೆ ಹೀಗೆ ಇರಲಿ. ನವೆಂಬರ್ ಇಪ್ಪತ್ತರ ನಂತರ ಆರಂಭವಾಗುವ ಈ ಸಭೆಗೆ ತಾವೆಲ್ಲರೂ ಸಹಕರಿಸಬೇಕಾಗಿ ವಿನಂತಿ ಎಂದು ಬರೆದುಕೊಂಡಿದ್ದಾರೆ.

Kommentare


bottom of page