top of page

Tirumalaದಲ್ಲಿ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ, ವಿವಾದ ಸ್ಫೋಟ; ಜಗನ್ ಕೆಲಸ ಎಂದ TTD ಸದಸ್ಯ! Video Viral

  • Writer: new waves technology
    new waves technology
  • May 23
  • 1 min read

ತಮಿಳುನಾಡು ರಿಜಿಸ್ಟ್ರೇಷನ್ ಕಾರು ಸಂಖ್ಯೆ TN 83 T 6705 ಸಂಖ್ಯೆಯ ಕಾರಿನಲ್ಲಿ ಬಂದ ಮುಸ್ಲಿಂ ವ್ಯಕ್ತಿ ತಿರುಮಲದಲ್ಲಿರುವ ಟಿಟಿಡಿ ಸಾಮೂಹಿಕ ವಿವಾಹಗಳು ನಡೆಯುವ ಸ್ಥಳದಲ್ಲಿ ನಮಾಜ್ ಮಾಡಿರುವ ವಿಡಿಯೋ..

ತಿರುಪತಿ: ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾ ತಾಣ ತಿರುಪತಿ ತಿರುಮಲದಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ಸಾರ್ವಜನಿಕವಾಗಿಯೇ ನಮಾಜ್ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಗುರುವಾರ ಮಧ್ಯಾಹ್ನ ತಮಿಳುನಾಡು ರಿಜಿಸ್ಟ್ರೇಷನ್ ಕಾರು ಸಂಖ್ಯೆ TN 83 T 6705 ಸಂಖ್ಯೆಯ ಕಾರಿನಲ್ಲಿ ಬಂದ ಮುಸ್ಲಿಂ ವ್ಯಕ್ತಿ ತಿರುಮಲದಲ್ಲಿರುವ ಟಿಟಿಡಿ ಸಾಮೂಹಿಕ ವಿವಾಹಗಳು ನಡೆಯುವ ಸ್ಥಳದಲ್ಲಿ ನಮಾಜ್ ಮಾಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಟಿಟಿಡಿ ನಿಯಮಗಳ ಪ್ರಕಾರ, ಇತರ ಧರ್ಮದ ಜನರು ತಿರುಮಲದಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲಾಗಿದೆ. ಹೀಗಿದ್ದೂ ಆತ ನಮಾಜ್ ಮಾಡುತ್ತಿರುವುದನ್ನು ಅಲ್ಲಿನ ಯಾವುದೇ ಸಿಬ್ಬಂದಿ ಗುರುತಿಸದೇ ಇದ್ದದು ಅಚ್ಚರಿಗೆ ಕಾರಣವಾಗಿದ್ದು ಮಾತ್ರವಲ್ಲದೇ ತಿರುಮಲ ಭದ್ರತಾ ವ್ಯವಸ್ಥೆ ಕುರಿತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಎಚ್ಚೆತ್ತ ತಿರುಪತಿ ಎಸ್ಪಿ ಹರ್ಷವರ್ಧನ್ ರಾಜು ವಿವಾಹ ಸ್ಥಳವನ್ನು ಪರಿಶೀಲಿಸಿದರು. ಭಕ್ತರ ಗುಂಪಿನೊಂದಿಗೆ ತಿರುಮಲಕ್ಕೆ ಬಂದಿದ್ದ ಚಾಲಕ, ಭಕ್ತರು ದರ್ಶನಕ್ಕೆ ಹೋದ ನಂತರ ನಮಾಜ್ ಮಾಡಿದ್ದಾನೆ. ಚಾಲಕನ ಕೃತ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.

ಇನ್ನು ಈ ನಮಾಜ್ ಮಾಡಿದ ವ್ಯಕ್ತಿಗಾಗಿ ತಿರುಮಲ ಪೊಲೀಸರು ಶೋಧ ನಡೆಸುತ್ತಿದ್ದು, ಆ ವ್ಯಕ್ತಿ ಈಗಾಗಲೇ ತಿರುಮಲವನ್ನು ತೊರೆದಿದ್ದಾನೆ ಎನ್ನಲಾಗಿದೆ. ಆತ ಏಕೆ ಹಾಗೆ ಮಾಡಿದೆ ಎಂಬಿತ್ಯಾದಿ ವಿಚಾರಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಿರುಮಲದಲ್ಲಿನ ಕಠಿಣ ನಿಯಮಗಳ ಹೊರತಾಗಿಯೂ ಆತ ನಮಾಜ್ ಮಾಡಿದ್ದೇಕೆ.. ಆ ವ್ಯಕ್ತಿ ಯಾರು? ನಿಯಮಗಳನ್ನು ತಿಳಿಯದೆ ಅಥವಾ ತಿಳಿದೇ ಅವನು ಅದನ್ನು ಮಾಡಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈಸಿಪಿ ನಾಯಕರ ಕೈವಾಡ: TTD ಸದಸ್ಯ ಭಾನುಪ್ರಕಾಶ್ ರೆಡ್ಡಿ

ಇನ್ನು ತಿರುಮಲದಲ್ಲಿ ನಮಾಜ್ ವಿಚಾರ ಇದೀಗ ಆಂಧ್ರ ಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದ್ದು, 'ತಿರುಮಲದ ಕಲ್ಯಾಣ ವೇದಿಕೆಯಲ್ಲಿ ಅನ್ಯಧರ್ಮೀಯ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ನಾವು ಅದನ್ನು ತನಿಖೆ ಮಾಡಿದಾಗ, ಕೆಲವು ವೈಸಿಪಿ ನಾಯಕರು ತಿರುಮಲದ ಖ್ಯಾತಿಗೆ ಕಳಂಕ ತರಲು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ನಮಗೆ ಕಂಡುಬಂದಿದೆ.

ಇದರ ಹಿಂದಿರುವ ಜನರನ್ನು ನಾವು ಗುರುತಿಸುತ್ತೇವೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುತ್ತೇವೆ. ದೇವರನ್ನು ಅಡ್ಡಿಪಡಿಸುವುದು ಮತ್ತು ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ವೈಸಿಪಿ ನಾಯಕರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಟಿಟಿಡಿ ಮಂಡಳಿ ಸದಸ್ಯ ಭಾನುಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ.

Comments


bottom of page