top of page

UPI: 3,000 ರೂ ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶುಲ್ಕ ಹೇರಲು ಕೇಂದ್ರ ಸರ್ಕಾರ ಚಿಂತನೆ!

  • Writer: new waves technology
    new waves technology
  • Jun 11
  • 2 min read

ವ್ಯಾಪಾರಿ ವಹಿವಾಟಿನ ಬದಲು ವಹಿವಾಟು ಮೌಲ್ಯವನ್ನು ಆಧರಿಸಿ ವ್ಯಾಪಾರಿ ರಿಯಾಯಿತಿ ದರ ಅಥವಾ ಶುಲ್ಕ ಹೇರಿಕೆಯನ್ನು ಅನುಮತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ UPI ಗ್ರಾಹಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲು ಮುಂದಾಗಿದ್ದು, 3,000 ರೂ.ಗಿಂತ ಹೆಚ್ಚಿನ ಪಾವತಿಗಳ ಮೇಲೆ ಎಂಡಿಆರ್ (ವ್ಯಾಪಾರಿ ರಿಯಾಯಿತಿ ದರ) ವಿಧಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸುವಲ್ಲಿ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರನ್ನು ಬೆಂಬಲಿಸುವ ಕ್ರಮವಾಗಿ, ರೂ.3,000 ಕ್ಕಿಂತ ಹೆಚ್ಚಿನ ಎಲ್ಲಾ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿಗಳ ಮೇಲೆ ವ್ಯಾಪಾರಿ ರಿಯಾಯಿತಿ ದರವನ್ನು ಪುನಃ ಪರಿಚಯಿಸಲು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ.

ವ್ಯಾಪಾರಿ ವಹಿವಾಟಿನ ಬದಲು ವಹಿವಾಟು ಮೌಲ್ಯವನ್ನು ಆಧರಿಸಿ ವ್ಯಾಪಾರಿ ರಿಯಾಯಿತಿ ದರವನ್ನು ಅನುಮತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಬ್ಯಾಂಕ್‌ಗಳಿಗೆ ವ್ಯಾಪಾರಿ ವಹಿವಾಟಿನ ಬದಲಿಗೆ ವಹಿವಾಟಿನ ಮೌಲ್ಯದ ಮೇಲೆ ಎಂಡಿಆರ್ ವಿಧಿಸಲು ಅನುಮತಿ ನೀಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಹೆಚ್ಚಿನ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ನಿರ್ವಹಿಸುವ ವೆಚ್ಚ ಹೆಚ್ಚುತ್ತಿರುವ ಬಗ್ಗೆ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ಕಳವಳ ವ್ಯಕ್ತಪಡಿಸಿರುವುದರಿಂದ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಸದ್ಯಕ್ಕೆ, ಸಣ್ಣ ವಹಿವಾಟುಗಳನ್ನು MDR ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆ ಇದ್ದು ವರ್ಷದ ಆರಂಭದಲ್ಲಿ ಭಾರತೀಯ ಪಾವತಿ ಮಂಡಳಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಯುಪಿಐ ವಹಿವಾಟುಗಳಿಗೆ ಶೂನ್ಯ ಎಂಡಿಆರ್ ಅಥವಾ ಶೂನ್ಯ ಶುಲ್ಕ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ನಂತರ ಇತ್ತೀಚಿನ ಬೆಳವಣಿಗೆ ಬಂದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಚಿಲ್ಲರೆ ಡಿಜಿಟಲ್ ವಹಿವಾಟುಗಳಲ್ಲಿ ಯುಪಿಐ ಸುಮಾರು 80 ಪ್ರತಿಶತವನ್ನು ಹೊಂದಿದೆ. ಆದರೆ ಶೂನ್ಯ ವ್ಯಾಪಾರಿ ರಿಯಾಯಿತಿ ದರ ಆಡಳಿತವು ಈ ವಲಯದಲ್ಲಿ ಹೆಚ್ಚಿನ ಹೂಡಿಕೆಗೆ ಸೀಮಿತ ಪ್ರೋತ್ಸಾಹವನ್ನು ಹೊಂದಿದೆ. ಯುಪಿಐ ವಹಿವಾಟುಗಳಿಗಾಗಿ ದೊಡ್ಡ ವ್ಯಾಪಾರಿಗಳ ಮೇಲೆ 0.3 ಪ್ರತಿಶತ ವ್ಯಾಪಾರಿ ಶುಲ್ಕ ವಿಧಿಸಲು ಭಾರತೀಯ ಪಾವತಿ ಮಂಡಳಿ ಪ್ರಸ್ತಾಪಿಸಿದೆ. ವ್ಯಾಪಾರಿ ವಹಿವಾಟಿಗಿಂತ ವಹಿವಾಟು ಮೌಲ್ಯವನ್ನು ಆಧರಿಸಿ ವ್ಯಾಪಾರಿ ರಿಯಾಯಿತಿ ದರವನ್ನು ಅನುಮತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, RuPay ಹೊರತುಪಡಿಸಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿಗಳ ಮೇಲಿನ ವ್ಯಾಪಾರಿ ರಿಯಾಯಿತಿ ದರವು ಶೇಕಡಾ 0.9 ರಿಂದ ಶೇಕಡಾ 2 ರವರೆಗೆ ಇರುತ್ತದೆ. ಅಂತೆಯೇ "RuPay ಕ್ರೆಡಿಟ್ ಕಾರ್ಡ್‌ಗಳು ಇದೀಗ ವ್ಯಾಪಾರಿ ರಿಯಾಯಿತಿ ದರದ ವ್ಯಾಪ್ತಿಯಿಂದ ಹೊರಗಿರುವ ನಿರೀಕ್ಷೆಯಿದೆ" ಎಂದು ಮೂಲಗಳು ತಿಳಿಸಿದೆ.

ಬ್ಯಾಂಕುಗಳು, ಫಿನ್‌ಟೆಕ್ ಸಂಸ್ಥೆಗಳು ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಸೇರಿದಂತೆ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರ ಒಂದು ಅಥವಾ ಎರಡು ತಿಂಗಳಲ್ಲಿ UPI ಪಾವತಿಗಳ ಮೇಲಿನ ಶುಲ್ಕಗಳನ್ನು ಅಳೆಯುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಜಾರಿಗೆ ಬಂದರೆ, ಈ ನೀತಿಯು UPI ಅಳವಡಿಕೆಯನ್ನು ಪ್ರೋತ್ಸಾಹಿಸುವುದರಿಂದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವತ್ತ ಬದಲಾವಣೆಯನ್ನು ಗುರುತಿಸುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

Comments


bottom of page