top of page

Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್: Tim David ಸಿಕ್ಸರ್ ಗಳ ಸುರಿಮಳೆ!

  • Writer: new waves technology
    new waves technology
  • Apr 27
  • 1 min read
ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.
ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತದಲ್ಲಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಮತ್ತು ವಿಂಡೀಸ್ ದೈತ್ಯ ಆಲ್ರೌಂಡರ್ ರೊಮಾರಿಯೋ ಶೇಫೆರ್ಡ್ ದೆಹಲಿಯಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾಗಿರುವ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಗಲ್ಲಿ ಕ್ರಿಕೆಟ್ ಆಡಿದ್ದಾರೆ.

ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಮೈಸುಡುವ ಬಿಸಿಲಿನ ನಡುವೆಯೇ ಭರ್ಜರಿ ಸಿಕ್ಸರ್ ಗಳು

ಇನ್ನು ದೆಹಲಿಯಲ್ಲಿ 45 ಡಿಗ್ರಿ ತಾಪಮಾನವಿದ್ದರೂ ಅದನ್ನು ಲೆಕ್ಕಿಸದ ಟಿಮ್ ಡೇವಿಡ್ ಟೆನ್ನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡಿದ್ದು ಮಾತ್ರವಲ್ಲದೇ ಅವರು ಹೊಡೆದ ಸಿಕ್ಸರ್ ಗಳು ವಸತಿ ಕಟ್ಟಡಗಳ ಮೇಲಿಂದ ಹಾರಿ ಹೋಯಿತು.

ತಾವು ಅಂತಾರಾಷ್ಟ್ರೀಯ ಆಟಗಾರರಾಗಿದ್ದರೂ ಯಾವುದೇ ಬಿಗಿ ಭದ್ರತೆ ಇಲ್ಲದೆ, ಸುಮಾರು ಒಂದು ಗಂಟೆ ಕಾಲ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಸ್ಥಳೀಯ ಯುವಕರೊಂದಿಗೆ ಬೆರೆತು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು.

ಧೂಳಿನಿಂದ ಕೂಡಿದ ದೆಹಲಿಯ ಕಿರಿದಾದ ಗಲ್ಲಿಗಳಲ್ಲಿ ಇವರು ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಡೆಲ್ಲಿ-ಬೆಂಗಳೂರು ಸೆಣಸು

ಅಂದಹಾಗೆ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್ ಸಿಬಿ ತಂಡ 7ನೇ ಸ್ಥಾನದಲ್ಲಿರುವ ಡೆಲ್ಲಿ ತಂಡವನ್ನು ಎದುರಿಸುತ್ತಿದೆ.


Comments


bottom of page