Video: 'ಹಿಜಾಬ್ ಹಾಕಿಕೋ' ಎಂದಿದ್ದಕ್ಕೇ ಮುಸ್ಲಿಂ ಮೌಲ್ವಿಯ ಟರ್ಬನ್ ಕಿತ್ತು ಧರಿಸಿದ ಮಹಿಳೆ!
- new waves technology
- Jan 9
- 2 min read
ಇರಾನ್ ನಲ್ಲಿ ಮಹಿಳೆಯರ ಹಿಜಾಬ್ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ಈ ಹಿಂದೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಧರಿಸು ಎಂದಿದ್ದಕ್ಕೇ ಆಕ್ರೋಶ ತನ್ನ ಬಟ್ಟೆಗಳನ್ನು ಬಿಚ್ಚಿ ಅರೆನಗ್ನಳಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಳು.

ಟೆಹರಾನ್: ಇರಾನ್ ನಲ್ಲಿ ಮಹಿಳೆಯ ಹಿಜಾಬ್ ವಿರೋಧಿ ಪ್ರತಿಭಟನೆ ಮುುಂದುವರೆದಿದ್ದು, ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಮೌಲ್ವಿಯೋರ್ವ ಮಹಿಳೆಗೆ ಹಿಜಾಬ್ ಧರಿಸು ಎಂದಿದ್ದಕ್ಕೇ ಆಕ್ರೋಶಗೊಂಡ ಮಹಿಳೆ ಆತನ ಟರ್ಬನ್ ಕಿತ್ತು ಹಿಜಾಬ್ ಆಗಿ ಧರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಇರಾನ್ ನಲ್ಲಿ ಮಹಿಳೆಯರ ಹಿಜಾಬ್ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ಈ ಹಿಂದೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಧರಿಸು ಎಂದಿದ್ದಕ್ಕೇ ಆಕ್ರೋಶ ತನ್ನ ಬಟ್ಟೆಗಳನ್ನು ಬಿಚ್ಚಿ ಅರೆನಗ್ನಳಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಳು. ಇದೀಗ ಅಂತಹುದೇ ಮತ್ತೊಂದು ಘಟನೆ ಇರಾನ್ ನಲ್ಲಿ ವರದಿಯಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್ ನ ಮೆಹೆರಾಬಾದ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಪ್ರಯಾಣಿಕರ ತಂಗುದಾಣದಲ್ಲಿದ್ದ ಮುಸ್ಲಿಂ ಮೌಲ್ವಿಯೋರ್ವ ಹಿಜಾಬ್ ಧರಿಸದ ಮಹಿಳೆಗೆ ಹಿಜಾಬ್ ಧರಿಸು ಎಂದು ಆದೇಶಿಸಿದ್ದಾನೆ. ಇದರಿಂದ ಕುಪಿತಳಾದ ಮಹಿಳೆ ನೋಡ ನೋಡುತ್ತಲೇ ಆತ ಧರಿಸಿದ್ದ ಟರ್ಬನ್ ಕಿತ್ತುಕೊಂಡು ಅದನ್ನೇ ಹಿಜಾಬ್ ರೀತಿಯಲ್ಲಿ ಧರಿಸುವುದಾಗಿ ಹೇಳಿದ್ದಾಳೆ.
ಇಷ್ಟಕ್ಕೂ ಆಗಿದ್ದೇನು?
ಟೆಹ್ರಾನ್ ನ ಮೆಹೆರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆ ಮತ್ತು ಆಕೆಯ ಪತಿ ವಿಮಾನಕ್ಕಾಗಿ ಕಾಯುತ್ತಿದ್ದಾಗ ಅಲ್ಲಿಯೇ ಇದ್ದ ಮುಸ್ಲಿಂ ಮೌಲ್ವಿ ಆಕೆಯನ್ನು ನೋಡಿ, 'ಹಿಜಾಬ್ ಇಲ್ಲದೇ ಬಹಿರಂಗವಾಗಿ ತಿರುಗಾಡಲು ನಿನಗೆ ನಾಚಿಕೆಯಾಗುವುದಿಲ್ಲವೇ.. ಎಂದು ಕೇಳಿದ್ದಾನೆ. ಈ ವೇಳೆ ಮಹಿಳೆ ಮತ್ತು ಮೌಲ್ವಿ ನಡುವೆ ವಾಗ್ವಾದ ನಡೆದಿದ್ದು, ಮಹಿಳೆಯ ವರ್ತನೆ ನೋಡಿದ ಮೌಲ್ವಿ ಆಕೆಯ ಕುಟುಂಬಸ್ಥರಿಗೆ ದೂರು ನೀಡುವುದಾಗಿ ಹೇಳಿ, 'ನಿನ್ನ ಕುಟುಂಬ ಎಲ್ಲಿದೆ..? ನಿನ್ನ ಪತಿ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಈ ವೇಳೆ ಮೌಲ್ವಿಗೆ ಉತ್ತರಿಸಿದ ಮಹಿಳೆ ನಿನಗೆ ನನ್ನ ಪತಿ ಏಕೆ ಬೇಕು? ಎಂದು ಕೇಳಿದಾಗ ಆತ ಮಹಿಳೆಯರ ಗೌರವ ಮುಖ್ಯ ಎಂದು ಹೇಳಿದ್ದಾನೆ.
ಇದಕ್ಕೆ ಉತ್ತರಿಸಿದ ಮಹಿಳೆ.. ಈಗ ನೀನು ನನ್ನ ಗೌರವ ರಕ್ಷಿಸಲು ಹಿಜಾಬ್ ಧರಿಸು ಎಂದು ಹೇಳುತ್ತಿದ್ದೀಯಾ ಎಂದು ಹೇಳಿ ನೋಡ ನೋಡುತ್ತಲೇ ಆತ ತಲೆಗೆ ಧರಿಸಿದ್ದ ಟರ್ಬನ್ ಅನ್ನು ಕಿತ್ತುಕೊಂಡು ಅದನ್ನು ಬಿಚ್ಚಿ ಅದನ್ನೇ ಹಿಜಾಬ್ ರೀತಿಯಲ್ಲಿ ದೇಹಕ್ಕೆ ಸುತ್ತಿಕೊಂಡಿದ್ದಾಳೆ. ಈ ಘಟನೆಯನ್ನು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಮಹಿಳೆ ವಶಕ್ಕೆ, ಬೇರೆಡೆ ಸ್ಥಳಾಂತರ
ಇದೇ ವೇಳೆ ಮಹಿಳೆ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಲಾಗಿದ್ದು, ಆಕೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಬಳಿಕ ಆಕೆ ಮಾನಸಿಕ ಅಸ್ವಸ್ಥಳೆಂದು ಹೇಳಿ ಆಕೆಯನ್ನು ಮೌಲ್ವಿಯ ಒಪ್ಪಿಗೆ ಮೇರೆಗೆ ಬೇರೆಡೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಕೂಡ ಇರಾನ್ ನಲ್ಲಿ ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಮಹಿಳೆಯರನ್ನು ಬಂಧಿಸಿ ಬಳಿಕ ಅವರನ್ನು ರಹಸ್ಯ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಈ ಹಿಂದೆ ಇದೇ ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸ್ ಕಸ್ಟಡಿಯಲ್ಲೇ ಮಹ್ಸಾ ಅಮಿನಿ ಎಂಬಾಕೆ ಸಾವಿಗೀಡಾಗಿದ್ದಳು. ಆಕೆಯ ಸಾವು ಇರಾನ್ ನಲ್ಲಿ ವ್ಯಾಪಕ ಹಿಜಾಬ್ ವಿರೋಧಿ ಪ್ರತಿಭಟನೆಗೆ ಕಾರಣವಾಗಿತ್ತು.
Comments