top of page

Zelenskyy-Trump ಭೇಟಿ ವೇಳೆ ಶ್ವೇತ ಭವನ ರಣಾಂಗಣ: ಸದ್ಯ "ಹಾಗಾಗದೇ" ಇದ್ದದ್ದು ಪವಾಡವೇ ಸರಿ ಎಂದಿದ್ದೇಕೆ ರಷ್ಯಾ?

  • Writer: new waves technology
    new waves technology
  • Mar 1
  • 1 min read

ಶ್ವೇತ ಭವನದಲ್ಲಿ ಝೆಲೆನ್ಸ್ಕಿ ನಡೆದುಕೊಂಡ ರೀತಿಯನ್ನು ಟೀಕಿಸಿರುವ ರಷ್ಯಾ, ಇಂತಹ ಘಟನೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಹೇಳಿದೆ.

ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭೇಟಿ ಶ್ವೇತ ಭವನದಲ್ಲಿ ವಾಗ್ವಾದ ನಡೆದ ಘಟನೆಯ ಬಗ್ಗೆ ರಷ್ಯಾ ಪ್ರತಿಕ್ರಿಯೆ ನೀಡಿದೆ.

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಶುಕ್ರವಾರ ಟೆಲಿಗ್ರಾಮ್‌ನಲ್ಲಿ ಈ ಬೆಳವಣಿಗೆಗಳ ಬಗ್ಗೆ ಬರೆದಿದ್ದು, 2022 ರಲ್ಲಿ ಕೈವ್ ಆಡಳಿತ ಬೆಂಬಲವಿಲ್ಲದೆ ಒಂಟಿಯಾಗಿತ್ತು ಎಂದು ಝೆಲೆನ್ಸ್ಕಿಶ್ವೇತಭವನದಲ್ಲಿ ಹೇಳಿದ್ದು, ಅವರ ಎಲ್ಲಾ ಸುಳ್ಳುಗಳಲ್ಲಿ ದೊಡ್ಡ ಸುಳ್ಳು ಎಂದು ಹೇಳಿದ್ದಾರೆ.

ಶ್ವೇತ ಭವನದಲ್ಲಿ ಝೆಲೆನ್ಸ್ಕಿ ನಡೆದುಕೊಂಡ ರೀತಿಯನ್ನು ಟೀಕಿಸಿರುವ ರಷ್ಯಾ, ಇಂತಹ ಘಟನೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಹೇಳಿದೆ.


ಶುಕ್ರವಾರ ನಡೆದ ತೀವ್ರವಾದ ಓವಲ್ ಆಫೀಸ್ ಸಭೆಯಲ್ಲಿ, ಟ್ರಂಪ್ ಝೆಲೆನ್ಸ್ಕಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, "ಲಕ್ಷಾಂತರ ಜೀವಗಳನ್ನು ಆತ ಪಣಕ್ಕಿಟ್ಟಿದ್ದಾರೆ" ಎಂದು ಆರೋಪಿಸಿದರು ಮತ್ತು ಅವರ ಕ್ರಮಗಳು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಉಕ್ರೇನ್‌ಗೆ ನಿರಂತರ ಬೆಂಬಲ ನೀಡುವುದಕ್ಕಾಗಿ ಟ್ರಂಪ್ ಒತ್ತಾಯಿಸಿದ್ದ ಮತ್ತು ಸೂಚಿಸಿದ್ದ ನಿರ್ಣಾಯಕ ಖನಿಜ ಒಪ್ಪಂದಕ್ಕೆ ಸಹಿ ಹಾಕದೆ ಝೆಲೆನ್ಸ್ಕಿ ಶ್ವೇತಭವನವನ್ನು ಹಠಾತ್ತನೆ ತೊರೆದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಓವಲ್ ಕಚೇರಿಯಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹೊಡೆಯದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ತಾವು ತಡೆದುಕೊಂಡಿದ್ದು "ಪವಾಡ" ಎಂದು ಹೇಳಿದೆ.

Comments


bottom of page