10 ಗ್ರಾಂ ಚಿನ್ನಕ್ಕೆ ₹1.50 ಲಕ್ಷ: ₹3 ಲಕ್ಷ ದಾಟಿದ ಬೆಳ್ಳಿದರ
- new waves technology
- Jan 20
- 1 min read

ಬೆಂಗಳೂರು: ಬೆಂಗಳೂರಿನ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆಯು ₹3 ಲಕ್ಷ ದಾಟಿದೆ. 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂ ಗೆ ₹1.50 ಲಕ್ಷಕ್ಕೆ ತಲುಪಿದೆ.
ಇದು ಚಿನ್ನ ಹಾಗೂ ಬೆಳ್ಳಿಯ ಈವರೆಗಿನ ದಾಖಲೆಯ ಬೆಲೆಯಾಗಿದೆ.
2024ರ ಜನವರಿ 19ರಂದು ಬೆಂಗಳೂರಿನಲ್ಲಿ ಕೆ.ಜಿ ಬೆಳ್ಳಿ ಬೆಲೆ ₹73 ಸಾವಿರ ಆಗಿತ್ತು. 2025ರ ಜನವರಿ 20ಕ್ಕೆ ₹96,200ಕ್ಕೆ ತಲುಪಿತು. ಈಗ (2026ರ ಜನವರಿ 19) ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯು ₹3,07,900ಕ್ಕೆ ಜಿಗಿದಿ
ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆಯು ಕೆ.ಜಿ.ಗೆ ₹3.5 ಲಕ್ಷಕ್ಕೂ ಏರಿಕೆ ಆಗಬಹುದು ಎಂದು ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ಹೇಳಿದರು.
'ಚೀನಾವು ಜಗತ್ತಿನಲ್ಲಿ ಅತಿ ಹೆಚ್ಚು ಬೆಳ್ಳಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಒಂದಾಗಿದ್ದು, ಬೆಳ್ಳಿ ರಫ್ತು ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿದೆ, ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳಿಂದಾಗಿ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಬಳಿ ಇರುವ ಕರೆನ್ಸಿಯನ್ನು ಮಾರಾಟ ಮಾಡಿ, ಚಿನ್ನ ಮತ್ತು ಬೆಳ್ಳಿ ಖರೀದಿಸಲು ಮುಂದಾಗುತ್ತಿವೆ. ಇವೆಲ್ಲವೂ ದರ ಏರಿಕೆಗೆ ಕಾರಣವಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೆಳ್ಳಿ ಪೂರೈಕೆಯಲ್ಲಿ ಸದ್ಯಕ್ಕೆ ಕೊರತೆ ಉಂಟಾಗಿಲ್ಲ' ಎಂದು ತಿಳಿಸಿದರು.
“ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಬೆಳ್ಳಿ ಉತ್ಪಾದನೆ ಇಲ್ಲ. ಇದು ಬೆಳ್ಳಿ ಧಾರಣೆ ಹೆಚ್ಚಳಕ್ಕೆ ಪ್ರಮುಖ ಕಾರಣ' ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ (ಸರಕು) ವಿಭಾಗದ ಮುಖ್ಯಸ್ಥ ಹರೀಶ್ ವಿ. ತಿಳಿಸಿದರು.










Comments