top of page

EVM ನಿಷೇಧ: ಕರ್ನಾಟಕ ಸರ್ಕಾರದ ಹೊಸ ನಿರ್ಧಾರ ಚುನಾವಣಾ ಸಮಗ್ರತೆಯ ಚರ್ಚೆಗೆ ನಾಂದಿ!

  • Writer: new waves technology
    new waves technology
  • Sep 5
  • 1 min read

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿದೆ, ಇದು ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ನೀಡಿದೆ.

ree

ಬೆಂಗಳೂರು: 1982 ರಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ಮೊದಲು ಪರಿಚಯಿಸಲಾಯಿತು. ಆದರೆ ಈಗ ಕರ್ನಾಟಕವು ದೇಶದ ಉಳಿದ ಭಾಗಗಳಿಗಿಂತ ಮೊದಲ ಬಾರಿಗೆ ಇವಿಎಂ ಮತ ಯಂತ್ರಗಳ ಜೊತೆಗೆ ಸಂಬಂಧ ಕಡಿದುಕೊಳ್ಳುತ್ತಿದೆ.

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿದೆ, ಇದು ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ನೀಡಿದೆ.

ಇವಿಎಂಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಘೋಷಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ಬಗ್ಗೆ ವಿವರಿಸಿ ಅಂತಿಮ ಹಂತದಲ್ಲಿ ಅಸಹಜವಾಗಿ ಹೆಚ್ಚಿನ ಸಂಖ್ಯೆಯ ಮತಗಳು ಚಲಾವಣೆಯಾಗಿವೆ ಎಂದು ವರದಿಯಾಗಿದೆ ಎಂದಿದ್ದಾರೆ.

ಭಾರತದ ಚುನಾವಣಾ ಆಯೋಗ (ಇಸಿಐ) "ದಪ್ಪ ಚರ್ಮದ ಮತ್ತು ದುರಹಂಕಾರಿ"ಯಾಗಿ ಬೆಳೆಯುತ್ತಿದೆ ಎಂದು ಪಾಟೀಲ್ ಆರೋಪಿಸಿದರು. ಪ್ರಜಾಪ್ರಭುತ್ವದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ನಿರ್ಧಾರದ ಅರ್ಥ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ, ಕರ್ನಾಟಕದ ಸುಮಾರು ಶೇ. 60 ರಷ್ಟು ಮತದಾರರು ಕೈಯಿಂದ ಮತ ಚಲಾಯಿಸಲಿದ್ದಾರೆ.

ಇವಿಎಂ ಯಂತ್ರಗಳ ಬಳಕೆ ನಂತರದಶಕದಲ್ಲಿಯೇ ಭಾರತದಲ್ಲಿ ಮೊದಲ ಬಾರಿ ಕಾಗದದ ಮತದಾನದ ಪ್ರಯೋಗ ಇದಾಗಿದ್ದು, ಇವಿಎಂಗಳ ಮೇಲಿನ ಅಪನಂಬಿಕೆ ಈಗಾಗಲೇ ಹೆಚ್ಚಿರುವ ಸಮಯದಲ್ಲಿ ತಾವು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.


Comments


bottom of page