Indian Stock Exchange: ಆರಂಭದಲ್ಲಿ ದಾಖಲೆಯ ಏರಿಕೆ ಕಂಡ ಷೇರು ಮಾರುಕಟ್ಟೆ, ದಿನಾಂತ್ಯದಲ್ಲಿ ಕುಸಿತ!
- new waves technology
- Oct 24, 2024
- 1 min read
ನಿನ್ನೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಇಂದು ದಾಖಲೆ ಏರಿಕೆ ಮೂಲಕ ದಿನದ ವಹಿವಾಟು ಆರಂಭಿಸಿದ್ದ ಭಾರತೀಯ ಷೇರುಮಾರುಕಟ್ಟೆ ದಿನದ ಅಂತ್ಯದ ವೇಳೆಗೆ ಅಲ್ಪ ಪ್ರಮಾಣದ ಕುಸಿತ ಅನುಭವಿಸಿದೆ.

ಮುಂಬೈ: ನಿನ್ನೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಇಂದು ದಾಖಲೆ ಏರಿಕೆ ಮೂಲಕ ದಿನದ ವಹಿವಾಟು ಆರಂಭಿಸಿದ್ದ ಭಾರತೀಯ ಷೇರುಮಾರುಕಟ್ಟೆ ದಿನದ ಅಂತ್ಯದ ವೇಳೆಗೆ ಅಲ್ಪ ಪ್ರಮಾಣದ ಕುಸಿತ ಅನುಭವಿಸಿದೆ.
ಸೋಮವಾರ ವಹಿವಾಟು ಆರಂಭವಾದಾಗ ಸೆನ್ಸೆಕ್ಸ್ ಮೊದಲ ಬಾರಿಗೆ ದಾಖಲೆ 77,000 ಗಡಿಯನ್ನು ಮೀರಿತು. ನಿಫ್ಟಿ 50 ಕೂಡ ಗರಿಷ್ಠ 23,411.90 ಏರಿತ್ತು. ಬಿಎಸ್‌ಇ ಸೆನ್ಸೆಕ್ಸ್ 1,720.8 ಪಾಯಿಂಟ್‌ಗಳು ಅಥವಾ 2.29 ಶೇಕಡಾ ಜಿಗಿದು 76,795.31 ರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು.
ಮೋದಿ 3.0 ಸರ್ಕಾರಕ್ಕೆ ಸಂತೋಷದ ಸ್ವಾಗತ: ಸೆನ್ಸೆಕ್ಸ್, ನಿಫ್ಟಿ ಏರಿಕೆ; ಹಣಕಾಸು, ಇಂಧನ ವಲಯ ಷೇರುಗಳು ಲಾಭದಲ್ಲಿ
ಇದೀಗ ದಿನದ ವಹಿವಾಟು ಮುಕ್ತಾಯದ ಹೊತ್ತಿಗೆ ಅಲ್ಪ ಪ್ರಮಾಣದ ಕುಸಿತಗೊಂಡಿದ್ದು, ಸೆನ್ಸೆಕ್ಸ್ ಶೇ.0.27ರಷ್ಚು ಕುಸಿದು 76,490ಕ್ಕೆ ಇಳಿಕೆಯಾದರೆ, ನಿಫ್ಟಿ ಕೂಡ ಶೇ.0.13ರಷ್ಟು ಕುಸಿದು 23,259ಕ್ಕೆ ಕುಸಿದಿದೆ.
ಕುಸಿತಕ್ಕೆ ಅಂತಾರಾಷ್ಟ್ರೀಯ ಅಂಶಗಳು ಕಾರಣ
ಯೂರೋಪ್‌ನಲ್ಲಿನ ಮಾರುಕಟ್ಟೆ ಕುಸಿತ, ಫ್ರಾನ್ಸ್ ಸರ್ಕಾರದ ನಿರ್ಧಾರಗಳು ಇಂದಿನ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಇದು ಯುರೋ, ಬ್ಯಾಂಕಿಂಗ್ ಷೇರುಗಳು ಮತ್ತು ಸರ್ಕಾರಿ ಬಾಂಡ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಪ್ರಾಫಿಟ್ ಐಡಿಯಾದ ಎಂಡಿ ವರುಣ್ ಅಗರ್ವಾಲ್ ಹೇಳಿದ್ದಾರೆ.
Comments