PV Web Exclusive: 2ឥឥឥដಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಕುಂಭಮೇಳ
- new waves technology
- Jan 30
- 1 min read

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಸೂರ್ಯೋದಯಕ್ಕೆ ಮುನ್ನ ಕೆರೆಯಂಗಳದಲ್ಲಿ ಹಕ್ಕಿಗಳದೇ ಕಲರವ,
ಚೂರುಪಾರು ಮೋಡಗಳು ಚದುರಿ ಆಗಸದಲ್ಲಿ ನೇಸರನ ಕಿರಣ ಮೂಡುತ್ತ ಬೆಳಕು ಹರಿಯುತ್ತಿದ್ದಂತೆಯೇ ಬಾನಂಗಳದಲ್ಲಿ ರಂಗೋಲಿ ಬಿಡಿಸಿದಂತೆ ಬಣ್ಣಬಣ್ಣದ ಚಿತ್ತಾರ, ಗುಂಪಾಗಿ ಹಾರಾಡುವ ಹಕ್ಕಿಗಳ ರೆಕ್ಕೆಗಳಿಂದ ಬೀಸುವ ತಂಗಾಳಿ ಸುಂಯ್ ಸುಂಯ್ ಎನ್ನುವ ಭಾವ, ನೂರಾರು ಗೂಡುಗಳಲ್ಲಿ ಮರಿಗಳಿಗೆ ತುತ್ತು ತಿನ್ನಿಸುವ ಸಂಭ್ರಮ, ನೀರಿಗೆ ಜಿಗಿದು ಮೀನು ಹಿಡಿದು ಕೊಕ್ಕಿನಲ್ಲಿ ಕಚ್ಚಿ ಸಾಗಿಸುವ ಉತ್ಸಾಹ...ನೋಡುತ್ತಿದ್ದರೆ ಮನದಲ್ಲಿ ಮೂಡುವ ರಸಋಷಿ ಕುವೆಂಪು. ದೇವರು ರುಜು ಮಾಡಿದನು ಎಂಬ ಅಮೋಘ ಉಪಮೆ... ಇದೆಲ್ಲ ಏನು ಗೊತ್ತೇ ಅಂಕಸಮುದ್ರ ಪಕ್ಷಿಧಾಮದ ಹೊರನೋಟ.





Comments