top of page

Ranji|ಕನ್ನಡಿಗರ ವೇಗದ ದಾಳಿಗೆ ತತ್ತರಿಸಿದಮುಂಬೈ: ಅಲ್ಪಮೊತ್ತಕ್ಕೆ ಅಲೌಟ್

Writer: new waves technology
new waves technology
Feb 6
1 min read

ಮುಂಬೈ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2025-26ನೇ ಸಾಲಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡ ಕೇವಲ 120 ರನ್‌ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡವನ್ನು ಕರ್ನಾಟಕದ ಬೌಲರ್‌ಗಳು ಕಾಡಿದರು.

ಆರಂಭದಿಂದಲೂ ಮುಂಬೈ ಬ್ಯಾಟರ್‌ಗಳ ಮೇಲೆ ಮೇಲುಗೈ ಸಾಧಿಸಿದ ರಾಜ್ಯ ತಂಡದ ಬೌಲರ್‌ಗಳು, ಅಖಿಲ್ ಹೇರ್ವಾಡ್ಕ‌ರ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ ಅನ್ನು ಕ್ರೀಸ್ ಕಚ್ಚಿ ಆಡಲು ಬಿಡಲಿಲ್ಲ. ಪರಿಣಾಮ ಮುಂಬೈ 48.1 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು.

ಮುಂಬೈ ಪರ ಅಖಿಲ್ ಹೇರ್ವಾಡ್ಕರ್ 60 ರನ್ ಗಳಿಸಿದ್ದು ಹೊರತುಪಡಿಸಿದರೆ, ಉಳಿದ ಬ್ಯಾಟರ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಕರ್ನಾಟಕ ಪರ ಅಮೋಘ ಬೌಲಿಂಗ್ ಪ್ರದರ್ಶಿಸಿದ ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಹಾಗೂ ಪ್ರಸಿದ್ಧ ಕೃಷ್ಣ ತಲಾ 3 ವಿಕೆಟ್ ಪಡೆದು ಮಿಂಚಿದರು. ವಿದ್ಯಾಧರ್ ಪಾಟೀಲ್ 1 ವಿಕೆಟ್ ಪಡೆದುಕೊಂಡರು.

ಸಂಕ್ಷಿಪ್ತ ಸ್ಕೋರ್: ಮುಂಬೈ 120/10 ( ಅಖಿಲ್ ಹೇರ್ವಾಡ್ಕರ್ 60 ರನ್, ಶಾರ್ದೂಲ್ ಠಾಕೂರ್ 16 ರನ್. ಕರ್ನಾಟಕ ಪರ ಪ್ರಸಿದ್ಧ ಕೃಷ್ಣ (14-5-21-3), ಶ್ರೇಯಸ್ ಗೋಪಾಲ್ (4.1-1-4-3) ಹಾಗೂ ವಿದ್ವತ್ ಕಾವೇರಪ್ಪ (14-3-38-3) ಮಿಂಚಿದರು)

Comments


bottom of page