top of page

TMC ಮಾಜಿ ಶಾಸಕ ರಾಮೇಂದು ಸಿಂಹರಾಯ್ ಬೆಳಗಾವಿಯಲ್ಲಿ ಬಂಧನ: ಹೂಗ್ಲಿಯ ಪೊಲೀಸ್ ಠಾಣೆಗೆ ಕರತರುವಾಗ ಚೋರ್..ಚೋರ್ ಎಂದು ಮೊಟ್ಟೆ, ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು-Video

Writer: new waves technology
new waves technology
Jun 22
1 min read
ಸಿಂಹರಾಯ್ ಅವರನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಪೊಲೀಸ್ ಠಾಣೆಗೆ ಕರೆತಂದಾಗ, ಠಾಣೆಯ ಹೊರಗೆ ಜನರು ಗುಂಪುಗೂಡಿ "ಚೋರ್-ಚೋರ್" (ಕಳ್ಳ-ಕಳ್ಳ) ಎಂಬ ಘೋಷಣೆಗಳನ್ನು ಕೂಗಿ ಅವರತ್ತ ಮೊಟ್ಟೆ, ಚಪ್ಪಲಿಗಳನ್ನು ಎಸೆದರು.
ಸಿಂಹರಾಯ್ ಅವರನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಪೊಲೀಸ್ ಠಾಣೆಗೆ ಕರೆತಂದಾಗ, ಠಾಣೆಯ ಹೊರಗೆ ಜನರು ಗುಂಪುಗೂಡಿ "ಚೋರ್-ಚೋರ್" (ಕಳ್ಳ-ಕಳ್ಳ) ಎಂಬ ಘೋಷಣೆಗಳನ್ನು ಕೂಗಿ ಅವರತ್ತ ಮೊಟ್ಟೆ, ಚಪ್ಪಲಿಗಳನ್ನು ಎಸೆದರು.

ಪಶ್ಚಿಮ ಬಂಗಾಳದ ತಾರಕೇಶ್ವರ್ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (TMC) ಮಾಜಿ ಶಾಸಕ ರಾಮೇಂದು ಸಿಂಹರಾಯ್ ಅವರನ್ನು, ಸರ್ಕಾರಿ ಪರಿಹಾರ ಸಾಮಗ್ರಿಗಳ ಅಕ್ರಮ ಸಾಗಣೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ (Arms Act) ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಬಂಧಿಸಿದ ಬಳಿಕ ನಿನ್ನೆ ಭಾನುವಾರ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಧನಿಯಾಖಾಲಿ ಪೊಲೀಸ್ ಠಾಣೆಗೆ ಕರೆತರಲಾಯಿತು.

ಸಿಂಹರಾಯ್ ಅವರನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಪೊಲೀಸ್ ಠಾಣೆಗೆ ಕರೆತಂದಾಗ, ಠಾಣೆಯ ಹೊರಗೆ ಜನರು ಗುಂಪುಗೂಡಿ "ಚೋರ್-ಚೋರ್" (ಕಳ್ಳ-ಕಳ್ಳ)

ಎಂಬ ಘೋಷಣೆಗಳನ್ನು ಕೂಗಿ ಅವರತ್ತ ಮೊಟ್ಟೆ, ಚಪ್ಪಲಿಗಳನ್ನು ಎಸೆದರು.

ಹೂಗ್ಲಿ ಗ್ರಾಮೀಣ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಕುನ್ವರ್ ಭೂಷಣ್ ಸಿಂಗ್ , ಈ ಪ್ರಕರಣವು ಜೂನ್ 11ರ ಸಂಜೆ ಧನಿಯಾಖಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿತ್ತೆಂದು ಆರೋಪಿಸಲಾದ ಘಟನೆಯೊಂದಕ್ಕೆ ಸಂಬಂಧಿಸಿದೆ ಎಂದಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಹೂಗ್ಲಿ ಜಿಲ್ಲಾ ಪೊಲೀಸ್ ತಂಡವು ಕರ್ನಾಟಕದ ಬೆಳಗಾವಿಯಲ್ಲಿ ಸಿಂಘರಾಯ್ ಹಾಗೂ ಅವರ ಒಬ್ಬ ಸಹಚರರನ್ನು ಪತ್ತೆಹಚ್ಚಿ ನಿನ್ನೆ ಭಾನುವಾರ ಬೆಳಗ್ಗೆ ವಶಕ್ಕೆ ಪಡೆದುಕೊಂಡಿತು.

ಕರ್ನಾಟಕದ ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದುಕೊಂಡ ನಂತರ, ನಿನ್ನೆ ಸಂಜೆ ಧನಿಯಾಖಾಲಿ ಪೊಲೀಸ್ ಠಾಣೆಗೆ ಕರೆತರಲಾಯಿತು.

Comments


bottom of page