top of page

‘ಟಾಕ್ಸಿಕ್’ ರಿಲೀಸ್ ಮತ್ತೆ ಮುಂದಕ್ಕೆ; ಜೂನ್ 4ಕ್ಕೆ ಬರ್ತಿಲ್ಲ ಸಿನಿಮಾ, ನಟ ಯಶ್ ಹೇಳಿದ್ದೇನು..?

Writer: new waves technology
new waves technology
Apr 29
1 min read
ನಾವು ಮಾಡುವ ಕೆಲವು ಸಿನಿಮಾಗಳು ನಮ್ಮನ್ನು ಸಿನೆಮಾವನ್ನು ಪ್ರೀತಿಸಲು ಕಾರಣವಾದ ಕ್ಷಣಗಳನ್ನು ಮತ್ತೆ ನೆನಪಿಗೆ ತರುತ್ತವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ.
ನಾವು ಮಾಡುವ ಕೆಲವು ಸಿನಿಮಾಗಳು ನಮ್ಮನ್ನು ಸಿನೆಮಾವನ್ನು ಪ್ರೀತಿಸಲು ಕಾರಣವಾದ ಕ್ಷಣಗಳನ್ನು ಮತ್ತೆ ನೆನಪಿಗೆ ತರುತ್ತವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ‘ಟಾಕ್ಸಿಕ್’ ಸಿನಿಮಾ ರಿಲೀಸ್​ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ.

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಜೂನ್ 4ರಂದು ಬಿಡುಗಡೆಯಾಗುತ್ತಿಲ್ಲ. ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೋಷಿಸುವುದಾಗಿ ಯಶ್ ತಿಳಿಸಿದ್ದಾರೆ.

“ನಾವು ಮಾಡುವ ಕೆಲವು ಸಿನಿಮಾಗಳು ನಮ್ಮನ್ನು ಸಿನೆಮಾವನ್ನು ಪ್ರೀತಿಸಲು ಕಾರಣವಾದ ಕ್ಷಣಗಳನ್ನು ಮತ್ತೆ ನೆನಪಿಗೆ ತರುತ್ತವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ. ಸಿನಿಮಾಕಾನ್ ನಲ್ಲಿ ಚಿತ್ರವನ್ನು ಪ್ರದರ್ಶಿಸಿದ ನಂತರ ಜಾಗತಿಕ ಮಟ್ಟದಲ್ಲಿ ಬಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಸಿನಿಮಾವನ್ನು ವಿಶ್ವದಾದ್ಯಂತ ತಲುಪಿಸಬೇಕೆಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.

ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಜಾಗತಿಕ ವಿತರಣೆ ಹಾಗೂ ಪಾಲುದಾರಿಕೆಗಳ ವ್ಯವಸ್ಥೆಯನ್ನು ಸರಿಹೊಂದಿಸುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಮೊದಲು ಘೋಷಿಸಿದ್ದ ಜೂನ್ 4ರಂದು ಚಿತ್ರ ಬಿಡುಗಡೆಯಾಗುವುದಿಲ್ಲ. ಬದಲಾಗಿ, ಜಾಗತಿಕ ಮಟ್ಟದಲ್ಲಿ ಒಂದೇ ದಿನ ಬಿಡುಗಡೆಯಾಗುವಂತೆ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

“ಭಾರತೀಯ ಸಿನೆಮಾ ಜಾಗತಿಕ ವೇದಿಕೆಯಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿರುವ ಈ ಸಂದರ್ಭದಲ್ಲಿ, ನಾವು ನಮ್ಮ ಹೊಣೆಗಾರಿಕೆಯನ್ನು ಅರಿತು, ಚಿತ್ರದ ಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೇವೆ. ನಟ ಹಾಗೂ ನಿರ್ಮಾಪಕರಾಗಿ, ಈ ಚಿತ್ರವು ವಿಶ್ವದ ಪ್ರೇಕ್ಷಕರಿಗೆ ತಲುಪುವಾಗ ಅದಕ್ಕೆ ತಕ್ಕ ಪರಿಣಾಮ ಮೂಡಿಸಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಅವರು, ತಾಳ್ಮೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ನಾವು ಹೆಮ್ಮೆ ಪಡುವಂತಹ ಚಿತ್ರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Comments


bottom of page