ಅಮೆರಿಕ – ಇರಾನ್ ಮಾತುಕತೆ ದಿಢೀರ್ ರದ್ದು; ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಗೆ ಪ್ಯಾಲೆಸ್ಟೈನ್ ಆಗ್ರಹ
- new waves technology
- 7 hours ago
- 1 min read

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾದ ಮಹತ್ವದ ಶಾಂತಿ ಒಪ್ಪಂದದ ನಂತರ ಆರಂಭವಾಗಬೇಕಿದ್ದ ರಾಜತಾಂತ್ರಿಕ ಮಾತುಕತೆಗಳು ದಿಢೀರ್ ರದ್ದಾಗಿದ್ದು, ಇದರಿಂದ ಆತಂಕಗೊಂಡ ಪ್ಯಾಲೆಸ್ಟೈನ್, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.
ANI ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಈ ಪ್ರಮುಖ ಬೆಳವಣಿಗೆ ಕುರಿತು ಮಾತನಾಡಿದ ಭಾರತಕ್ಕೆ ಪ್ಯಾಲೆಸ್ಟೀನಿಯನ್ ರಾಯಭಾರಿ ಅಬ್ದುಲ್ಲಾ ಎಂ ಅಬು ಶವೇಶ್ ಅವರು, ಈ ಒಪ್ಪಂದಿಂದ ಯಾವುದೇ ಪಾಲುದಾರನಿಗೆ ಕಾರ್ಯತಂತ್ರದ ನಷ್ಟವಾಗುತ್ತದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಒಪ್ಪಂದವನ್ನು ಬಲವಾಗಿ ಸಮರ್ಥಿಸಿಕೊಂಡರು.
"ಶಾಂತಿ ಇದ್ದಾಗ, ಯಾರೂ ಸೋಲುವುದಿಲ್ಲ. ಎಲ್ಲರೂ ಗೆಲ್ಲುತ್ತಾರೆ" ಎಂದು ರಾಯಭಾರಿ ಅಬು ಶವೇಶ್ ಪ್ರತಿಪಾದಿಸಿದರು. "ಶಾಂತಿ ಎಂದರೆ, ಮತಾಂಧ ಇಸ್ರೇಲ್ ನ ಪ್ರಸ್ತುತ ಸರ್ಕಾರವನ್ನು ಹೊರತುಪಡಿಸಿ ಎಲ್ಲರಿಗೂ ಗೆಲುವು" ಎಂದು ರಾಯಭಾರಿ ಹೇಳಿದರು. ಈ ಉಗ್ರಗಾಮಿ ಬಣಗಳು ಯುದ್ಧವು ತಮ್ಮ ಏಕೈಕ ಲಾಭ ಎಂದು ನಂಬುತ್ತಾರೆ ಎಂದು ವಾಗ್ದಾಳಿ ನಡೆಸಿದರು.
"ಶಾವೇಶ್ ನಿರ್ದಿಷ್ಟವಾಗಿ "ಇಸ್ರೇಲ್ ವಿರೋಧ ಪಕ್ಷದ ರಾಜಕೀಯ ನಾಯಕರನ್ನು ಸಹ ಟೀಕಿಸಿದರು, ಅವರು ಶಾಂತಿಯನ್ನು ನಂಬುವುದಿಲ್ಲ ಮತ್ತು ಈ ಒಪ್ಪಂದವು ತಮ್ಮನ್ನು ಸೋಲಿಸಲು ಎಂದು ನಂಬುತ್ತಾರೆ". ಈ ಆಳವಾದ ಪ್ರಾದೇಶಿಕ ವಿಭಜನೆಗಳ ಹೊರತಾಗಿಯೂ, ರಾಯಭಾರಿ "ಶಾಂತಿ ಎಲ್ಲರಿಗೂ ಬಹಳ ಮುಖ್ಯ" ಎಂದು ಹೇಳಿದರು.
"ಇಂತಹ ಕಠಿಣ ಸಂದರ್ಭದಲ್ಲಿ ಪ್ರಮುಖ ಪಾತ್ರವನ್ನು ಯಾರು ವಹಿಸಬಹುದು? ಎಂಬ ಪ್ರಶ್ನೆಗೆ, 1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತ, ಅತಿದೊಡ್ಡ ಜಾಗತಿಕ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಅದರ ಸ್ಥಾನಮಾನ ಮತ್ತು ಅದರ ಅತಿ ದೊಡ್ಡ ಪ್ರಜಾಪ್ರಭುತ್ವದ ಬಗ್ಗೆ ಒತ್ತಿ ಹೇಳಿದ ರಾಯಭಾರಿ, "ಭಾರತವು ಬಹಳಷ್ಟು ಮಾಡಬಹುದು ಮತ್ತು ಅದನ್ನು ಭಾರತ ಮಾಡುತ್ತದೆ ಎಂದು ನನಗೆ ಖಚಿತವಾಗಿದೆ" ಎಂದು ಹೇಳಿದರು.
ಅಮೆರಿಕ – ಇರಾನ್ ಮಾತುಕತೆಯಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ ಅವರು, ನವದೆಹಲಿಯ ದೃಢ ನಿರ್ಧಾರವು ಈ ಪ್ರದೇಶದ ಭವಿಷ್ಯವನ್ನು ಯಶಸ್ವಿಯಾಗಿ ಮರುರೂಪಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತುಕತೆ ದಿಢೀರ್ ರದ್ದು
ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳು ದಿಢೀರ್ ರದ್ದಾಗಿವೆ. ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು ನಡೆಯಬೇಕಿದ್ದ ಈ ಉನ್ನತ ಮಟ್ಟದ ಸಭೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ನಿರ್ಣಾಯಕವಾಗಿತ್ತು. ಸ್ವಿಟ್ಜರ್ಲೆಂಡ್ ಸರ್ಕಾರದ ಆತಿಥ್ಯದಲ್ಲಿ ನಡೆಯಬೇಕಿದ್ದ ಈ ಮಾತುಕತೆಗೆ ಪ್ರಮುಖ ಜಾಗತಿಕ ಮಧ್ಯಸ್ಥಿಕೆದಾರರಾಗಿ ಕತಾರ್ ಮತ್ತು ಪಾಕಿಸ್ತಾನ ದೇಶಗಳು ಸಾಥ್ ನೀಡಿದ್ದವು. ಯುಎಸ್, ಇರಾನ್, ಕತಾರ್ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.





Comments