ಆ್ಯಂಡ್ರಾಯ್ಡ್ ಬಳಕೆದಾರರಿಗೆ 'ಎಮರ್ಜೆನ್ಸಿ ಲೊಕೇಶನ್ ಸರ್ವಿಸ್' ಲಭ್ಯ: ಹೀಗೆ ಬಳಸಿ
- new waves technology
- Dec 23, 2025
- 1 min read

ಭಾರತದ ಆ್ಯಂಡ್ರಾಯ್ಡ್ ಬಳಕೆದಾರರಿಗೆ ತುರ್ತು ಸಂದರ್ಭದಲ್ಲಿ ಬಳಸಲು 'ಎಮರ್ಜೆನ್ಸಿ ಲೊಕೇಶನ್ ಸರ್ವಿಸ್' ವ್ಯವಸ್ಥೆಯನ್ನು ಗೂಗಲ್ ಕಂಪನಿಯು ಮಂಗಳವಾರ ಪರಿಚಯಿಸಿದೆ.
ಅಮೆರಿಕದಲ್ಲಿ ಈ ಹಿಂದೆಯೇ ಗೂಗಲ್ ಮತ್ತು ಆ್ಯಪಲ್ 911 ಎಸ್‌ಒಎಸ್ ಜತೆಗೆ ಎಮರ್ಜೆನ್ಸಿ ಲೊಕೇಶನ್ ಸರ್ವಿಸ್ ಅನ್ನು ಪರಿಚಯಿಸಿದೆ. ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿದೆ.
ಆದರೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರು ಅಪಾಯ ಅಥವಾ ತೊಂದರೆಯಲ್ಲಿದ್ದಾಗ “ಎಮರ್ಜೆನ್ಸಿ ಲೊಕೇಶನ್ ಸರ್ವಿಸ್' ಆಯ್ಕೆ ಮೂಲಕ 112ಗೆ ನಿಮ್ಮ ಲೊಕೇಶನ್ ತಲುಪುವಂತೆ ಮಾಡಬಹುದು.










Comments