top of page

ಐಶ್ವರ್ಯ ರೈಯಂತೆ ತ್ರಿಶಾ ಕೃಷ್ಣನ್ ಗೆಟಪ್! ನೆಟ್ಟಿಗರ ಕುತೂಹಲವೇನು?

  • Writer: new waves technology
    new waves technology
  • 12 hours ago
  • 1 min read
ನಟ-ರಾಜಕಾರಣಿ ಭಾಷಣದಿಂದ ಹಿಡಿದು ಅವರ ಪವರ್ ಪುಲ್ ಡ್ರೆಸ್ಸಿಂಗ್ ವರೆಗೆ, ಕಾರ್ಯಕ್ರಮದ ಹಲವಾರು ವೀಡಿಯೊಗಳು ವೈರಲ್ ಆದವು.
ನಟ-ರಾಜಕಾರಣಿ ಭಾಷಣದಿಂದ ಹಿಡಿದು ಅವರ ಪವರ್ ಪುಲ್ ಡ್ರೆಸ್ಸಿಂಗ್ ವರೆಗೆ, ಕಾರ್ಯಕ್ರಮದ ಹಲವಾರು ವೀಡಿಯೊಗಳು ವೈರಲ್ ಆದವು.

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಮೇ 10 ರಂದು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 60 ವರ್ಷಗಳ ನಂತರ ತಮಿಳುನಾಡಿನಲ್ಲಿ ಡಿಎಂಕೆ-ಎಐಎಡಿಎಂಕೆ ಹೊರತುಪಡಿಸಿದ ಹೊಸ ಸರ್ಕಾರವನ್ನು ನೀಡಿದರು.

ನಟ-ರಾಜಕಾರಣಿ ಭಾಷಣದಿಂದ ಹಿಡಿದು ಅವರ ಪವರ್ ಪುಲ್ ಡ್ರೆಸ್ಸಿಂಗ್ ವರೆಗೆ, ಕಾರ್ಯಕ್ರಮದ ಹಲವಾರು ವೀಡಿಯೊಗಳು ವೈರಲ್ ಆದವು.

ಇದರ ನಡುವೆ ಗಮನ ಸೆಳೆದದ್ದು ತ್ರಿಶಾ ಕೃಷ್ಣನ್. ಐಸ್-ಬ್ಲೂ ಸಿಲ್ಕ್ ಸೀರೆ, ತಲೆಯಲ್ಲಿ ಮಲ್ಲಿಗೆ ಹೂ ಮುಡಿದು ಬಂದಿದ್ದ ತ್ರಿಶಾ ಸಮಾರಂಭದ ಆಕರ್ಷಣೆಯ ಕೇಂದ್ರಬಿಂದುವಾದರು. ವಿಜಯ್ ಅವರ ತಾಯಿಯನ್ನು ತಬ್ಬಿಕೊಂಡು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದರು.ತ್ರಿಶಾ ಧರಿಸಿದ್ದ ಐಸ್-ಬ್ಲೂ ಸಿಲ್ಕ್ ಸೀರೆ ಉಡುಪು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಲುಕ್ 2000ನೇ ಇಸವಿಯಲ್ಲಿ ಐಶ್ವರ್ಯ ರೈ ಧರಿಸಿದ್ದ ನೀಲಿ ಸೀರೆಯನ್ನು ನೆನಪಿಸುತ್ತಿದೆ ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ತ್ರಿಶಾ ಪೋಥಿಸ್‌ನಿಂದ (Pothys) ಐಸ್-ಬ್ಲೂ ಸಿಲ್ಕ್ ಸೀರೆ, ನಿರಾಮ್ (Niram) ವಿನ್ಯಾಸದ ಬ್ಲೌಸ್ ಮತ್ತು GRT ಜ್ಯುವೆಲ್ಲರ್ಸ್‌ನ ಆಭರಣಗಳನ್ನು ಧರಿಸಿದ್ದರು.

2000ನೇ ಇಸವಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾದಾಗ ಐಶ್ವರ್ಯ ರೈ ಧರಿಸಿದ್ದ ನೀಲಿ ಸೀರೆಯೇ ತ್ರಿಶಾ ಅವರ ಉಡುಗೆಗೆ ಸ್ಫೂರ್ತಿಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ತ್ರಿಶಾ ಅವರ ಈ ಸಾಂಪ್ರದಾಯಿಕ ಮತ್ತು ಸರಳ ಲುಕ್ ಅನ್ನು 'ಟೈಮ್‌ಲೆಸ್' ( timeless) ಎಂದು ಕರೆಯಲಾಗುತ್ತಿದೆ ಮತ್ತು ಇಬ್ಬರ ಹಳೆಯ ಮತ್ತು ಹೊಸ ಫೋಟೋಗಳನ್ನು ಹೋಲಿಸಿ ವೈರಲ್ ಮಾಡಲಾಗುತ್ತಿದೆ. ನಟಿ ತ್ರಿಶಾ ಅವರ ಈ ನೋಟವು ತಮಿಳು ಚಿತ್ರರಂಗದ ಅಭಿಮಾನಿಗಳಲ್ಲಿ 'ನಂದಿನಿ-ಕುಂದವೈ' (ಪೊನ್ನಿಯಿನ್ ಸೆಲ್ವನ್ ಚಿತ್ರದ ಪಾತ್ರಗಳು) ನೆನಪನ್ನು ಮರಳಿ ತಂದಿದೆ.

Comments


bottom of page