top of page

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರ್‌ಎಸ್‌ಎಸ್‌ ಧ್ವಜ ಯಾತ್ರೆ

Writer: new waves technology
new waves technology
Feb 6
1 min read

ಶ್ರೀನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕುರಿತಾಗಿ 'ತಪ್ಪು ಕಲ್ಪನೆಗಳನ್ನು' ನಿವಾರಿಸುವ ಉದ್ದೇಶದಿಂದ ಶುಕ್ರವಾರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ‘ಧ್ವಜ ಯಾತ್ರೆ' ಆರಂಭವಾಗಿದೆ.

ಇಲ್ಲಿನ ಐತಿಹಾಸಿಕ ಲಾಲ್‌ಚೌಕ್‌ನಿಂದ ಯಾತ್ರೆ ಆರಂಭವಾಯಿತು. ನೂರಾರು ಕಾರ್ಯಕರ್ತರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ತೆರಳಿದರು.

ಆರ್‌ಎಸ್‌ಎಸ್‌ ಕೆಲ ಜನರ ವಿರುದ್ಧ ಇದೆ ಎಂಬ 'ತಪ್ಪು ಕಲ್ಪನೆಯನ್ನು ನಿವಾರಿಸುವುದೇ ಈ ಯಾತ್ರೆಯ ಉದ್ದೇಶ. ಈ ಮೂಲಕ ನಾವು ಜನರಿಗೆ ಸರಿಯಾದ ಸಂದೇಶ ರವಾನಿಸುವುದಾಗಿದೆ ಎಂದುಆರ್‌ಎಸ್‌ಎಸ್‌ನ ವೀರ ಕಪೂರ್ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಪ್ರಾರಂಭವಾಗಿ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಘಟನೆ ಮಾಡಿದ ಕಾರ್ಯಗಳನ್ನು ಪ್ರತಿಬಿಂಬಿಸುವ 'ಶತಕ್' ಎಂಬ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು. ಆ ಚಿತ್ರ ಫೆಬ್ರುವರಿ 19ರಂದು ಬಿಡುಗಡೆಯಾಗಲಿದೆ.

Comments


bottom of page