ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆಪ್ರಜಾವಾಣಿ ವೆಬ್ ಡೆಸ್ಕ್
- new waves technology
- Dec 23, 2025
- 1 min read

ಬೆಂಗಳೂರು: 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಇಬ್ಬರಿಗೆ ಪುಸ್ತಕ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ. ಬೆಂಗಳೂರು ನಗರ ಜಿಲ್ಲೆಯ ಸಿದ್ದರಾಜು (ನೀಲಗಾರರ ಪದ, ತಂಬೂರಿ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಚ್ಚಮ (ಸೋಬಾನೆ), ಬೆಂಗಳೂರು ದಕ್ಷಿಣ ಜಿಲ್ಲೆಯ ಬಿ. ಸಿದ್ದರಾಜಯ್ಯ (ಜಾನಪದ ಗಾಯನ), ಕೋಲಾರ ಜಿಲ್ಲೆಯ ಸೀತಮ್ಮ (ತತ್ವಪದ & ಸೋಬಾನೆ), ಚಿಕ್ಕಬಳ್ಳಾಪುರ ಜಿಲ್ಲೆಯ ಕೆ.ಎಂ.ನಾರಾಯಣಸ್ವಾಮಿ (ಕೀಲು ಕುದುರೆ), ತುಮಕೂರು ಜಿಲ್ಲೆಯ ರೇವಣ್ಣ (ಅಲಗು ಕುಣಿತ), ದಾವಣಗೆರೆ ಜಿಲ್ಲೆಯ ಪರಮೇಶ್ವರಪ್ಪ ಕತ್ತಿಗೆ (ಏಕತಾರಿ ಪದಗಳು), ಚಿತ್ರದುರ್ಗ ಜಿಲ್ಲೆಯ ಜಿ.ಎನ್.ವಿರೂಪಾಕ್ಷಪ್ಪ (ಜಾನಪದ ಸಂಗೀತ), ಶಿವಮೊಗ್ಗ ಜಿಲ್ಲೆಯ ಕೆ.ಎಸ್.ಲಿಂಗಪ್ಪ (ಅಂಟಿಕೆ ಪಿಂಟಿಕೆ), ಮೈಸೂರು ಜಿಲ್ಲೆಯ ಚನ್ನಾಜಮ್ಮ (ಸೋಬಾನೆ ಪದ & ಜಾನಪದ ಗಾಯನ), ಮಂಡ್ಯ ಜಿಲ್ಲೆಯ ಹೊನ್ನಯ್ಯ (ಕೋಲಾಟ), ಹಾಸನ ಜಿಲ್ಲೆಯ ಯೋಗೇಂದ್ರ ದುದ್ದ (ಗೀಗೀ ಪದ & ಲಾವಣಿ, ಭಜನೆ)
ಚಿಕ್ಕಮಗಳೂರು ಜಿಲ್ಲೆಯ ರವಿ (ವೀರಗಾಸೆ), ಚಾಮರಾಜನಗರ ಜಿಲ್ಲೆಯ ಬಸವರಾಜು (ಗೊರುಕನ ನೃತ್ಯ), ದಕ್ಷಿಣ ಕನ್ನಡ ಜಿಲ್ಲೆಯ ಸಮತಿ ಕೊರಗ (ಕೊರಗರ ಡೋಲು), ಉಡುಪಿ ಜಿಲ್ಲೆಯ ಗುಲಾಬಿ ಗೌಡ್ತಿ (ನಾಟಿ ವೈದ್ಯೆ), ಕೊಡಗು ಜಿಲ್ಲೆಯ ಅಮ್ಮಣಿ (ಸೂಲಗಿತ್ತಿ, ಕುಡಿಯ ಜನಾಂಗದ ಹಾಡುಗಾರಿಕೆ), ಬೆಳಗಾವಿ ಜಿಲ್ಲೆಯ ಭೀಮಪ್ಪ ಸಿದ್ದಪ್ಪ ಮುತ್ನಾಳ್ (ಪುರವಂತಿಕೆ), ಧಾರವಾಡ ಜಿಲ್ಲೆಯ (ಜಾನಪದ ನೃತ್ಯ), ವಿಜಯಪುರ ಜಿಲ್ಲೆಯ ಜ್ಯೋತಿರ್ಲಿಂಗ ಹೊನಕಟ್ಟಿ (ಜಾನಪದ ಗಾಯನ), ಬಾಗಲಕೋಟೆ ಜಿಲ್ಲೆಯ ಚಂದ್ರಲಿಂಗಪ್ಪ (ಪುರವಂತಿಕೆ), ಉತ್ತರ ಕನ್ನಡ ಜಿಲ್ಲೆಯ ಗೌರಿ ನಾಗಪ್ಪ (ಸಂಪ್ರದಾಯದ ಪದಗಳು), ಹಾವೇರಿ ಜಿಲ್ಲೆಯ ಭಿಕ್ಷಾಪತಿ ಸುಂಕಪ್ಪ (ಹಗಲುವೇಷ), ಗದಗ ಜಿಲ್ಲೆಯ ಕಾಶೀಮಸಾಬ ಹುಸೇನಸಾಬ (ಹೆಜ್ಜೆ ಮೇಳೆ), ಕಲಬುರಗಿ ಜಿಲ್ಲೆಯ ಭಾಗಪ್ಪ (ಜಾನಪದ ಗಾಯನ), ಬೀದರ್ ಜಿಲ್ಲೆಯ ಇಂದ್ರಮ್ಮ (ಮೊಹರಂ ಪದ), ರಾಯಚೂರು ಜಿಲ್ಲೆಯ ಯಂಕನಗೌಡ (ತತ್ವಪದ & ಜಾನಪದ ಗಾಯನ), ಕೊಪ್ಪಳ ಜಿಲ್ಲೆಯ ರಾಮಣ್ಣ (ಹಗಲುವೇಷ), ವಿಜಯನಗರ ಜಿಲ್ಲೆಯ ಕಿಂಡ್ರಿ ಲಕ್ಷ್ಮೀಪತಿ, ಯಾದಗಿರಿ ಜಿಲ್ಲೆಯ ಹನುಮಂತ (ರಿವಾಯತ್ ಪದಗಳು)










Comments